More

    ಶಿವಮೊಗ್ಗದಲ್ಲಿ ಸಂಡೇ ಕರ್ಫ್ಯೂ ಆಟಕ್ಕುಂಟು, ಲೆಕ್ಕಕ್ಕಿಲ್ಲ

    ಶಿವಮೊಗ್ಗ: ಕರೊನಾ ವೈರಸ್ ಹರಡá-ವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಜಾರಿಗೊಳಿಸಿರá-ವ ಭಾನುವಾರದ ಕರ್ಫ್ಯೂ ಶಿವಮೊಗ್ಗದಲ್ಲಿ ಮಾತ್ರ ಆಟಕ್ಕುಂಟ ಲೆಕ್ಕRಲ್ಲ ಎಂಬಂತಾಗಿತ್ತು. ಆದರೆ ಜಿಲ್ಲೆಯ ಬೇರೆ ಕಡೆಗಳಲ್ಲಿ ಉತ್ತಮ ಪ್ರತಿÅಯೆ ವ್ಯಕ್ತವಾಗಿದ್ದು ಯಶಸ್ವಿಯೂ ಆಯಿತು.

    ನಗರದಲ್ಲಿ ವ್ಯಾಪಾರ-ವಹಿವಾಟು ಸಂಪೂರ್ಣ ಸ್ತಬ್ಧಗೊಂಡಿತ್ತು. ಶನಿವಾರ ರಾತ್ರಿಯಿಂದ ವರ್ತಕರು ಅಂಗಡಿ ಬಂದ್ ಮಾಡಿ ಕರ್ಫ್ಯೂಗೆ ಬೆಂಬಲ ಸೂಚಿಸಿದ್ದರು. ಹೋಟೆಲ್, ಶಾಪಿಂಗ್ ಮಾಲ್, ಲಾಡ್ಜ್​ಗಳನ್ನು ಮುಚ್ಚಲಾಗಿತ್ತು. ಖಾಸಗಿ ಮತ್ತು ಕೆಎಸ್ಸಾರ್ಟಿಸಿ ಬಸ್​ಗಳ ಸಂಚಾರ ಇರಲಿಲ್ಲ. ಹಾಲು, ತರಕಾರಿ ಸೇರಿ ಅಗತ್ಯ ವಸ್ತುಗಳಿಗೆ ಮಾತ್ರ ಅವಕಾಶವಿತ್ತು. ಆಸ್ಪತ್ರೆಗಳು ಎಂದಿನಂತೆ ತೆರೆದಿದ್ದರೂ ರೋಗಿಗಳ ಸಂಖ್ಯೆ ವಿರಳವಾಗಿತ್ತು.

    ಸದಾ ಜನದಟ್ಟಣೆಯಿಂದ ಕೂಡಿರುತ್ತಿದ್ದ ಗಾಂಧಿಬಜಾರ್, ನೆಹರು ರಸ್ತೆ, ಶಿವಪ್ಪ ನಾಯಕ ಮಾರ್ಕೆಟ್, ದುರ್ಗಿಗುಡಿ ರಸ್ತೆಗಳು ಜನರಿಲ್ಲದೆ ಖಾಲಿ ಇದ್ದವು. ಎಎ ವೃತ್ತ, ಬಸ್ ನಿಲ್ದಾಣ ಗೋಪಿ ವೃತ್ತ, ಶಿವಮೂರ್ತಿ ವೃತ್ತದ ಬಳಿ ಬ್ಯಾರಿಕೇಡ್ ಹಾಕಲಾಗಿತ್ತು. ರಸ್ತೆ ಸಂಚಾರ ನಿಯಂತ್ರಿಸಲು ಪೊಲೀಸರು ಬ್ಯಾರಿಕೇಡ್​ಗಳನ್ನು ಹಾಕಿದ್ದರು.

    6 ರಸ್ತೆಗಳು ಕೂಡುವ ಎಎ ವೃತ್ತದ ಬಳಿ ಬ್ಯಾರಿಕೇಡ್ ಮೂಲಕ ಸರ್ಪಗಾವಲು ಹಾಕಲಾಗಿತ್ತು. ಭರ್ಮಪ್ಪ ಬೀದಿ, ಎಸ್​ಪಿಎಂ ರಸ್ತೆ, ಒಟಿ ರಸ್ತೆ, ಬಸ್ ನಿಲ್ದಾಣದ ಕಡೆಯ ರಸ್ತೆ, ನೆಹರು ರಸ್ತೆ , ಬಿ.ಎಚ್ ರಸ್ತೆ ಕಡೆ ಹೋಗುವ ವೃತ್ತದಲ್ಲಿ ಬಂದ್ ಮಾಡಲಾಗಿತ್ತು.

    ಜನ ಸಂಚಾರ ಮಾಮೂಲಿ: ಕರ್ಫ್ಯೂ ನಿಮಿತ್ತ ಪೊಲೀಸರು ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಬ್ಯಾರಿಕೇಡ್ ಹಾಕುವ ಮೂಲಕ ವಾಹನ ಸಂಚಾರ ತಡೆಯುವ ಪ್ರಯತ್ನ ನಡೆಸಿದರು. ಆದರೂ ಅಡ್ಡ ಮತ್ತು ಒಳ ರಸ್ತೆಗಳಲ್ಲಿ ವಾಹನ ಸವಾರರ ಹೆಚ್ಚಾಗಿತ್ತು. ಕಳೆದ ಭಾನುವಾರಕ್ಕೆ ಹೋಲಿಸಿದರೆ ಈ ಬಾರಿ ಜನ ಸಂಚಾರ ಹೆಚ್ಚಾಗಿತ್ತು.

    ಜಿಲ್ಲೆಯಲ್ಲಿ ಈಗಾಗಲೇ 500 ಸನಿಹದಲ್ಲಿ ಪಾಸಿಟಿವ್ ಪ್ರಕರಣವಿದ್ದರೂ ಅಗತ್ಯ ವಸ್ತುಗಳ ನೆಪದಲ್ಲಿ ಜನರು ವಾಹನಗಳಲ್ಲಿ ಮನೆಯಿಂದ ಹೊರ ಬಂದು ರಸ್ತೆಯಲ್ಲಿ ಎಂದಿನಂತೆ ರಾಜಾರೋಷವಾಗಿ ಓಡಾಡುತ್ತಿದ್ದರು. ಸಾಗರ ರಸ್ತೆ, ಬಿಎಚ್ ರಸ್ತೆ, ಕುವೆಂಪು ರಸ್ತೆ, ಸವಳಂಗ ರಸ್ತೆ, ವಿನೋಬನಗರ 100 ಅಡಿ ರಸ್ತೆ, ಜೈಲು ರಸ್ತೆ, ಗೋಪಾಳ 60 ಅಡಿ ರಸ್ತೆಯಲ್ಲಿ ಬೈಕ್ ಮತ್ತು ಕಾರುಗಳ ಸಂಚಾರ ಎಂದಿನಂತಿತ್ತು. ಅಗಡಿಗಳು ಸಹ ತೆರೆದಿದ್ದವು. ಪೊಲೀಸರು ಬ್ಯಾರಿಕೇ್ ಹಾಕಿದ್ದರೂ ಅವರ ಎದá-ರೇ ಪಕ್ಕಕ್ಕೆ ತಳ್ಳಿಕೊಂಡು ವಾಹನ ಸವಾರರು ಓಡಾಡá-ತ್ತಿದ್ದರು.

    ಮಾಂಸ ಖರೀದಿಗೆ ಮುಗಿಬಿದ್ದ ಜನತೆ: ಭಾನುವಾರ ಆಗಿದ್ದರಿಂದ ಮಾಂಸದಂಗಡಿ ಎದುರು ಗ್ರಾಹಕರ ಸಂಖ್ಯೆ ಹೆಚ್ಚಿತ್ತು. ಬೆಳಗ್ಗೆಯಿಂದ ಸಂಜೆವರೆಗೂ ಸಾಲುಗಟ್ಟಿ ನಿಂತು ಮಾಂಸ ಖರೀದಿಸಿದರು. ಪರಸ್ಪರ ಅಂತರ ಕಾಯ್ದುಕೊಂಡು ತರಕಾರಿ ಹಾಗೂ ಸೊಪ್ಪಿಗಿಂತ ಮಾಂಸ ಖರೀದಿಗೆ ಹೆಚ್ಚು ಜನರು ಮುಗಿಬಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts