More

    ಶಿಕ್ಷಕರ ನಿಯೋಜನೆಗೆ ಆಗ್ರಹ

    ಚಿಕ್ಕೋಡಿ: ಕೇಂದ್ರೀಯ ವಿದ್ಯಾಲಯದಲ್ಲಿ ನುರಿತ ಶಿಕರನ್ನು ನಿಯೋಜಿಸುವಂತೆ ಕೇಂದ್ರೀಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಪಾಲಕರು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅವರಿಗೆ ಮನವಿ ಸಲ್ಲಿಸಿದರು.

    ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿ ನಿರ್ಮಾಣವಾಗಿರುವ ಹೈಟೆಕ್​ ಕೇಂದ್ರೀಯ ವಿದ್ಯಾಲಯದಲ್ಲಿ ಮೂಲಭೂತ ಸೌಲಭ್ಯಗಳಿವೆ. ಆದರೆ, ಶಿಕರ ಕೊರತೆ ಇದೆ. ಪ್ರತಿ ವಿಷಯಕ್ಕೆ ಒಬ್ಬೊಬ್ಬ ಶಿಕರು ವಿದ್ಯಾಲಯದಲ್ಲಿ ಇರಬೇಕು. ಆದರೆ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕರ ಕೊರತೆ ಎದುರಾಗಿದೆ. ಕಾಯಂ ಪ್ರಾಚಾರ್ಯ ನಿಯೋಜನೆ ಮಾಡಬೇಕು. ಆನ್​ಲೈನ್​ ಬಿಟ್ಟು ಆ್​ಲೈನ್​ ಕ್ಲಾಸ್​ ನಡೆಸಬೇಕು ಎಂದು ಒತ್ತಾಯಿಸಿದರು.

    ವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ಶಿಕರು ಇದ್ದರೂ ಪ್ರಯೋಜನವಿಲ್ಲ. ಅವರಿಗೆ ಯಾವ ಆಟಗಳನ್ನೂ ಆಡಿಸಲು ಬರುವುದಿಲ್ಲ. ಕೂಡಲೇ ಅವರನ್ನು ಬದಲಾಯಿಸಿ, ಬೇರೆ ಶಿಕರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಮಾತನಾಡಿ, ನುರಿತ ಶಿಕ ನಿಯೋಜನೆ ಮಾಡಲು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು. ಉತ್ತಮ ಶಿಂಧೆ, ರಾಜ ಜಾಧವ, ಗಿರಿಧರ ಅವನ್ನವರ ಸೇರಿದಂತೆ ಪಾಲಕರು ಇದ್ದರು.

    ಚಿಕ್ಕೋಡಿ ಕೇಂದ್ರೀಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಪಾಲಕರು ಶಿಕರ ಕೊರತೆ ಇದೆ ಎಂದು ಬುಧವಾರ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಶಿಕರ ನಿಯೋಜನೆ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ನುರಿತ ಶಿಕರ ನಿಯೋಜನೆ ಕ್ರಮ ವಹಿಸಲಾಗುತ್ತದೆ.
    |ಅಣ್ಣಾಸಾಹೇಬ ಜೊಲ್ಲೆ, ಚಿಕ್ಕೋಡಿ ಸಂಸದ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts