More

    ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್ ಬೆಂಬಲಿಸಿ : ಮಾಜಿ ಸಚಿವ ಸೋಮಶೇಖರ್ ಮನವಿಬಿಜೆಪಿ ವಿರುದ್ಧ ವಾಗ್ದಾಳಿ



    ಮಂಡ್ಯ : ಬಿಜೆಪಿಯು ದಿನದಿಂದ ದಿನಕ್ಕೆ ಸಂವಿಧಾನವನ್ನು ದುರ್ಬಲಗೊಳಿಸುತ್ತಿದ್ದು, ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ನಾಶಪಡಿಸಲಿದೆ. ಹೀಗಾಗಿ ಅಂಬೇಡ್ಕರ್ ನೀಡಿರುವ ಸಂವಿಧಾನದ ರಕ್ಷಣೆ ಮತ್ತು ಉಳಿವಿಗಾಗಿ ಕಾಂಗ್ರೆಸ್ ಪಕ್ಷ ಬೆಂಬಲಿಸಿ ಎಂದು ಮಾಜಿ ಸಚಿವ ಸೋಮಶೇಖರ್ ಹೇಳಿದರು.


    ಬಿಜೆಪಿಯು ಸಂವಿಧಾನದ ಆಶಯವನ್ನು ಬಲಿಕೊಡುತ್ತಿದೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಳಿಸಿ ಏಕಚಕ್ರಾಧಿಪತ್ಯದ ಸಾಮ್ರಾಜ್ಯ ಕಟ್ಟಲು ಮುಂದಾಗಿದೆ. ಧರ್ಮ, ಜಾತಿಗಳ ನಡುವೆ ಎತಿ ್ತಕಟ್ಟಿ ರಾಜಕಾರಣ ಮಾಡುವುದು ಬಿಜೆಪಿ ತಂತ್ರವಾಗಿದೆ ಎಂದು ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಾಗಮಂಗಲದಲ್ಲಿ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.


    ಬಿಜೆಪಿ ಕೋಮುವಾದ ಪಕ್ಷವಾಗಿದ್ದು, ಅದನ್ನು ಧಿಕ್ಕರಿಸಿ ಕಾಂಗ್ರೆಸ್ ಪಕ್ಷವನ್ನು ರಾಜ್ಯ ಹಾಗೂ ದೇಶದಲ್ಲಿ ಅಧಿಕಾರಕ್ಕೆ ತರಬೇಕಿದೆ. ಈಗಾಗಲೇ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಸ್ಕಾಲರ್‌ಶಿಪ್‌ಗಳನ್ನು ಬಿಜೆಪಿ ನೇತೃತ್ವದ ಸರ್ಕಾರ ನಿಲ್ಲಿಸಿದೆ. ದೇಶದಲ್ಲಿ ನರೇಂದ್ರ ಮೋದಿ ಪ್ರಧಾನಿ ಆಗುವುದಕ್ಕಿಂತ ಮೊದಲು ಸಿಬಿಐ, ಇಡಿ, ಐಟಿ, ನ್ಯಾಯಾಂಗ ವ್ಯವಸ್ಥೆಗಳು ಯಾವುದೇ ಸರ್ಕಾರಗಳ ಮಧ್ಯ ಪ್ರವೇಶವಿಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದವು. ಆದರೀಗ ಈ ಎಲ್ಲ ಸಂಸ್ಥೆಗಳನ್ನು ನರೇಂದ್ರ ಮೋದಿ ತಮ್ಮ ಹಿಡಿದಿಟ್ಟುಕೊಂಡಿದ್ದಾರೆ. ಈ ಎಲ್ಲ ತನಿಖಾ ಸಂಸ್ಥೆಗಳಿಗೆ ಮಧ್ಯ ಪ್ರವೇಶಿಸಿ ಅವುಗಳನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.


    ನಾನು ಈ ಹಿಂದೆ ಜನತಾ ಪರಿವಾರದಲ್ಲಿದ್ದಾಗ ಪ್ರಾಥಮಿಕ, ಉನ್ನತ ಶಿಕ್ಷಣ, ಕಂದಾಯ ಸಚಿವನಾಗಿ ಇಡೀ ದೇಶವೇ ರಾಜ್ಯದತ್ತ ತಿರುಗಿ ನೋಡುವಂತೆ ಅನೇಕ ಕ್ರಾಂತಿಕಾರಿ ಬದಲಾವಣೆ ತಂದಿದ್ದೆ. ಆದರೆ, ಸಂವಿಧಾನ ಹಾಗೂ ಅಂಬೇಡ್ಕರ್ ಬಗ್ಗೆ ಅಪಾರ ಗೌರವ, ಪ್ರೀತಿ ತೋರುವಂತೆ ನಾಟಕವಾಡಿದ ಬಿಜೆಪಿಯನ್ನು ನಂಬಿ ಪಕ್ಷ ಸೇರ್ಪಡೆಗೊಂಡಿದ್ದೆ. ಆದರೆ, ನರೇಂದ್ರ ಮೋದಿ ಅವರ ಎರಡನೇ ಅವಧಿಯ ಸರ್ಕಾರದ ನಡೆ ಕಂಡು ತುಂಬಾ ಬೇಸರವಾಗಿದೆ. ಸಂವಿಧಾನದ ಆಶಯಗಳನ್ನು ಸಂಪೂರ್ಣವಾಗಿ ಬಲಿಕೊಡುತ್ತಿದೆ. ನನ್ನ ರಾಜಕೀಯ ಅಂತ್ಯವಾಗಲು ಬಿಜೆಪಿಯೇ ಕಾರಣ. ಇದರಿಂದ ಬೇಸತ್ತು ಸಂವಿಧಾನದ ರಕ್ಷಣೆಗಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮನ್ಮುಲ್ ಮಾಜಿ ಅಧ್ಯಕ್ಷ ಜವರೇಗೌಡ, ಪರಿಶಿಷ್ಟ ಜಾತಿ ಮತ್ತು ಪಂಗಡದ ಅಧ್ಯಕ್ಷ ಮಹೇಶ್, ಮುಖಂಡರಾದ ಚಂದ್ರು, ನರಸಿಂಹ, ಶಿವಣ್ಣ, ತುರುಬನಹಳ್ಳಿ ರಾಜೇಗೌಡ, ಎಚ್.ಟಿ.ಕೃಷ್ಣೇಗೌಡ, ನಾಗರಾಜಯ್ಯ, ಪ್ರಸನ್ನ ಮತ್ತಿತರಿದ್ದರು.

    ಕರಿನಾಗರ ಹಾವಿದ್ದಂತೆ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿರುವುದು ಸರಿಯಿದೆ. ನರೇಂದ್ರ ಮೋದಿ ಮಾತ್ರವಲ್ಲ, ಅವರ ಕೆಳಗಡೆ ಇರುವಂತಹ ಸಂತೋಷ್ ಅಂತಹವರೆಲ್ಲ ಬಹಳ ಕೆಟ್ಟ ವ್ಯಕ್ತಿಗಳಾಗಿದ್ದು, ಕರಿನಾಗರ ಹಾವಿದ್ದಂತೆ. ರಾಜ್ಯ ಹಾಗೂ ರಾಷ್ಟ್ರದಲ್ಲಿ ಬಿಜೆಪಿ ಒಂದು ರೀತಿಯ ವಿಷಜಂತುಗಳ ಪಕ್ಷವಾಗಿ ಹಬ್ಬಿದೆ. ನರೇಂದ್ರ ಮೋದಿಯನ್ನು ವಿಶ್ವಗುರು ಅಂತ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಅವರು ಸುಳ್ಳುಗಳ ವಿಶ್ವ ಗುರು ಆಗಿದ್ದಾರೆ. ರಾಹುಲ್ ಗಾಂಧಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಯಾವುದನ್ನೂ ಮಾತನಾಡಿಲ್ಲ. ಆದರೆ, ಅವರನ್ನು ಸಂಸದ ಸ್ಥಾನದಿಂದ ಅಮಾನತುಗೊಳಿಸಿದರು ಎಂದು ಮಾಜಿ ಸಚಿವ ಸೋಮಶೇಖರ್ ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts