More

    ರಾಷ್ಟ್ರೀಯ ಪಂದ್ಯಗಳಲ್ಲಿ ಗೆದ್ದು ರಾಜ್ಯಕ್ಕೆ ಕೀರ್ತಿ ತನ್ನಿ

    ಚಿತ್ರದುರ್ಗ: ಪಠ್ಯದೊಂದಿಗೆ ಕ್ರೀಡಾ ಚಟುವಟಿಕೆಗಳು ಕೂಡ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಸಹಕಾರಿಯಾಗುತ್ತವೆ ಎಂದು ಶ್ರೀ ಮಾದಾರ ಚನ್ನ ಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಹೇಳಿದರು.
    ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾಹ್ಯಾಂಡ್‌ಬಾಲ್ ಸಂಸ್ಥೆ ಆಶ್ರಯದಲ್ಲಿ ಹೊಸದಿಲ್ಲಿ ಹಾಗೂ ಉತ್ತರಪ್ರದೇಶದಲ್ಲಿ ನಡೆಯುವ ರಾಷ್ಟ್ರೀಯ ಹ್ಯಾಂಡ್‌ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿರುವ ಕ್ರೀಡಾಪಟುಗಳಿಗೆ, ನಗರದ ವಿಪಿ ಬಡಾವಣೆ ಸರ್ಕಾರಿ ಪ್ರಾಥಮಿಕ ಶಾಲಾ ಆವರಣ ದಲ್ಲಿ ಸೋಮವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
    ಓದಿನೊಂದಿಗೆ ಕ್ರೀಡೆ ನಿಮ್ಮಲ್ಲಿ ಆತ್ಮ ವಿಶ್ವಾಸ ವೃದ್ಧಿಸಿ ಬದುಕಿಗೆ ನೆರವು ನೀಡಲಿದೆ. ಉದ್ಯೋಗದಲ್ಲಿ ಕ್ರೀಡಾಪಟುಗಳಿಗೆ ಆದ್ಯತೆ ಇದೆ. ದೊರೆತಿರುವ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು, ಪಂದ್ಯಾವಳಿಗಳಲ್ಲಿ ಜಯ ಸಾಧಿಸುವ ಮೂಲಕ ಜಿಲ್ಲೆ, ರಾಜ್ಯಕ್ಕೆ ಕೀರ್ತಿಯ ನ್ನು ತೆಗೆದುಕೊಂಡು ಬನ್ನಿ.
    ಪ್ರಯಾಣದ ವೇಳೆ ರೈಲಿನಲ್ಲಿ ಎಲ್ಲಿ, ಬೇಕೆಂದರೆ ಅಲ್ಲಿ ಇಳಿಯದೆ ಕ್ಷೇಮವಾಗಿ ಹೋಗಿ ಬರುವಂತೆ ಕ್ರೀಡಾಪಟುಗಳಿಗೆ ಕಿವಿಮಾತು ಹೇ ಳಿದ ಸ್ವಾಮೀಜಿ, ಕ್ರೀಡಾಕೂಟದ ಎರಡು ತಂಡಗಳಿಗೆ ನಮ್ಮ ಜಿಲ್ಲೆಯವರು ನಾಯಕರಾಗಿರುವುದು ಹೆಮ್ಮೆಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ನಾಗಭೂಷಣ್ ಮಾತನಾಡಿ,ಕ್ರೀಡಾ ಮನೋಭಾವದಿಂದ ಪಂದ್ಯಾವಳಿಯಲ್ಲಿ ಭಾಗವಹಿಸುವಂತೆ ವಿದ್ಯಾ ರ್ಥಿಗಳಿಗೆ ಸಲಹೆ ನೀಡಿದರು.
    ಜಿಲ್ಲಾ ಹ್ಯಾಂಡ್‌ಬಾಲ್ ಸಂಸ್ಥೆ ಕಾರ್ಯಾಧ್ಯಕ್ಷ ಕೆ.ಎಚ್.ಶಿವರಾಮ್ ಮಾತನಾಡಿ,ಡಿ.12ರಿಂದ 16ರವರೆಗೆ ಹೊಸದಿಲ್ಲಿಯಲ್ಲಿ 14 ವರ್ಷ ದೊಳಗಿನ ಬಾಲಕ/ಬಾಲಕಿಯರ ಹಾಗೂ 15ರಿಂದ 20ರವರೆಗೆ ವಾರಣಾಸಿಯಲ್ಲಿ ನಡೆಯುವ 20ವರ್ಷದೊಳಗಿನ ಬಾಲಕಿಯರ ವಿಭಾ ಗದ ಪಂದ್ಯಾವಳಿಗಳು ನಡೆಯಲಿವೆ. ಇದರಲ್ಲಿ ಚಿತ್ರದುರ್ಗ ಜಿಲ್ಲೆಯಿಂದ 11 ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ.
    ಹೊಸದಿಲ್ಲಿ ಪಂದ್ಯಾವಳಿಗೆ ಎನ್.ಪ್ರಜ್ವಲ್,ಎನ್.ದಿಗಂತಕುಮಾರ್,ಎಸ್.ಪುಷ್ಪಲತಾ,ಆರ್.ಮಂಜುನಾಥ್, ಎಸ್.ತೇಜಸ್ವಿನಿ ಡಿ.ಎಂ. ಸುನೀಲ್, ಎನ್.ಪಲ್ಲವಿ, ಎ.ಸುನೀಲ್ ಹಾಗೂ ವಾರಾಣಸಿ ಪಂದ್ಯಾವಳಿಗೆ ಸಾನಿಯಾ, ಎ.ಸುಮಾ,ರಂಜಿತಾ ಅವರು ಚಿತ್ರದುರ್ಗ ಜಿಲ್ಲೆ ಯಿಂದ ಆಯ್ಕೆಯಾಗಿದ್ದಾರೆ. 14 ವರ್ಷದೊಳಗಿನ ಬಾಲಕರ ತಂಡಕ್ಕೆ ಚಿತ್ರದುರ್ಗದ ಎನ್.ಪ್ರಜ್ವಲ್ ನಾಯಕ ಹಾಗೂ 20 ವರ್ಷದ ಬಾ ಲಕಿಯರ ತಂಡಕ್ಕೆ ಚಿತ್ರದುರ್ಗದ ಸಾನಿಯಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದರು.
    ಸಂಸ್ಥೆ ಉಪಾಧ್ಯಕ್ಷ ಎಂ.ಎಚ್.ಜಯಣ್ಣ, ದೈಹಿಕ ಶಿಕ್ಷಣ ನಿರ್ದೇಶಕರಾದ ಸಂಪತ್,ರವಿಶಂಕರ್,ಮುಖ್ಯಶಿಕ್ಷಕರಾದ ರಘು, ಸುರೇಶ್ ಹಾಗೂ ಸಿ.ಎಸ್.ಪ್ರೇಮಾನಂದ್, ಚಿದಾನಂದಪ್ಪ, ರವಿಶಂಕರ್ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts