More

    ಶರಣರ ಬದುಕಿನ ಮೌಲ್ಯ ಸ್ಫೂತರ್ಿದಾಯಕ

    ಬಸವಕಲ್ಯಾಣ: ಶರಣರ ಬದುಕಿನ ಮೌಲ್ಯಗಳು ನಮಗೆ ಸ್ಫೂತರ್ಿದಾಯಕವಾಗಿವೆ. ನಾವು ನಮ್ಮ ಚರಿತ್ರೆಯನ್ನು ಉಜ್ವಲ ಮಾಡಿಕೊಳ್ಳಬೇಕಾದರೆ ಅಮರಗಣಂಗಳ ಆತ್ಮ ಚರಿತ್ರೆ ಕೇಳಬೇಕು, ಓದಬೇಕು. ಅಮರಗಣಂಗಳ ವಚನಗಳು ನಮಗೆ ಶಾಶ್ವತ ಸುಖದ ಮಾರ್ಗ ತೋರಿಸುತ್ತವೆ ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

    ಅನುಭವ ಮಂಟಪದಲ್ಲಿ ಭಾನುವಾರ ಶ್ರಾವಣ ನಿಮಿತ್ತ ಅನುಭವ ಮಂಟಪ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ ಅವರಿಂದ 38 ದಿನಗಳ ಕಾಲ ನಡೆದ ಅಮರಗಣಂಗಳ ಆತ್ಮ ಚರಿತ್ರೆ ಪ್ರವಚನ ಮುಕ್ತಾಯ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಪ್ರವಚನ ಯಶಸ್ವಿಯಾಗಿ ನಡೆದಿದ್ದು ಖುಷಿ ತಂದಿದೆ. ಅಮರಗಣಂಗಳ ಆತ್ಮ ಚರಿತ್ರೆ ನಿಜಕ್ಕೂ ನಮ್ಮೆಲ್ಲರಿಗೆ ಅಂತರಮುಖಿ ಮಾಡುತ್ತದೆ ಎಂದರು.

    ನೇತೃತ್ವ ವಹಿಸಿದ ಬಸವಬೆಳವಿ ಶ್ರೀ ಶರಣಬಸವ ದೇವರು ಮಾತನಾಡಿ, ಯಾರಿಗೆ ಜನನ ಮರಣದ ಭಯವಿಲ್ಲವೋ ಅವರು ಅಮರಗಣಂಗಳು. ನಮ್ಮ ಶರಣರು ನಿಜಾರ್ಥದಲ್ಲಿ ಜನನ-ಮರಣ ಗೆದ್ದ ಅಮರ ಜೀವಿಗಳು. ಕಲ್ಯಾಣದಲ್ಲಿ ಏಕಕಾಲಕ್ಕೆ 770 ಅಮರಗಣಂಗಳು ಅನುಭವ ಮಂಟಪದಲ್ಲಿ ಒಗ್ಗೂಡಿ ಚಿಂತನ-ಮಂಥನ ನಡೆಸಿರುವುದು ಜಗತ್ತಿನ ಇತಿಹಾಸದಲ್ಲಿ ಅಪೂರ್ವ ಘಟನೆಯಾಗಿದೆ ಎಂದರು.

    ಭಾಲ್ಕಿ ಹಿರೇಮಠದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಶಿವಕುಮಾರ ಸ್ವಾಮೀಜಿ, ಹುಬ್ಬಳ್ಳಿಯ ಮಾತೆ ಅಕ್ಕನಾಗಮ್ಮ ತಾಯಿ ಸಮ್ಮುಖ, ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಕಲ್ಯಾಣರಾಯ ಶಿವಣಕರ ಅಧ್ಯಕ್ಷತೆ ವಹಿಸಿದ್ದರು. ಬಸವಗುರು ಪೂಜೆಯನ್ನು ಬಿಡಿಪಿಸಿ ನಿದರ್ೇಶಕಿ ವಿಜಯಲಕ್ಷ್ಮೀ ನೆರವೇರಿಸಿದರು.

    ಶ್ರೀ ಇಷ್ಟಲಿಂಗ ಸ್ವಾಮೀಜಿ, ಹಾಲ್ಲಮ್ಮ ಪಾಟೀಲ್, ಅಕ್ಕನಾಗಲಾಂಬಿಕೆ, ಅನುಭವ ಮಂಟಪ ಟ್ರಸ್ಟ್ ಕಾರ್ಯದಶರ್ಿ ಡಾ.ಎಸ್.ಬಿ.ದುಗರ್ೆ, ಗುರುನಾಥ ಗಡ್ಡೆ, ಮಡಿವಾಳಯ್ಯ ಸ್ವಾಮಿ, ಜಗನ್ನಾಥ ಕುಶನೂರೆ, ಗಣಪತಿ ಕಾಸ್ತೆ, ಗುಂಡಪ್ಪ ಲಾದಾ, ಬಸವತೀರ್ಥಪ್ಪ ಕಾಚೂರ, ಸಿದ್ದಣ್ಣ ಬುಮಾ, ವಿಜಯಕುಮಾರ ಚಿದ್ರೆ, ನಾಗಶೆಟ್ಟಿ ಪಾಟೀಲ್, ಜಗನ್ನಾಥ ಬಿರಾದಾರ್, ಪಂಡಿತ ನಾಗರಾಳೆ, ಮಹಾದೇವಪ್ಪ ಇಜಾರೆ, ರಾಜಕುಮಾರ ರಟಕಲ್ಲೆ, ಚಂದ್ರಪ್ಪ ಗುಂಗೆ, ಶಂಕರ ಮದರಗೈ, ನಾಗಪ್ಪ ನಿಣ್ಣೆ, ಭದ್ರಪ್ಪ ವಡ್ಡೆ ಇದ್ದರು. ಮಲ್ಲಿಕಾಜರ್ುನ ಅಲಗೂಡೆ ಸ್ವಾಗತಿಸಿದರು. ಸಂಗಮೇಶ ತೋಗರಖೇಡೆ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts