More

    ಲಾಕ್ ಡೌನ್, ಕೋವಿಡ್ ನಿರ್ವಹಣೆ ಉತ್ತಮ

    ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನಲ್ಲಿ ಉತ್ತಮ ರೀತಿಯಲ್ಲಿ ಲಾಕ್​ಡೌನ್ ಹಾಗೂ ಕೋವಿಡ್-19 ನಿರ್ವಹಣೆ ಮಾಡಲಾಗಿದೆ. ಕೋವಿಡ್ ಸೇನಾನಿಗಳು, ಮಹಾನಗರ ಪಾಲಿಕೆ, ಸಂಘ-ಸಂಸ್ಥೆಗಳು, ಸಾರ್ವಜನಿಕರು, ತಾಲೂಕು ಆಡಳಿತದೊಂದಿಗೆ ಕೈ ಜೊಡಿಸಿ ಅನುಪಮ ಸೇವೆ ಸಲ್ಲಿಸಿದ್ದಾರೆ ಎಂದು ಹುಬ್ಬಳ್ಳಿ ಶಹರ ತಹಸೀಲ್ದಾರ್ ಶಶಿಧರ ಮಾಡ್ಯಾಳ ಹೇಳಿದರು.

    74ನೇ ಸ್ವಾತಂತ್ರ್ಯೊತ್ಸವ ನಿಮಿತ್ತ ನಗರದ ನೆಹರು ಮೈದಾನದಲ್ಲಿ ಶನಿವಾರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

    ಲಾಕ್​ಡೌನ್ ವೇಳೆ ರಾಜ್ಯ ಸರ್ಕಾರದ ನಿರ್ದೇಶನದಂತೆ ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ತಾಲೂಕಿನ 1,47,719 ಕುಟುಂಬಗಳಿಗೆ ಉಚಿತವಾಗಿ ಅಕ್ಕಿ, ಗೋಧಿ, ಬೇಳೆ ಸೇರಿದಂತೆ ಅಗತ್ಯ ಧಾನ್ಯಗಳನ್ನು ಪೂರೈಸಲಾಗಿದೆ. ಶ್ರೀ ಸಿದ್ಧಾರೂಢ ಮಠ ಟ್ರಸ್ಟ್, ಯುನೈಟೆಡ್ ಫಸ್ಟ್ ಸಂಜಯ ಗೋಡಾವತ್ ಗ್ರುಪ್, ಇನ್ಪೋಸಿಸ್ ಫೌಂಡೇಶನ್ ಹಾಗೂ ಇತರೆ ಸಂಸ್ಥೆಗಳು ನೀಡಿದ ಆಹಾರ-ಕಿಟ್​ಗಳನ್ನು ಸಂತ್ರಸ್ತರಿಗೆ ವಿತರಿಸಲಾಗಿದೆ ಎಂದರು.

    ಸನ್ಮಾನ: ಕಿಮ್್ಸ ಪ್ರಭಾರ ವೈದ್ಯಕೀಯ ಅಧೀಕ್ಷಕ ಡಾ. ಅರುಣ ಕುಮಾರ್ ಸಿ., ಗರುನಾನಕ್ ಕಮಿಟಿಯ ಜಸಮೀಲ ಸಿಂಗ್ ಗಿಲ್, ಸಿದ್ಧಾರೂಢ ಟ್ರಸ್ಟ್ ಕಮಿಟಿಯ ಡಿ.ಡಿ. ಮಾಳಗಿ, ಯುನೈಟೆಡ್ ಫಸ್ಟ್ ಸಂಜಯ ಗೋಡಾವತ ಗ್ರುಪ್​ನ ಧ್ರುವ ಬೊಹರಾ, ಮೆಟ್ರೋ ಪೊಲಿಸ್ ಹೋಟೆಲ್ ಮಾಲೀಕ ಅಶ್ರಫ ಅಲೀ ಬಷೀರ ಅಹ್ಮದ್, ಪಾಲಿಕೆಯ ವೈದ್ಯಾಧಿಕಾರಿ ಡಾ. ಪ್ರಕಾಶ್ ನರಗುಂದ, ಶುಶ್ರೂಷಕಿ ಅಂಕಮ್ಮ ಆನಂದರಾಮ್ ಮೀರಿಯಾಲ್, ಆರೋಗ್ಯ ನಿರೀಕ್ಷಕಿ ಹೀನಾ ಕೌಸರ್, ಆಂಬುಲೆನ್ಸ್ ಚಾಲಕ ರಮೇಶ ನರಗುಂದ, ಗ್ರೂಪ್ ಡಿ ನೌಕರ ಹನುಮಂತಪ್ಪ, ಡಾ. ಮಹಮದ್ ಫಾರೂಕ ಉಪ್ಪಿನ, ಶುಶ್ರೂಷಕಿ ಸುನೀತಾ ಬಾಕಳೆ, ಕಿರಿಯ ಆರೋಗ್ಯ ಸಹಾಯಕ ಸುಧೀರ ದೇಸಾಯಿ, ಆಂಬುಲೆನ್ಸ್ ಚಾಲಕ ಅಂದಾನಪ್ಪ ದೊಡ್ಡಮನಿ, ಗ್ರೂಪ್ ಡಿ ಸಿಬ್ಬಂದಿ ಎಲೀಷಾ ಅಶೋಕ ಸಾವನಗೌಡ್ರ, ಪಿಎಸ್​ಐ ಭೀಮಪ್ಪ ಸಾತಣ್ಣವರ, ಎಎಸ್​ಐ ಎ.ಎ. ಬಡೇಖಾನವರ, ಸಿಎಚ್​ಸಿ ಬಿ.ಎಸ್. ನಲ್ಲೂರ, ಎಎಚ್​ಸಿ ಡಿ.ಎಫ್. ಮಡಿವಾಳರ, ಸಿಪಿಸಿ ಎಚ್.ಟಿ. ಬ್ಯಾಡಗಿ ಅವರನ್ನು ಸನ್ಮಾನಿಸಲಾಯಿತು.

    ಎಂಎಲ್​ಸಿಗಳಾದ ಬಸವರಾಜ ಹೊರಟ್ಟಿ, ಪ್ರದೀಪ ಶೆಟ್ಟರ, ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ, ಭೂದಾಖಲೆ ಸಹಾಯಕ ನಿರ್ದೇಶಕ ಅನಿಲ್ ಕುಮಾರ ಜಾಲಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ, ಗ್ರಾಮೀಣ ಸಿಪಿಐ ಸಿ.ವಿ. ಪಾಟೀಲ ಇತರರು ಇದ್ದರು.

    ಸೋಂಕಿನ ವಿರುದ್ಧ ಹೋರಾಡೋಣ

    ಹುಬ್ಬಳ್ಳಿ: ಕಳೆದ ವರ್ಷ ಅತಿವೃಷ್ಟಿ, ಈ ಬಾರಿ ಕೋವಿಡ್ ಮಹಾಮಾರಿಯಿಂದ ಬಹಳಷ್ಟು ಜನರು ತೊಂದರೆ ಅನುಭವಿಸಿದ್ದಾರೆ. ತಾಲೂಕು ಆಡಳಿತ ಕೋವಿಡ್ ಅನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ. ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ವೈದ್ಯಾಧಿಕಾರಿಗಳು, ನರ್ಸ್, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್, ಗ್ರಾಪಂ ನೌಕರರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಒಟ್ಟಾಗಿ ಕೆಲಸ ನಿರ್ವಹಿಸಬೇಕು ಎಂದು ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಪ್ರಕಾಶ್ ನಾಶಿ ಹೇಳಿದರು.

    ನಗರದ ಮಿನಿವಿಧಾನ ಸೌಧದಲ್ಲಿ 74ನೇ ಸ್ವಾತಂತ್ರೊ್ಯೕತ್ಸವ ನಿಮಿತ್ತ ಶನಿವಾರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

    ಸರ್ಕಾರದ ಸೂಚನೆಯಂತೆ ಪರಸ್ಪರ ಅಂತರ ಹಾಗೂ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸಿ, ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.

    ಹುಬ್ಬಳ್ಳಿ ನಗರ ತಹಸೀಲ್ದಾರ್ ಶಶಿಧರ ಮಾಡ್ಯಾಳ, ಭೂದಾಖಲೆ ಸಹಾಯಕ ನಿರ್ದೇಶಕ ಅನಿಲ್ ಕುಮಾರ್ ಜಾಲಗೇರಿ, ಅಪರ ಜಿಲ್ಲಾ ಖಜಾನಾಧಿಕಾರಿ ಉಲ್ಲಾಸ ನಿಂಗರೆಡ್ಡಿ, ಅಪರ ತಹಸೀಲ್ದಾರ್ ವಿಜಯಕುಮಾರ್ ಕಡಕೋಳ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts