More

    ವಿವಿಧ ಗಾತ್ರದ ಮೊಟ್ಟೆ ಇಟ್ಟ ನಾಟಿ ಕೋಳಿ

    ಶ್ರೀನಿವಾಸಪುರ: ತಾಲೂಕಿನ ಪಣಸಮಾಕನಹಳ್ಳಿಯ ರೈತರೊಬ್ಬರು ಸಾಕಿರುವ ನಾಟಿ ಕೋಳಿಯೊಂದು ವಿವಿಧ ಗಾತ್ರದ ಮೊಟ್ಟೆ ಇಡುವ ಮೂಲಕ ಗಮನ ಸೆಳೆದಿದೆ.

    ನಾಟಿ ಕೋಳಿಯು ಮೊದಲ ಸಲ ಮೊಟ್ಟೆ ಇಟ್ಟಾಗ ಗಾತ್ರದಲ್ಲಿ ಯಾವುದೇ ವ್ಯತ್ಯಾಸ ಇರಲಿಲ್ಲ. ಎರಡನೇ ಬಾರಿ ಮೊಟ್ಟೆ ಇಟ್ಟಾಗ ಸಾಮಾನ್ಯ ಗಾತ್ರ ಹೊಂದಿದ್ದವು. ದಿನೇದಿನೆ ಮೊಟ್ಟೆಯ ಗಾತ್ರ ಚಿಕ್ಕದಾಗುತ್ತಾ ಹೋಗಿದೆ.

    ಗೌಜಿಗ ಹಕ್ಕಿ ಮೊಟ್ಟೆ ತರ ಚಿಕ್ಕದಾಗಿ ಮೊಟ್ಟೆ ಇಡುವುದನ್ನು ನೋಡಿ ಆಶ್ಚರ್ಯವಾಯಿತು ಹಾಗೂ ಮೊಟ್ಟೆ ಚಿಕ್ಕದಾದರೂ ಸಾಮಾನ್ಯ ಮೊಟ್ಟೆಯಂತೆಯೇ ಗಟ್ಟಿಯಾಗಿತ್ತು ಎಂದು ಪಣಸಮಾಕನಹಳ್ಳಿಯ ರೈತ ರಮೇಶ್ ತಿಳಿಸಿದ್ದಾರೆ.

    ಅನಿಷ್ಟ ಸಂಕೇತವೆಂಬ ನಂಬಿಕೆ: ಇಂಥ ಕೋಳಿ ಮೊಟ್ಟೆಯನ್ನು ಕಲ್ಲು ಮೊಟ್ಟೆ ಎಂದು ಕರೆಯುವುದು ರೂಢಿ. ಈ ರೀತಿ ಮೊಟ್ಟೆ ಇಡುವ ಕೋಳಿಯನ್ನು ಹಳ್ಳಿ ಜನರು ಅನಿಷ್ಟದ ಸಂಕೇತವೆಂದು ಭಾವಿಸುತ್ತಾರೆ. ಈ ರೀತಿ ಮೊಟ್ಟೆ ಇಟ್ಟ ಕೋಳಿಗೆ ಪೂಜೆ ಸಲ್ಲಿಸಿ ಮನೆಯ ಹೊಸಿಲಿನ ಮೇಲೆ ಇಟ್ಟು, ಅದರ ಕತ್ತು ಹೊಸಲಿನ ಹೊರಗಡೆ ಬೀಳುವ ಹಾಗೆ ಕತ್ತರಿಸುತ್ತಾರೆ. ಆಗ ಮನೆಯ ಜನರಿಗೆ ಗ್ರಹಚಾರ ದೂರವಾಯಿತು ಎಂದು ನಂಬುತ್ತಾರೆ. ಇದು ಪೂರ್ವಿಕರ ಕಾಲದಿಂದ ಬಂದಿರುವ ಆಚರಣೆ.

     

    ಮೂಢನಂಬಿಕೆ: ಅದು ಮೂಢನಂಬಿಕೆ. ಕೋಳಿ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದಾಗ ಇಂತಹ ಘಟನೆ ನಡೆಯುತ್ತವೆ. ಆದರೆ ಇದಕ್ಕೆ ಚಿಕಿತ್ಸೆ ಅವಶ್ಯಕತೆ ಇರುವುದಿಲ್ಲ ಎಂದು ಪಶು ವೈದ್ಯಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts