More

    ವಿಘ್ನ ನಿವಾರಕನಿಗೆ ಸಂಭ್ರಮದ ವಿದಾಯ

    ಬಸವಕಲ್ಯಾಣ: ಗಣೇಶೋತ್ಸವ ನಿಮಿತ್ತ ನಗರದ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಗಣೇಶ ಮೂತರ್ಿಗಳಿಗೆ ಹಷರ್ೋಲ್ಲಾಸದ ಮಧ್ಯೆ ವಿಸರ್ಜನೆ ಮಾಡಲಾಯಿತು. ಕೋಟೆಯಿಂದ ಮುಖ್ಯ ರಸ್ತೆ ಮಾರ್ಗವಾಗಿ ಶುಕ್ರವಾರ ತಡರಾತ್ರಿ ಶುರುವಾದ ಮೆರವಣಿಗೆಯಲ್ಲಿ 8 ಗಣೇಶ ಮಂಡಳದವರ ಮೂತರ್ಿಗಳಿಗೆ ಗಣಪತಿ ಬಪ್ಪಾ ಮೋರಿಯಾ, ಪುಡಚಾ ವಷರ್ಿ ಲೌಕರ್ ಯಾ ಎಂದು ಘೋಷಣೆ ಮೊಳಗಿಸುತ್ತ ಭಕ್ತಿಪೂರ್ವಕ ವಿದಾಯ ಹೇಳಲಾಯಿತು.

    ಬಣ್ಣ-ಬಣ್ಣದ ಝಗಮಗಿಸುವ ವಿದ್ಯುತ್ ದೀಪಗಳ ಬೆಳಕಿನಲ್ಲಿ ಸೌಂಡ್ ಸಿಸ್ಟಮ್ ಎದುರು ಯುವ ಸಮೂಹ ಕುಣಿದು ಕುಪ್ಪಳಿಸಿತು. ಮೆರವಣಿಗೆಯುದ್ದಕ್ಕೂ ಭಕ್ತಿ ಸಂಗೀತದ ಅಲೆಯಲ್ಲಿ ಗಣೇಶನ ಜೈಕಾರ ಮೊಳಗಿತು. ಜತೆಗೆ ಪರಿಸರ, ಸಾಮಾಜಿಕ ಪ್ರಜ್ಞೆ, ರಾಷ್ಟ್ರೀಯತೆ ಸೇರಿ ಮಹತ್ವದ ವಿಷಯಗಳ ಕುರಿತು ಜಾಗೃತಿ ಮೂಡಿಸುವಲ್ಲಿ ಗಣೇಶ ಮೆರವಣಿಗೆ ಯಶಸ್ವಿಯಾಯಿತು.

    ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಧರ್ಮಪ್ರಕಾಶ ಗಲ್ಲಿ, ಈಶ್ವರ ನಗರ, ಶಾಪುರ ಗಲ್ಲಿ, ರಜಪೂತ ಗಲ್ಲಿ, ಹೊಸಪೇಟ್, ಕುಂಬಾರ ಪಾಳಿ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿದ್ದ ಮೂತರ್ಿಗಳು ಸಾಮೂಹಿಕ ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಬಸವೇಶ್ವರ ವೃತ್ತ, ಗಾಂಧಿ ವೃತ್ತ, ಧರ್ಮಪ್ರಕಾಶ ಗಲ್ಲಿಯ ಗಣೇಶ ಮಂಡಳಗಳ ವಿಶೇಷ ಅಲಂಕಾರ ಗಮನ ಸೆಳೆದರೆ, ಈಶ್ವರ ನಗರ ಗಣೇಶ ಮೆರವಣಿಗೆಯಲ್ಲಿ ವಿವಿಧ ಸಂದೇಶ ಸಾರುವ ಐದು ವಾಹನ ಇದ್ದದ್ದು ಮತ್ತು ಶಾಪುರ ಗಣೇಶ ಮಂಡಳದವರು ಪುನೀತ್ ರಾಜಕುಮಾರ್ ಚಿತ್ರ ಅಳವಡಿಸಿದ್ದು ಗಮನ ಸೆಳೆದವು.

    ವಿವಿಧೆಡೆಯ ಮೂತರ್ಿಗಳನ್ನು ಹೊತ್ತ ವಾಹನಗಳು ಆಗಮಿಸಲು ತಡವಾಗಿದ್ದರಿಂದ ಕೋಟೆಯಿಂದ ರಾತ್ರಿ 10ರ ಸುಮಾರಿಗೆ ಮೆರವಣಿಗೆ ಆರಂಭವಾಗಿ ಮಧ್ಯರಾತ್ರಿ 12ರ ಸುಮಾರಿಗೆ ಗಾಂಧಿ ವೃತ್ತಕ್ಕೆ ತಲುಪಿತು. ಮುಖ್ಯರಸ್ತೆ ಬದಿಯಲ್ಲಿ ಮಹಿಳೆಯರು, ಮಕ್ಕಳು, ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ನಿಂತು ಮೆರವಣಿಗೆ ವೈಭವವನ್ನು ಕಣ್ತುಂಬಿಕೊಂಡರು.

    ಕರೊನಾ ಕಾರಣಕ್ಕೆ ಎರಡು ವರ್ಷ ಸರಳವಾಗಿ ಆಚರಿಸಲಾಗಿತ್ತು. ಈಗ ಮಂಡಳಗಳಿಂದ ಅಗತ್ಯ ಸಿದ್ಧತೆ ಕೈಗೊಂಡು ಅದ್ದೂರಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಶಾಂತ ಮತ್ತು ಸುವ್ಯವಸ್ಥಿತವಾಗಿ ಸಾಗುವಂತೆ ಆಯ್ದ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ಅಧಿಕಾರಿಗಳು ನಜರ್ ಇಟ್ಟಿದ್ದರು. ಡಿಎಆರ್, ಕೆಎಸ್ಆರ್ಪಿ ವಾಹನಗಳನ್ನು ತೈನಾತುಗೊಳಿಸಲಾಗಿತ್ತು.

    ಹುಮನಾಬಾದ್ ಎಎಸ್ಪಿ ಶಿವಾಂಶು ರಾಜಪೂತ, ಬೀದರ್ ಡಿವೈಎಸ್ಪಿ ಸತೀಶಕುಮಾರ ಪರಿಸ್ಥಿತಿ ಅವಲೋಕಿಸಿದರು. ಸಿಪಿಐಗಳಾದ ಸುಶೀಲಕುಮಾರ, ವಿಜಯಕುಮಾರ ನಾಯಕ, ವಿಜಯಕುಮಾರ ಬಿರಾದಾರ್, ಅಮೂಲ ಕಾಳೆ, ಶರಣಬಸಪ್ಪ ಕೋಡ್ಲಾ, ಪಿಎಸ್ಐ ಅಮರ ಕುಲಕಣರ್ಿ ಮೆರವಣಿಗೆ ಸುಸೂತ್ರ ನಡೆಯುವಂತೆ ಕಾಳಜಿ ವಹಿಸಿದ್ದರು.

    ನಗರದಲ್ಲಿ ಸುಮಾರು 50 ಸ್ಥಳಗಳಲ್ಲಿ ಮೂತರ್ಿ ಪ್ರತಿಷ್ಠಾಪಿಸಿದ್ದು, ಗುರುವಾರ ಹಗಲಿನಲ್ಲಿ ಸರಾಫ್ ಬಜಾರ್, ಪಟೇಲ್ ಚೌಕ್ ಸೇರಿ 10ಕ್ಕೂ ಹೆಚ್ಚು ಮೂತರ್ಿಗಳ ವಿಸರ್ಜನಾ ಮೆರವಣಿಗೆ ನಡೆಯಿತು. ಇನ್ನು ಕೆಲ ಮಂಡಳದವರು ತಮ್ಮ ಬಡಾವಣೆಯಲ್ಲಿ ಮೆರವಣಿಗೆ ನಡೆಸಿದರೆ, ಮತ್ತೆ ಕೆಲವರು ಜುಲೂಸ್ ನಡೆಸಿಲ್ಲ.

    ಗಮನ ಸೆಳೆದ ಶಾಸಕರ ಡಾನ್ಸ್: ವಿಸರ್ಜನಾ ಮೆರವಣಿಗೆಯಲ್ಲಿ ಶಾಸಕ ಶರಣು ಸಲಗರ ಸೌಂಡ್ ಸಿಸ್ಟಮ್ ಎದುರು ಸಖತ್ ಡಾನ್ಸ್ ಮಾಡುವ ಮೂಲಕ ಗಮನ ಸೆಳೆದರು. ವಿವಿಧ ಮಂಡಳದ ಗಣೇಶನ ಎದುರು ಹೆಜ್ಜೆ ಹಾಕಿ ಯುವಕರಲ್ಲಿ ಮತ್ತಷ್ಟು ಜೋಶ್ ತುಂಬಿದರು. ಮಾಜಿ ಎಂಎಲ್ಸಿ ವಿಜಯಸಿಂಗ್, ಕಾಂಗ್ರೆಸ್ ನಾಯಕಿ ಮಾಲಾ ಬಿ.ನಾರಾಯಣರಾವ, ಬಿಜೆಪಿ ಮುಖಂಡ ಗುಂಡುರೆಡ್ಡಿ ಮೊದಲಾದವರು ಗಣೇಶನ ದರ್ಶನ ಪಡೆದರು.

    ಮಂಡಳದವರಿಗೆ ಬಹುಮಾನ ವಿತರಣೆ: ವಿಸರ್ಜನಾ ಮೆರವಣಿಗೆ ಗಾಂಧಿ ವೃತ್ತ ತಲಪಿದ ನಂತರ ಪೊಲೀಸ್ ಇಲಾಖೆಯಿಂದ ಪ್ರಥಮ ಸ್ಥಾನ ಪಡೆದ ಪಂಚಕಟ್ಟಾ ಗಾಂಧಿ ಚೌಕ್ ನವತರುಣ ತರುಣ ಗಣೇಶ ಮಂಡಳ, ದ್ವಿತೀಯ ಸ್ಥಾನ ಪಡೆದ ಈಶ್ವರ ನಗರ ಮಂಡಳ ಮತ್ತು ತೃತೀಯ ಸ್ಥಾನ ಗಳಿಸಿದ ಧರ್ಮಪ್ರಕಾಶ ಗಲ್ಲಿಯ ಕ್ರಾಂತಿ ಗಣೇಶ ಮಂಡಳದವರಿಗೆ ಬಹುಮಾನ ವಿತರಿಸಲಾಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲ ಗಣೇಶ ಮಂಡಳ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts