More

    ರೈತರ ಆದಾಯ ದ್ವಿಗುಣಕ್ಕೆ ಕೇಂದ್ರ ಬದ್ಧ

    ಹುಬ್ಬಳ್ಳಿ: 2022ರೊಳಗೆ ರೈತರ ಆದಾಯ ದ್ವಿಗುಣಗೊಳಿಸಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಸಲಹಾ ಸಮಿತಿಯೊಂದನ್ನು ರಚಿಸಿದ್ದು, ಹಲವಾರು ಮಹತ್ವದ ತೀರ್ಮಾನ ಕೈಗೊಳ್ಳಲಿದೆ ಎಂದು ರಾಷ್ಟ್ರೀಯ ಮಳೆ ಆಶ್ರಿತ ಪ್ರದೇಶ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅಶೋಕ ದಳವಾಯಿ ತಿಳಿಸಿದರು.

    ಧಾರವಾಡ ಕೃಷಿ ವಿವಿ ಹಾಗೂ ಹು-ಧಾ ಅಗ್ರೊ ಟ್ರೇಡರ್ಸ್ ಸಂಘದ ಸಹಯೋಗದೊಂದಿಗೆ ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ ‘ಕೃಷಿಯ ಉದಯೋನ್ಮುಖ ನಿರೀಕ್ಷೆ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಪ್ರತಿ 6-7 ಕಿಮೀಗೆ ಒಂದು ಕೃಷಿ ಮಾರುಕಟ್ಟೆ ಲಭ್ಯವಿರಬೇಕು, ಖಾಸಗಿ ಎಪಿಎಂಸಿಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಿ ಸರ್ಕಾರಿ ಎಪಿಎಂಸಿಗಳೊಂದಿಗೆ ಪೈಪೋಟಿ ಉಂಟುಮಾಡುವುದು, ಪ್ರತಿ ಜಿಲ್ಲೆಯಲ್ಲಿ ರೈತರ ಉತ್ಪಾದನೆಯನ್ನು ನೇರವಾಗಿ ಮಾರುಕಟ್ಟೆಗೆ ತಲುಪಿಸುವುದು ಕೇಂದ್ರದ ಉದ್ದೇಶ. ಇವುಗಳ ಈಡೇರಿಕೆಗೆ ಅಗತ್ಯ ಸೌಲಭ್ಯ ಹಾಗೂ ವಾತಾವರಣ ನಿರ್ವಿುಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದರು.

    ಇಂದಿಗೂ ದೇಶದ ಅರ್ಧದಷ್ಟು ಜನ ಕೃಷಿ ಮೇಲೆ ಅವಲಂಬಿತರಾಗಿದ್ದಾರೆ. ಕೃಷಿ ಕೇವಲ ಆಹಾರ ಉತ್ಪಾದನೆಗೆ ಸೀಮಿತವಾಗಬಾರದು. ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳನ್ನು ಉತ್ಪಾದಿಸುವ ಕ್ಷೇತ್ರವಾಗಿ ಬದಲಾಗಬೇಕು. ಉದ್ಯೋಗ ಸೃಷ್ಟಿಸುವವನಾಗಿ ರೈತ ಬದಲಾಗಬೇಕು. ಇಲ್ಲಿನ ಉತ್ಪನ್ನ ರಫ್ತು ಆಗಬೇಕು. ಅಂದಾಗ ರೈತರ ಆದಾಯ ಹೆಚ್ಚಾಗಲು ಸಾಧ್ಯ ಎಂದು ಹೇಳಿದರು.

    ಬೆಳಗಾವಿ ರಾಣಿ ಚನ್ನಮ್ಮ ವಿವಿ ವಿಶ್ರಾಂತ ಉಪ ಕುಲಪತಿ ಡಾ. ಎಸ್.ಬಿ. ಹೊಸಮನಿ, ಸಂಸ್ಥೆಯ ಅಧ್ಯಕ್ಷ ಮಹೇಂದ್ರ ಲದ್ದಡ, ಉಪಾಧ್ಯಕ್ಷ ವಿನಯ ಜವಳಿ, ಮಾಜಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ, ಸಿದ್ದೇಶ್ವರ ಕಮ್ಮಾರ, ಬಾಳು ಪಾಟೀಲ, ಅಶೋಕ ಗಡಾದ ಇತರರಿದ್ದರು.

    2024ರೊಳಗೆ ಬಯೊ ಎಕನಾಮಿಯಿಂದ 100 ಬಿಲಿಯನ್ ಡಾಲರ್ ಉತ್ಪಾದಿಸಬೇಕೆಂಬುದು ಪ್ರಧಾನಿಯವರ ಆಶಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವಾರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ.

    | ಡಾ. ಅಶೋಕ ದಳವಾಯಿ, ಸಿಇಒ, ಎನ್​ಆರ್​ಎಎ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts