More

    ರಾಮೇಶ್ವರ ದೇಗುಲ ಲೋಕಾರ್ಪಣೆ ಸಜ್ಜು

    ಚಿತ್ರದುರ್ಗ: ಹೊಸದುರ್ಗ ತಾಲೂಕು ಬುರುಡೇಕಟ್ಟೆ ಗ್ರಾಮದ ಶ್ರೀರಾಮೇಶ್ವರ ಸ್ವಾಮಿಯ ದೇಗುಲ ಪ್ರಾರಂಭೋತ್ಸವ, ಈಶ್ವರ ಲಿಂಗು, ಭೈರವೇಶ್ವರ, ನಂದಿ, ಚೌಡೇಶ್ವರಿ ದೇವಿ, ಗಣಪತಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಫೆ. 16 ಮತ್ತು 17ರಂದು ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ನಾಗರಾಜಪ್ಪ ತಿಳಿಸಿದರು.

    ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆನೆಗೊಂದಿ ಸರಸ್ವತಿ ಪೀಠ, ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಶ್ರೀ ಪುಟ್ಟಸ್ವಾಮಿ ಅವರ ಸಾನಿಧ್ಯದಲ್ಲಿ ಮಹೋತ್ಸವ ಜರುಗಲಿದೆ ಎಂದರು.

    16ರಂದು ಬ್ರಾಹ್ಮೀ ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹವಾಚನ, ರಾಮೇಶ್ವರ ದೇಗುಲಕ್ಕೆ ಲಕ್ಷ್ಮೀರಂಗನಾಥ ಸ್ವಾಮಿಯೊಂದಿಗೆ ಗಂಗಾಪ್ರವೇಶ, ಗೋಪೂಜೆ ನಡೆಯಲಿದೆ. ಬೆಳಗ್ಗೆ 11ಕ್ಕೆ ಬಸವಾಪುರದ ಗುರು ಕಲ್ಲೇಶ್ವರ, ಬಳ್ಳೇಕೆರೆ ಆಂಜನೇಯ ಸ್ವಾಮಿ, ದುರ್ಗಮ್ಮ ದೇವಿ ಉತ್ಸವ ಮೂರ್ತಿಗಳನ್ನು ರಾಮೇಶ್ವರ ದೇಗುಲಕ್ಕೆ ಕರೆತರಲಾಗುವುದು ಎಂದು ಹೇಳಿದರು.

    ರಕ್ಷಾಬಂಧನ, ಯಾಗಶಾಲಾ, ಅಂಕುರಾರ್ಪಣ, ಆಚಾರ್ಯಋತ್ವಿಗ್ವಾರಣ, ಪ್ರಧಾನ ಕಲಶ ಪೂಜೆ, ದುರ್ಗಾ, ನವಗ್ರಹ, ಅಷ್ಠದಿಕ್ಪಾಲಕ, ವೈಶ್ವಕರ್ಮಣ, ಪಂಚಬ್ರಹ್ಮ, ರಾಷೋಘ್ನ ಹೋಮ, ಪೂರ್ಣಾಹುತಿ ನಂತರ ಮಹಾಮಂಗಳಾರತಿ ನೆರವೇರಲಿದೆ ಎಂದರು.

    17ರಂದು ದೇವತಾ ಮೂರ್ತಿಗಳನ್ನು ಅಷ್ಠಬಂಧ ಸಹಿತಾ ಪ್ರತಿಷ್ಠಾಪನೆ, ನೇತ್ರೋನ್ಮಿಲನ, ಕದಳಿ ಛೇದನ, ದೇನು ದರ್ಶನ ಪೂಜೆಗಳು ನಡೆಯಲಿವೆ. ವಿರಕ್ತ ಮಹಾಸಂಸ್ಥಾನ ಮಠ ಶ್ರೀ ಡಾ.ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಸ್ವಾಮೀಜಿ ಕಳಸಾರೋಹಣ ನೆರವೇರಿಸುವರು. ಕನಕಾ, ಪಂಚಾಮೃತ ಅಭಿಷೇಕ, ಗಣ, ಕಲಾತತ್ವ, ದುರ್ಗಾ, ಪುರುಷಸೂಕ್ತ ಹೋಮ, ಪೂರ್ಣಾಹುತಿ ಜರುಗಲಿದೆ ಎಂದು ತಿಳಿಸಿದರು.

    ಗುರುಮೂರ್ತಿ ಶಿವಾಚಾರ್ಯ ಶ್ರೀ, ದಯಾನಂದಪುರಿ ಶ್ರೀ, ನಂದೀಶ್ವರ ಶ್ರೀ, ಉಜ್ಜಯಿನಿ ಮಠದ ಹಾಲಯ್ಯ ಅವರು ಸಾನಿಧ್ಯ ವಹಿಸಲಿದ್ದಾರೆ. ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಸೇರಿ ಜನಪ್ರತಿನಿಧಿಗಳು, ಅಧಿಕಾರಿಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

    ಬುರುಡೇಕಟ್ಟೆ ಮಂಜಪ್ಪ, ಪ್ರದೀಪ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts