More

    ಪಟ್ಟಣದ ಮೂಲ ಸೌಲಭ್ಯಗಳ ವ್ಯವಸ್ಥೆಗೆ ಕ್ರಮ

    ಕೋಲಾರ: ಪಟ್ಟಣದಲ್ಲಿ 15 ಕೋಟಿ ರೂ.ವೆಚ್ಚದಲ್ಲಿ ಸಿಸಿ ರಸ್ತೆ, ಕೊಳವೆಬಾವಿ, ಸ್ವಚ್ಛತೆ, ಬೀದಿ ದೀಪಗಳು ಸೇರಿ ಇತರ ಮೂಲ ಸೌಲಭ್ಯಗಳ ವ್ಯವಸ್ಥೆಗೆ ಕ್ರಮವಹಿಸಲಾಗುವುದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು.

    ಶ್ರೀನಿವಾಸಪುರ ಪಟ್ಟಣದ ಅಮಾನಿಕೆರೆಯ ಕ್ರೀಡಾಂಗಣ ಹಾಗೂ ಎಸ್ಎಫ್ಸಿ ವಿಶೇಷ ಅನುದಾನದಡಿ ಲೋಕೋಪಯೋಗಿ ಇಲಾಖೆಯಿಂದ ಪುರಸಭಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಬುಧವಾರ ಪರಿಶೀಲಿಸಿ ಮಾತನಾಡಿದರು.
    ಪಟ್ಟಣದ ಪಾಲಿಟೆಕ್ನಿಕ್ ರಸ್ತೆ, ಮೂರು ಜಾಕೀರ್ಹುಸೇನ್ ಮೊಹಲ್ಲಾಗಳ ರಸ್ತೆಗಳ ದುರಸ್ಥಿಪಡಿಸಿ ಅಭಿವೃದ್ಧಿಪಡಿಸಲಾಗುವುದು. ಪಟ್ಟಣಕ್ಕೆ ಲಿಂಕ್ರಸ್ತೆಗಳಾದ ಕಲ್ಲೂರು ರಸ್ತೆ, ಆವಲಕುಪ್ಪ, ನಲ್ಲಪಲ್ಲಿ ಬಳಿ ರಸ್ತೆಗಳನ್ನು ಅಗಲಿಕರಿಸಿ, ರಸ್ತೆ ಇಕ್ಕಲಗಳಲ್ಲಿ ಚರಂಡಿ ವ್ಯವಸ್ಥೆ, ಅವಶ್ಯಕತೆ ಇರುವ ರಸ್ತೆಗಳಿಗೆ ಸಿಮೆಂಟ್ ರಸ್ತೆ ಹಾಕಲಾಗುವುದು ಎಂದರು.
    ಅಮಾನಿಕೆರೆಯ ಕಟ್ಟೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಟ್ಟೆ ವಿಸ್ತರಿಸಿ, ವಾಕಿಂಗ್ಗೆ ವ್ಯವಸ್ಥೆ ಮಾಡಲಾಗುವುದು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರಾಯಲ್ಪಾಡು, ನೆಲವಂಕಿ, ರೋಣೂರು ಹೋಬಳಿಗಳಿಂದ ಬರುವ ಆಂಬುಲೆನ್ಸ್ ಯಾವುದೇ ಅಡೆತಡೆಗಳು ಇಲ್ಲದೆ ಸಂಚರಿಸಲು ಎಕ್ಸ್ಪ್ರೆಸ್ವೇ ನಿಮಾರ್ಣ, ಲಕ್ಷಿ$್ಮಪುರ ಬೆಟ್ಟಗುಡ್ಡಗಳಲ್ಲಿ ಬೀಳುವ ನೀರು ಆಂಧ್ರಕ್ಕೆ ಹರಿಯುತ್ತಿದ್ದು, ಲಕ್ಷಿ$್ಮಪುರ ಕೆರೆಗೆ ನೀರು ದಿಂಬಾಲ್ ಕೆರೆಗೆ ಹರಿಸಿ ಆ ಕೆರೆಯ ಮೂಲಕ ಪಟ್ಟಣದ ಅಮಾನಿಕೆರೆಗೆ ನೀರು ಒದಗಿಸಿ, ಪಟ್ಟಣಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು.
    ಪಟ್ಟಣದಲ್ಲಿ ಪ್ರತಿಯೊಂದು ಬಡವಾಣೆಗಳ ಹೆಸರು, ಸಂಖ್ಯೆ ಹಾಗೂ ಮಾರ್ಗಸೂಚಿ ನಾಮಲಕಗಳನ್ನು ಅಳವಡಿಸಲಾಗುವುದು. ಮಳೆ ನೀರು ಸರಾಗವಾಗಿ ಹರಿಯುವಂತೆ ಚರಂಡಿ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
    ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಎನ್.ನಾರಾಯಣಸ್ವಾಮಿ, ಅಭಿಯಂತರರಾದ ಪಿ.ನಾಗರಾಜ್, ಗೋವಿಂದಪ್ಪ, ಎಲ್.ಎಂ.ನಾಗರಾಜ, ಪುರಸಭೆ ಇಂಜಿನಿಯರ್ ವಿ.ಶ್ರೀನಿವಾಸ್, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts