More

    ಹಳೇ ಪ್ರಶ್ನೆಪತ್ರಿಕೆಗೆ ಬರೆದ ಉತ್ತರ

    ವಿಜಯಾಚಾರ್ಯ ಪುರೋಹಿತ ಕೆಂಭಾವಿ
    ಪಟ್ಟಣದ ಕೇಂದ್ರವೊಂದರಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಲವು ಆವಾಂತರಕ್ಕೆ ಕಾರಣವಾಗಿದೆ. ಯಾರೋ ಮಾಡಿದ ತಪ್ಪಿಗೆ ಮತ್ಯಾರೋ ಶಿಕ್ಷೆ ಅನುಭವಿಸುವಂಥ ಪ್ರಸಂಗ ನಡೆದಿದೆ.

    ಹೌದು, ಶಿಕ್ಷಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ವಿದ್ಯಾಥರ್ಿಗಳು ಗಣಿತ ವಿಷಯ ಪರೀಕ್ಷೆಯಲ್ಲಿ ಸಂಬಂಧವಿಲ್ಲದ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆದು ಸಂಕಟಕ್ಕೆ ಸಿಲುಕಿದ್ದಾರೆ.

    ಯಾದಗಿರಿ ಜಿಲ್ಲೆಯಲ್ಲೇ ಅತಿ ಹೆಚ್ಚು ಪರೀಕ್ಷಾ ಕೇಂದ್ರ (ಜಿಲ್ಲಾ ಕೇಂದ್ರ ಹೊರತುಪಡಿಸಿ)ಗಳನ್ನು ಹೊಂದಿರುವ ಪಟ್ಟಣದಲ್ಲಿ ವಿದ್ಯಾರ್ಥಿಗಳು ನಾನಾ ರೀತಿಯ ಗೊಂದಲಕ್ಕೆ ಒಳಗಾದರೂ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

    25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಶುರುವಾಗಿದ್ದು, 27ರಂದು ಗಣಿತ ವಿಷಯ ಪರೀಕ್ಷೆಯಲ್ಲಿ ಈ ಕೇಂದ್ರದ ಐವರು ವಿದ್ಯಾರ್ಥಿಗಳಿಗೆ ಪುನರಾವರ್ತಿತ ಪ್ರಶ್ನೆ ಪತ್ರಿಕೆ ನೀಡುವ ಮೂಲಕ ಪರೀಕ್ಷಾ ಮತ್ತು ಕೇಂದ್ರದ ಮೇಲ್ವಿಚಾರಕರು ದೊಡ್ಡ ಪ್ರಮಾದ ಎಸಗಿದ್ದಾರೆ. ಅಲ್ಲದೆ ಇದೇ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಗುಮಾನಿಯೂ ಇದೆ. ಒಟ್ಟಾರೆ ಪುನರಾವರ್ತಿತ ಪ್ರಶ್ನೆ ಪತ್ರಿಕೆ ಬರೆದ ವಿದ್ಯಾಥರ್ಿಗಳ ಭವಿಷ್ಯ ಹೇಗೆ ಎಂಬುದಕ್ಕೆ ಸಂಬಂಧಿತರೇ ಉತ್ತರಿಸುವುದು ಒಳಿತು.

    ಈ ಐವರು ವಿದ್ಯಾರ್ಥಿಗಳು (2019-20) ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುತ್ತಿದ್ದರೂ ಹಳೆಯ (2018) ಪ್ರಶ್ನೆ ಪತ್ರಿಕೆ ನೀಡುವ ಮೂಲಕ ಶಿಕ್ಷಣ ಇಲಾಖೆ ಅವಾಂತರ ಎಸಗಿದೆ. ಪ್ರಶ್ನೆ ಪತ್ರಿಕೆಗಳಿಗೆ ಬಾರ್ ಕೋಡ್ ಇದ್ದರೂ ಹಳೆಯ ಪ್ರಶ್ನೆ ಪತ್ರಿಕೆ ಹೇಗೆ ವಿತರಣೆ ಮಾಡಿದರು ಎಂಬ ಪ್ರಶ್ನೆ ಒಂದೆಡೆಯಾದರೆ, ಹಳೇ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೋಣೆಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಇದ್ದರೂ ಈ ಪ್ರಶ್ನೆ ಪತ್ರಿಕೆಗಳು ಹೊಸ ವಿದ್ಯಾರ್ಥಿಗಳ ಪರೀಕ್ಷಾ ಕೋಣೆಯಲ್ಲಿ ಹೇಗೆ ಬಂದವು ಎಂಬಿತ್ಯಾದಿ ಪ್ರಶ್ನೆಗಳು ಕಾಡುತ್ತಿವೆ. ಒಟ್ಟಾರೆ, ಅಧಿಕಾರಿಗಳು (ಶಿಕ್ಷಕರು) ಎಸಗಿದ ತಪ್ಪಿಗೆ ವಿದ್ಯಾರ್ಥಿಗಳು ಪರಿತಪಿಸುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts