More

    ಲಿಡ್ಕರ್ ಕಾಲನಿ ನಗರಸಭೆ ವ್ಯಾಪ್ತಿಗೆ ಸೇರ್ಪಡೆ!

    ಶಿರಸಿ: ಇಲ್ಲಿನ ಲಿಡ್ಕರ್ ಕಾಲನಿಯ ಸರ್ವೆ ನಂ. 151/ಎ ವ್ಯಾಪ್ತಿಯ ಐದು ಎಕರೆ ಜಾಗವನ್ನು ನಗರಸಭೆಗೆ ಸೇರಿಸಲು ಸಾಮಾನ್ಯ ಸಭೆಯಲ್ಲಿ ಠರಾವು ಮಾಡಿ ಅದನ್ನು ಸರ್ಕಾರಕ್ಕೆ ಸಲ್ಲಿಸಲು ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಜರುಗಿದ ಸಭೆಯಲ್ಲಿ ನಿರ್ಣಯಿಸಲಾಯಿತು.

    ಮೂಲಸೌಲಭ್ಯ ಕೊರತೆ ಎದುರಿಸುತ್ತಿದ್ದ ಲಿಡ್ಕರ್ ಕಾಲನಿ ನಾಗರಿಕರು ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ನಿರ್ಣಯ ಕೈಗೊಂಡ ಬೆನ್ನಿಗೆ ಅವರ ಜತೆಗೆ ಸಭೆ ನಡೆಸಿದ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ನಾಗರಿಕರ ಸಮಸ್ಯೆ ಆಲಿಸಿದರು. ಈ ವೇಳೆ ಮಾತನಾಡಿದ ಸ್ಥಳೀಯ ನಿವಾಸಿ ಲಕ್ಷ್ಮಣ ಮಾಳಕ್ಕನವರ, ಲಿಡ್ಕರ್ ಕಾಲನಿಯನ್ನು ದೊಡ್ನಳ್ಳಿ ಪಂಚಾಯಿತಿ ವ್ಯಾಪ್ತಿಯಿಂದ ನಗರಸಭೆಗೆ ಸೇರ್ಪಡೆಗೊಳಿಸುವುದು ಉತ್ತಮ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮನೆಗೂ, ನಗರಸಭೆ ವ್ಯಾಪ್ತಿಯ ಮನೆಗೂ ಕೇವಲ ಹತ್ತು ಅಡಿ ವ್ಯತ್ಯಾಸ. ಹಾಗಾಗಿ ಈ ಕ್ರಮವಾಗಬೇಕು. ಜಿಲ್ಲಾ ಸಂಯೋಜಕರ ಬಳಿ ಎಲ್ಲ ದಾಖಲೆಗಳಿವೆ. ಅವರು ದಾಖಲೆ ಸಲ್ಲಿಸುತ್ತಾರೆ. ಆದರೆ, ಸದ್ಯದ ಮೂಲಸೌಕರ್ಯಗಳ ಸಮಸ್ಯೆಯನ್ನು ಬಗೆಹರಿಸಿಕೊಡಿ ಎಂದು ಹೇಳಿದರು.

    ಈ ವೇಳೆ ಮಾತನಾಡಿದ ತಾಲೂಕು ಪಂಚಾಯಿತಿ ಇಒ ಎಫ್.ಜಿ. ಚಿನ್ನಣ್ಣನವರ್ ಗ್ರಾಮ ಪಂಚಾಯಿತಿಗೆ ಜಾಗ ಸೇರಿರಲಿಲ್ಲ. ತೆರಿಗೆ ಸಂಗ್ರಹ ಆಗುತ್ತಿರಲಿಲ್ಲ. ಹೀಗಾಗಿ ಅಭಿವೃದ್ಧಿ ಕೈಗೊಳ್ಳಲು ಆಗುತ್ತಿರಲಿಲ್ಲ ಎಂದು ತಿಳಿಸಿದರು.

    ನಗರಸಭೆ ಆಡಳಿತ ಮಂಡಳಿ ಎದುರು ಸಮಸ್ಯೆ ಗಮನಕ್ಕೆ ತಂದು ಲಿಡ್ಕರ್ ಕಾಲನಿ ಸೇರ್ಪಡೆಗೊಳಿಸಲು ತೀರ್ವನಿಸಲಾಗುವುದು ಎಂದು ಪೌರಾಯುಕ್ತ ರಮೇಶ ನಾಯಕ ಹೇಳಿದರು. ನೀರು ನಿಲ್ಲುವ ಸಮಸ್ಯೆಯನ್ನು ಬಗೆಹರಿಸಲು ಕಾಲುವೆ ಹೊಡೆಸಲಾಗುತ್ತದೆ ಎಂದು ಇದೇ ವೇಳೆ ಭರವಸೆ ನೀಡಿದರು. ಸಮಸ್ಯೆ ಆಲಿಸಿದ ತಹಸೀಲ್ದಾರರು, ಲಿಡ್ಕರ್ ಕಾಲನಿಯನ್ನು ನಗರಸಭೆಗೆ ಸೇರ್ಪಡೆಗೊಳಿಸಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts