More

    ಶಿವಾಜಿ ಪ್ರತಿಮೆ, ಮ್ಯೂಸಿಯಂಗೆ ಮೂರು ಕೋಟಿ ರೂ. ಮಂಜೂರು

    ಕಾರವಾರ: ತಾಲೂಕಿನ ಸದಾಶಿವಗಡ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ, ಮ್ಯೂಸಿಯಂ ಹಾಗೂ ಉದ್ಯಾನ ನಿರ್ವಣಕ್ಕೆ ಸರ್ಕಾರ 3 ಕೋಟಿ ರೂ. ಮಂಜೂರಿ ಮಾಡಿದೆ ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.

    ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಕುರಿತು ಸರ್ಕಾರದ ಹಿಂದಿನ ಕನ್ನಡ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರನ್ನು ಸ್ಥಳಕ್ಕೆ ಕರೆದೊಯ್ದು ತೋರಿಸಲಾಗಿತ್ತು. ಕೋಟೆಯ ಮಹತ್ವದ ಕುರಿತು ಗಮನ ಸೆಳೆದು, ಅಭಿವೃದ್ಧಿ ಮಾಡುವ ಅಗತ್ಯದ ಬಗ್ಗೆ ಅವರಿಗೆ ಮನವರಿಕೆ ಮಾಡಿ, ಅನುದಾನ ಬಿಡುಗಡೆಗೆ ಮನವಿ ಮಾಡಲಾಗಿತ್ತು. ಅದಕ್ಕೆ ಸ್ಪಂದನೆ ದೊರೆತಿದೆ. ಸದ್ಯ 1.5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಸದಾಶಿವಗಡ ಗುಡ್ಡದ ಮೇಲಿಂದ ಕಾಳಿ ನದಿ ಅರಬ್ಬಿ ಸಮುದ್ರ ಸೇರುವ ಸಂಗಮ, ಸೂರ್ಯಾಸ್ತದ ನಯನ ಮನೋಹರ ದೃಶ್ಯ ಕಾಣಲಿದೆ. ಅಲ್ಲದೆ, ರಾಷ್ಟ್ರ ಪ್ರೇಮದ ಜಾಗೃತಿ ಮೂಡಿಸುವ ಪ್ರತಿಮೆ ಜನ್ಮ ತಳೆಯಲಿದೆ ಎಂದು ಅವರು ವಿವರಿಸಿದ್ದಾರೆ.

    ಸ್ವಂತ ಖರ್ಚಿನಲ್ಲಿ ರಿಕ್ಷಾ ನಿಲ್ದಾಣ ನಿರ್ವಿುಸಿಕೊಟ್ಟ ಶಾಸಕಿ: ನಗರದ ಶಿವಾಜಿ ವೃತ್ತದಲ್ಲಿ ಆಟೋ ರಿಕ್ಷಾ ಚಾಲಕರಿಗೆ ಶಾಸಕಿ ರೂಪಾಲಿ ನಾಯ್ಕ ತಮ್ಮ ಸ್ವಂತ ಖರ್ಚಿನಲ್ಲಿ ನಿಲ್ದಾಣ ನಿರ್ವಿುಸಿಕೊಟ್ಟಿದ್ದಾರೆ.

    ಮಳೆ, ಬಿಸಿಲಿನಲ್ಲಿ ತೊಂದರೆ ಉಂಟಾಗುತ್ತಿರುವ ಕುರಿತು ಆಟೋ ರಿಕ್ಷಾ ಚಾಲಕರು ಶಾಸಕಿ ರೂಪಾಲಿ ಅವರಿಗೆ ವಿವರಿಸಿದ್ದರು. ಸ್ಪಂದಿಸಿದ ಶಾಸಕಿ ಶೀಟ್ ಹಾಕಿ ನೆರಳಾಗುವ ವ್ಯವಸ್ಥೆ ಮಾಡಿದ್ದಾರೆ. ನಿಲ್ದಾಣವನ್ನು ಉದ್ಘಾಟಿಸಿದ ಅವರು, ಕರೊನಾ ಕಾಲಘಟ್ಟದಲ್ಲಿ ಆಟೋ ಚಾಲಕರ ಕಾರ್ಯ ಶ್ಲಾಘನೀಯ ಎಂದರು. ನಗರಸಭೆ ಉಪಾಧ್ಯಕ್ಷ ಪ್ರಕಾಶ ನಾಯ್ಕ, ಬಿಜೆಪಿ ಮುಖಂಡರಾದ ಗಣಪತಿ ಉಳ್ವೇಕರ್, ಸುಭಾಷ ಗುನಗಿ, ಪ್ರಸಾದ ಕಾರವಾರಕರ್, ನಾಗೇಶ ಕುರ್ಡೆಕರ್ ಇದ್ದರು.

    ಸೋದೆ ಅರಸರ ಆಳ್ವಿಕೆಯಲ್ಲಿದ್ದ ಸದಾಶಿವಗಡಕ್ಕೆ ಛತ್ರಪತಿ ಶಿವಾಜಿ ಮಹಾರಾಜರು 1665 ಫೆಬ್ರವರಿ 21ರಂದು ಭೇಟಿ ನೀಡಿದ್ದರು. ಅವರ ಭೇಟಿಯ ನೆನಪನ್ನು ಚಿರಸ್ಥಾಯಿಯಾಗಿಡಲು ಈ ಕೋಟೆ ಕುರುಹಾಗಿದೆ. ಅದರ ಅಭಿವೃದ್ಧಿಯ ನನ್ನ ಕನಸು ನನಸಾಗಿದೆ. ರೂಪಾಲಿ ಎಸ್.ನಾಯ್ಕ ಶಾಸಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts