More

    ವರ್ಕ್ ಫ್ರಂ ಗುಡ್ಡ-ಬೆಟ್ಟ!

    ಸಿದ್ದಾಪುರ: ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಅನೇಕ ಸಾಫ್ಟ್​ವೇರ್ ಉದ್ಯೋಗಿಗಳು ಕರೊನಾ ಲಾಕ್​ಡೌನ್​ನಿಂದ ಹಳ್ಳಿ ಸೇರಿದ್ದಾರೆ. ಆದರೂ, ‘ವರ್ಕ್ ಫ್ರಂ ಹೋಮ್ (ಮನೆಯಲ್ಲೇ ಇದ್ದುಕೊಂಡು ಕಚೇರಿ ಕೆಲಸ ಮಾಡುವುದು) ಮಾತ್ರ ಮುಂದುವರಿದಿದೆ. ಆದರೆ, ಮೊಬೈಲ್​ಫೋನ್ ಸಿಗ್ನಲ್ ಕೊರತೆಯಿಂದ ಇವರು ‘ವರ್ಕ್ ಫ್ರಂ ಹಿಲ್’ ಎನ್ನುವಂತಹ ಪರಿಸ್ಥಿತಿ ತಲೆದೋರಿದೆ.

    ‘ವರ್ಕ್ ಫ್ರಂ ಹೋಮ್ ಮಾಡಲು ಮೊಬೈಲ್​ಫೋನ್ ಸಿಗ್ನಲ್, ಇಂಟರ್​ನೆಟ್ ಅತ್ಯಗತ್ಯ. ಆದರೆ, ಇಲ್ಲಿನ ಗ್ರಾಮೀಣದ ಪ್ರದೇಶದ ಮನೆಗಳಲ್ಲಿ ಇವರ ಕೆಲಸದ ವೇಗಕ್ಕೆ ಬೇಕಾಗುವ 4ಜಿ ಸಿಗ್ನಲ್ ಲಭ್ಯವಾಗುತ್ತಿಲ್ಲ. ಈ ಸಿಗ್ನಲ್ ಹುಡುಕಿಕೊಂಡು ಗುಡ್ಡ ಬೆಟ್ಟ ಅಲೆಯುವ ಸ್ಥಿತಿ ಬಂದಿದೆ.

    ಸ್ಥಿರ ದೂರವಾಣಿ, ಬಿಎಸ್​ಎನ್​ಎಲ್ ಹಾಗೂ ವಿವಿಧ ಖಾಸಗಿ ಕಂಪನಿ ಮೊಬೈಲ್​ಫೋನ್ ಟವರ್ ಇದ್ದರೂ ಗ್ರಾಮೀಣ ಪ್ರದೇಶದ ಮನೆಗಳಿಗೆ ಸರಿಯಾಗಿ ಸಿಗ್ನಲ್ ಬರುವುದಿಲ್ಲ. ಬಂದರೂ ಮಾತನಾಡಲಿಕ್ಕೆ ಆಗುವುದಿಲ್ಲ. ಇಂರ್ಟನೆಟ್ ಸಂಪರ್ಕ ಸರಿಯಾಗಿರುವುದಿಲ್ಲ. ಮೊಬೈಲ್​ಫೋನ್ ಸಿಗ್ನಲ್​ಗಾಗಿ ಗುಡ್ಡ-ಬೆಟ್ಟ, ಶಾಲೆ-ದೇವಸ್ಥಾನ , ಗದ್ದೆ-ತೋಟದಲ್ಲಿ ಹುಡುಕಾಡಿ ಎಲ್ಲಿ ಸಿಗ್ನಲ್ ಬರುತ್ತದೆಯೋ ಅಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಲ್ಯಾಪ್​ಟಾಪ್ ಹಿಡಿದು ಕುಳಿತು ಕೆಲಸ ಮಾಡಬೇಕಾಗಿದೆ ಎಂದು ಸಾಫ್ಟ್​ವೇರ್ ಇಂಜಿನಿಯರ್​ಗಳು ಗೋಳು ತೋಡಿಕೊಳ್ಳುತ್ತಿದ್ದಾರೆ.

    ಗ್ರಾಮೀಣ ಪ್ರದೇಶದಲ್ಲಿ ನೆಟ್​ವರ್ಕ್ ಸಮರ್ಪಕವಾಗಿ ಇಲ್ಲ. ವರ್ಕ್ ಫ್ರಮ್ ಹೋಮ್ಲ್ಲಿ ಕೆಲಸ ಮಾಡುವುದು ಕಷ್ಟಕರವಾಗಿದೆ. ಒಮ್ಮೆಲೆ ಇಂಟರ್ ನೆಟ್ ಸ್ಥಗಿತ, ಸಿಗ್ನಲ್ ಹೋಗುವುದರಿಂದ ತೊಂದರೆ ಆಗುತ್ತಿದೆ. ಪುನಃ ನೆಟ್​ವರ್ಕ್ ಬರುವತನಕ ಕಾಯಬೇಕಾಗಿದೆ. | ಗಿರೀಶ ಹೆಗಡೆ ಹಾಗೂ ಸಂತೋಷ ಹೆಗಡೆ ಹೊನ್ನೆಹದ್ದ ಸಾಫ್ಟ್​ವೇರ್ ಇಂಜಿನಿಯರ್ ಬೆಂಗಳೂರು

    ಲಾಕ್​ಡೌನ್​ನಿಂದಾಗಿ ಮನೆಯಲ್ಲಿಯೇ ಕುಳಿತು ಕೆಲಸ ಮಾಡಬೇಕಾಗಿದೆ. ಆದರೆ, ಮನೆಯಲ್ಲಿ ಕುಳಿತರೆ ಮೊಬೈಲ್​ಫೋನ್ ಸಿಗ್ನಲ್ ಬರುವುದಿಲ್ಲ. 2-3ಕಿ.ಮೀ. ದೂರ ಹೋಗಿ ಗುಡ್ಡ ಹತ್ತಿ ಮರದ ನೆರಳಿನಲ್ಲಿ ಕುಳಿತು ಕೆಲಸ ಮಾಡುತ್ತಿದ್ದೇನೆ. | ಅಕ್ಷತಾ ಅನಂತ ಭಟ್ಟ ಗಾಳೀಮನೆ ಸ್ಪೇಸ್​ವಾಸ್ಟ್ ಆರ್ಕಿಟೆಕ್ಸ್ ಬೆಂಗಳೂರು ಉದ್ಯೋಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts