More

    ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ

    ಬಳ್ಳಾರಿ : ತಾಂತ್ರಿಕ ಬೆಳವಣಿಗೆ ಎಂಬ ಸ್ಪರ್ಧೆಯಲ್ಲಿ ಗೆಲ್ಲಬಹುದು ಅಥವಾ ಗೆಲ್ಲದಿರಬಹುದು. ಆದರೆ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಎಂದು ಎಸಿ ಹೇಮಂತ ಕುಮಾರ ಹೇಳಿದರು.
    ನಗರದ ಆರ್‌ವೈಎಂಸಿ ಕಾಲೇಜಿನಲ್ಲಿ ಆರ್‌ವೈಎಂಸಿಯ ಐಇಇಇ ವಿದ್ಯಾರ್ಥಿ ಅಧ್ಯಾಯ ಘಟಕದ ವತಿಯಿಂದ ಶುಕ್ರವಾರ ನಡೆದ ಪ್ರಾಜೆಕ್ಟ್ ಸಿಂಪೋಸಿಯಮ್ ಪ್ರಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಸುತ್ತಲಿನಲ್ಲಿ ಲಭ್ಯವಿರುವ ಸಂಪನ್ಮೂಲ ಬಳಸಿ ಹೊಸ ಆವಿಷ್ಕಾರ ನಡೆಸಲು ಪ್ರಯತ್ನಿಸಬೇಕು. ಸಂಪನ್ಮೂಲಗಳು ಸಂಖ್ಯೆಯಲ್ಲಿ ಸೀಮಿತವಾದಾಗ ಸಮಾಜಕ್ಕೆ ತುಂಬಾ ಉಪಯುಕ್ತವಾದ ಹೊಸ ಆವಿಷ್ಕಾರ ಫ್ಲಾಶ್ ಆಗಿ ಬರುತ್ತವೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
    ವೀ.ವಿ. ಸಂಘದ ಉಪಾಧ್ಯಕ್ಷ ಜಾನೆಕುಂಟೆ ಬಸವರಾಜ ಮಾತನಾಡಿ, ಎರಡ್ಮೂರು ದಶಕಗಳ ಹಿಂದೆ ಹೊಲಿಸಿದರೆ ಇಂದು ನಾವು ಹಲವಾರು ಸೌಲಭ್ಯ ಹೊಂದಿದ್ದೇವೆ. ಪ್ರತಿಯೊಬ್ಬ ವಿದ್ಯಾರ್ಥಿಯು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಒಮ್ಮೆ ಭಾಗವಹಿಸಿದರೆ ಜಗತ್ತು ಹೇಗೆ ಮುಂದುವರೆದು ಬೆಳೆಯುತ್ತಿದೆ ಎಂದು ತಿಳಿಯವುದು. ಒಂದೆರಡು ಹಂತದಲ್ಲಿ ಪ್ರಯತ್ನ ಪಟ್ಟರೆ ಸಮಾಜಕ್ಕೆ ಹೊಸ ಆವಿಕ್ಷಾರ ಒದಗಿಸಬಹುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts