More

    ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ

    ಅರಕಲಗೂಡು: ಇಲ್ಲಿಯ ಆರ್ಯ ವೈಶ್ಯ ಮಂಡಳಿ, ಕನ್ನಿಕಾ ಮಹಲ್ ಸಮಿತಿ, ವಾಸವಿ ಸೇವಾ ಕ್ಷೇತ್ರ ಟ್ರಸ್ಟ್, ಆರ್ಯವೈಶ್ಯ ಮಹಾಸಭಾ ಜಿಲ್ಲಾ ಸಮಿತಿ ಹಾಗೂ ಪ್ರಸನ್ನ ನಂಜುಂಡೇಶ್ವರಸ್ವಾಮಿ ಮತ್ತು ಕನ್ನಿಕಾ ಪರಮೇಶ್ವರಿ ದೇವಾಲಯ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯಿಂದ ಶ್ರೀನಿವಾಸ ಕಲ್ಯಾಣೋತ್ಸವ ಜರುಗಿತು.

    ಪಟ್ಟಣದ ಕನ್ನಿಕಾ ಮಹಲ್‌ನಲ್ಲಿ ಭಾನುವಾರ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಶ್ರೀದೇವಿ, ಭೂದೇವಿಯರ ಜತೆ ಶ್ರೀನಿವಾಸ ಸ್ವಾಮಿಗೆ ಕಲ್ಯಾಣ ನಡೆಸಲಾಯಿತು. ವಧು ನೋಡುವುದು, ಲಗ್ನ ನಿಶ್ಚಯ, ಲಗ್ನಪತ್ರಿಕೆ ಶಾಸ್ತ್ರ, ವರಪೂಜೆ, ಕಾಶಿಯಾತ್ರೆ, ಮಾಂಗಲ್ಯ ಧಾರಣೆ, ಹೋಮ ಮುಂತಾದ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಯಿತು.

    ಮಧ್ಯಾಹ್ನ 12ಕ್ಕೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಸಲಾಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀನಿವಾಸನ ಕಲ್ಯಾಣವನ್ನು ಕಣ್ತುಂಬಿಕೊಂಡರು. ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. ಉತ್ತಮ ಮಳೆ, ಬೆಳೆಯಾಗಿ, ರೋಗರುಜಿನಗಳು ದೂರಾಗಿ, ಶಾಂತಿ ನೆಮ್ಮದಿ ನೆಲೆಸುವಂತೆ ಕೋರಿ ಲೋಕ ಕಲ್ಯಾಣಾರ್ಥವಾಗಿ ಈ ಕಾರ್ಯಕ್ರಮ ಆಯೋಜಿಸಿರುವುದಾಗಿ ಶ್ರೀನಿವಾಸ ಕಲ್ಯಾಣ ಸೇವಾ ಸಮಿತಿ ಗೌರವಾಧ್ಯಕ್ಷ ಕೆ.ಆರ್. ನಾರಾಯಣ್ ತಿಳಿಸಿದರು.

    ಸಮಿತಿಯ ಅಧ್ಯಕ್ಷ ಎ .ಎಸ್. ಶ್ರೀನಿವಾಸ್, ಉಪಾಧ್ಯಕ್ಷ ಕೆ.ವಿ. ರವಿಕುಮಾರ್ ಬಾಲಾಜಿ, ಕಾರ್ಯದರ್ಶಿ ಎಚ್. ಕಿರಣ್ ಕುಮಾರ್, ಸಹಕಾರ್ಯದರ್ಶಿ ಎಸ್.ಆರ್.ನಾಗೇಂದ್ರ ಪ್ರಸಾದ್, ಪಿ .ಎಸ್. ನಾಗೇಂದ್ರ ಪ್ರಸಾದ್, ಖಜಾಂಚಿ ಎಚ್.ವಿ .ನಾಗರಾಜ್ ಆರ್ಯ ವೈಶ್ಯ ಮಂಡಳಿ ಗೌರವ ಅಧ್ಯಕ್ಷ ಪಿ.ಎನ್. ಶಾಂತಕುಮಾರ್, ಅಧ್ಯಕ್ಷ ಪಿ.ಎನ್.ರಂಗನಾಥ್, ಕಾರ್ಯದರ್ಶಿ ಶ್ರೀಧರ್, ಕನ್ನಿಕಾ ಮಹಲ್ ಸಮಿತಿ ಅಧ್ಯಕ್ಷ ಎ. ಎಸ್. ವೆಂಕಟೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts