More

    ವಲಸೆ ಕಾರ್ವಿುಕರನ್ನು ರಕ್ಷಿಸಿದ ಅಧಿಕಾರಿಗಳು

    ಹುಬ್ಬಳ್ಳಿ: ಚಿತ್ರದುರ್ಗದಿಂದ ಮಹಾರಾಷ್ಟ್ರಕ್ಕೆ ಲಾರಿಯೊಂ ದರಲ್ಲಿ ತೆರಳುತ್ತಿದ್ದ 184 ವಲಸೆ ಕಾರ್ವಿುಕರನ್ನು ರಕ್ಷಿಸಿದ ಹುಬ್ಬಳ್ಳಿ ತಾಲೂಕು ಆಡಳಿತದ ಅಧಿಕಾರಿಗಳು, ಎಲ್ಲ ಕಾರ್ವಿುಕರನ್ನು ರಾಜ್ಯದ ಗಡಿಯವರೆಗೆ ಪ್ರತ್ಯೇಕ ಸಾರಿಗೆ ಬಸ್​ಗಳಲ್ಲಿ ಕಳುಹಿಸಿದರು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಿಂದ ಲಾರಿಯೊಂದರಲ್ಲಿ ಮಹಾರಾಷ್ಟ್ರದ ರಾಯಗಡಕ್ಕೆ ತೆರಳುತ್ತಿದ್ದ ವಲಸೆ ಕಾರ್ವಿುಕರನ್ನು ನಗರ ಹೊರವಲಯದ ವರೂರು ಬಳಿ ಅಧಿಕಾರಿಗಳು ತಡೆಹಿಡಿದರು.

    ಲಾರಿಯಲ್ಲಿದ್ದ 64 ಪುರುಷರು, 55 ಮಹಿಳೆಯರು ಹಾಗೂ 65 ಮಕ್ಕಳನ್ನು ಕೆಳಗಿಳಿಸಿ, ಎಲ್ಲರ ಥರ್ಮಲ್ ಸ್ಕ್ರೀನಿಂಗ್ ಹಾಗೂ ಇತರ ಆರೋಗ್ಯ ಪರೀಕ್ಷೆ ನಡೆಸಲಾಯಿತು. ಎಲ್ಲ ಕಾರ್ವಿುಕರು ಹಾಗೂ ಅವರ ಕುಟುಂಬದವರಿಗೆ ಬಿಸ್ಕೆತ್, ಹಾಲು, ಮಧ್ಯಾಹ್ನದ ಊಟ ವಿತರಿಸಲಾಯಿತು. ಜೊತೆಗೆ ಮಾಸ್ಕ್, ಕೈಗವಸನ್ನೂ ನೀಡಲಾಯಿತು. ನಂತರ ಸಾರಿಗೆ ಸಂಸ್ಥೆಯ ಪ್ರತಿ ಬಸ್​ನಲ್ಲಿ 30 ಜನರಂತೆ ಒಟ್ಟು 6 ಬಸ್​ಗಳಲ್ಲಿ ವಲಸೆ ಕಾರ್ವಿುಕರನ್ನು ರಾಜ್ಯದ ಗಡಿಯವರೆಗೆ ಕರೆದೊಯ್ಯಲಾಯಿತು.

    ಧಾರವಾಡ ಉಪ ವಿಭಾಗಾಧಿಕಾರಿ ಮಹ್ಮದ್ ಜುಬೇರ್, ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಸಿ, ಪೊಲೀಸ್ ಇನ್ಸ್​ಪೆಕ್ಟರ್ ಜಾಕ್ಸನ್ ಡಿಸೋಜಾ, ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ಎಸ್. ಹಿತ್ತಲಮನಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts