More

    ವಿದ್ಯಾರ್ಥಿಗಳಿಗೆ ಆಹಾರ ಧಾನ್ಯ, ಪಠ್ಯಪುಸ್ತಕ ವಿತರಣೆ

    ಹಿರೇಕೆರೂರ: ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಬಿಸಿಯೂಟ ಮತ್ತಿತರ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಇದರ ಲಾಭ ಪಡೆದು, ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಬೇಕು ಎಂದು ಎಸ್​ಡಿಎಂಸಿ ಉಪಾಧ್ಯಕ್ಷ ಶಂಕ್ರಪ್ಪ ಅಂಗಡಿ ಹೇಳಿದರು.

    ಪಟ್ಟಣದ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ 8ರಿಂದ 10ನೇ ತರಗತಿ ಮಕ್ಕಳಿಗೆ ಗುರುವಾರ ಮಧ್ಯಾಹ್ನ ಬಿಸಿಯೂಟದ ಆಹಾರ ಧಾನ್ಯ ಮತ್ತು ಪಠ್ಯ ಪುಸ್ತಕ ವಿತರಿಸಿ ಅವರು ಮಾತನಾಡಿದರು.

    ಈ ಬಾರಿ ಕರೊನಾ ವೈರಸ್ ಭೀತಿ ಇರುವುದರಿಂದ ಶಾಲೆ ಆರಂಭವಾಗುವವರೆಗೆ ಮಕ್ಕಳು ಮನೆಯಲ್ಲಿದ್ದು ವಿದ್ಯಾಭ್ಯಾಸ ಮಾಡಬೇಕು. ವಿನಾಕಾರಣ ಹೊರಗೆ ಸಂಚರಿಸಬಾರದು ಎಂದರು.

    ಎಸ್​ಡಿಎಂಸಿ ಸದಸ್ಯ ಕಲ್ಲಪ್ಪ ಬನ್ನಿಹಟ್ಟಿ, ಕಾಲೇಜ್ ಸಿಡಿಸಿ ಸಮಿತಿ ಉಪಾಧ್ಯಕ್ಷ ಸಿ.ಬಿ. ಮಾಳಗಿ, ಸದಸ್ಯ ರಾಮು ಮುರಡೇಶ್ವರ, ಮುಖ್ಯಶಿಕ್ಷಕ ಎನ್. ಸುರೇಶಕುಮಾರ ಹಾಗೂ ಶಿಕ್ಷಕರು, ಮಕ್ಕಳು ಇದ್ದರು.

    ನಿಡನೇಗಿಲು ಶಾಲೆಯಲ್ಲಿ ವಿತರಣೆ: ಹಿರೇಕೆರೂರ ತಾಲೂಕಿನ ನಿಡನೇಗಿಲು ಪ್ಲಾಟಿನ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಅಕ್ಕಿ, ಬೇಳೆ ಹಾಗೂ ಪಠ್ಯ ಪುಸ್ತಕಗಳನ್ನು ಗುರುವಾರ ವಿತರಿಸಲಾಯಿತು. ಎಸ್​ಡಿಎಂಸಿ ಸದಸ್ಯ ಕಲ್ಲಪ್ಪ ಕುರಿಯವರ, ಗುರುನಾಥ ಹಾರೋಗೊಪ್ಪದ, ಸುಭಾಸ ಭೋವಿ, ಖಾಜಿಸಾಬ್ ಗುಂಡಗಟ್ಟಿ, ಹನುಮಂತಪ್ಪ ಹಲಗೇರಿ, ಶಿಕ್ಷಕ ಎಂ.ಎಂ. ಮತ್ತೂರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts