More

    ಶಿವಮೊಗ್ಗ-ಹಾನಗಲ್ ಹೆದ್ದಾರಿಗೆ ಪ್ರಸ್ತಾವನೆ

    ಶಿಕಾರಿಪುರ: ಶಿವಮೊಗ್ಗ-ಹಾನಗಲ್ ರಸ್ತೆಯನ್ನು 420 ಕೋಟಿ ರೂ. ವೆಚ್ಚದಲ್ಲಿ ವಿಸ್ತರಿಸಿ ರಾಜ್ಯ ಹೆದ್ದಾರಿಯಾಗಿ ಅಭಿವೃದ್ಧಿಪಡಿಸಲಾಗಿದ್ದು, ಈಗ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

    ಪಟ್ಟಣದ ಐಬಿ ಸರ್ಕಲ್​ನಲ್ಲಿ ಶನಿವಾರ ಪುರಸಭೆ ಮತ್ತು ಕೆಶಿಪ್​ನಿಂದ ಹೆದ್ದಾರಿಗೆ ಅಲಂಕಾರಿಕ ದೀಪಗಳ ಜೋಡಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೂರೂವರೆ ಕೋಟಿ ರೂ. ವೆಚ್ಚದಲ್ಲಿ ಕುಮದ್ವತಿ ಕಾಲೇಜಿನಿಂದ ಕುಮದ್ವತಿ ಸೇತುವೆವರೆಗೆ 6 ಕಿಮೀವರೆಗೆ ರಸ್ತೆ ವಿಭಜಕಗಳಿಗೆ ದಾವಣಗೆರೆ ಹೆದ್ದಾರಿ ಮಾದರಿಯಲ್ಲಿ ವಿದ್ಯುತ್ ದೀಪ ಜೋಡಿಸಲಾಗುವುದು ಎಂದರು.

    ಪ್ರಸ್ತುತ ಹೆದ್ದಾರಿಯಾದ ಕಾರಣ ಶಿವಮೊಗ್ಗ-ಹುಬ್ಬಳ್ಳಿ ನಡುವೆ 40 ಕಿಮೀ ಅಂತರ ಕಡಿಮೆ ಆಗಿದ್ದು ಸಾರ್ವಜನಿಕರು, ರೈತರಿಗೆ ಅನುಕೂಲವಾಗಿದೆ. ತಾಲೂಕಿನಲ್ಲಿ ಜನರ ಅನುಕೂಲಕ್ಕಾಗಿ ಟೋಲ್ ಸಂಗ್ರಹ ಮಾಡುತ್ತಿಲ್ಲ ಎಂದು ಹೇಳಿದರು.

    ತಾಲೂಕಿನ ಸಾರಿಗೆ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿದ್ದು 5.5‰ ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ, ಕುಟ್ರಹಳ್ಳಿಯ ನಾಲ್ಕೂವರೆ ಎಕರೆ ಪ್ರದೇಶದಲ್ಲಿ ಕೆಎಸ್​ಆರ್​ಟಿಸಿ ಡಿಪೋ ನಿರ್ಮಾಣ ಕಾಮಗಾರಿ ನಡೆಯುತ್ತಿವೆ. ಡಿಪೋ ಆದರೆ ತಾಲೂಕಿನ ಪ್ರತಿ ಹಳ್ಳಿಗಳಿಗೂ ಕೆಎಸ್​ಆರ್​ಟಿಸಿ ಬಸ್ ಸಂಚರಿಸುತ್ತವೆ ಎಂದರು.

    ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಂ.ಬಿ.ಚನ್ನವೀರಪ್ಪ, ತಾಪಂ ಪ್ರಭಾರ ಅಧ್ಯಕ್ಷೆ ಪ್ರೇಮಾಲೋಕೇಶ್, ಜಿಪಂ ಸದಸ್ಯೆ ಮಮತಾ ಸಾಲಿ ಎಪಿಎಂಸಿ ಅಧ್ಯಕ್ಷ ರುದ್ರಮುನಿ, ಮಾಜಿ ಅಧ್ಯಕ್ಷ ತಾಳಗುಂದ ಸತೀಶ್, ಪುರಸಭೆ ಸದಸ್ಯರಾದ ಪಾಲಾಕ್ಷಪ್ಪ, ರೇಣುಕಸ್ವಾಮಿ, ಉಳ್ಳಿ ದರ್ಶನ್, ಪ್ರಶಾಂತ್ ಜೀನಳ್ಳಿ, ನಾಗರಾಜಗೌಡ, ಪುರಸಭೆ ಮುಖ್ಯಾಧಿಕಾರಿ ಸುರೇಶ್, ಟಿಎಚ್​ಒ ಡಾ. ಚಂದ್ರಪ್ಪ, ಕೆ.ಎಸ್.ಹುಚ್ರಾಯಪ್ಪ, ಡಿ.ಎಸ್.ಈಶ್ವರಪ್ಪ ಇತರರಿದ್ದರು.

    150 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆಯನ್ನು 250 ಹಾಸಿಗೆಯ ಆಸ್ಪತ್ರೆಯನ್ನಾಗಿ ಮಾಡಿ ಮೇಲ್ದರ್ಜೆಗೇರಿಸಲು ಸಿಎಂ ಬಿ.ಎಸ್. ಯಡಿಯೂರಪ್ಪ ಆದೇಶಿಸಿದ್ದಾರೆ. ಚನ್ನಕೇಶವ ನಗರದಲ್ಲಿ 16 ಕೋಟಿ ರೂ. ವೆಚ್ಚದಲ್ಲಿ 60 ಹಾಸಿಗೆಗಳ ಆಸ್ಪತ್ರೆಯ ಕಾಮಗಾರಿ ವೇಗವಾಗಿ ನಡೆಯುತ್ತಿದೆ.

    | ಬಿ.ವೈ.ರಾಘವೇಂದ್ರ, ಲೋಕಸಭಾ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts