More

    ರಾಜ್ಯ ಸರ್ಕಾರ ಹೈಕಮಾಂಡ್‌ಎಟಿಎಂ

    ಬಳ್ಳಾರಿ : ಈ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಸರ್ಕಾರ ಕಾಂಗ್ರೆಸ್ ಹೈಕಮಾಂಡ್ ಗೆ ಎಟಿಎಂ ಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ವಾಗ್ದಳಿ ನಡೆಸಿದರು.
    ನಗರದ ವೀ.ವಿ. ಸಂಘದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. 2023ನಲ್ಲಿ ನಡೆದ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದಾರೆ. ನಾನು ಓರ್ವ ಕೇಂದ್ರ ಸಚಿವನಾಗಿ ಹಾಗೂ ಜನರ ಇಚ್ಛೆಯಂತೆ ಈ ಸರ್ಕಾರ ಐದು ವರ್ಷ ಪೂರೈಸಬೇಕು. ಮೊಘಲ್ ದೊರೆ ತುಘಲಕ್ ದರ್ಬಾರ್ ಆಗಬಾರದು ಎಂದು ಟೀಕಿಸಿದರು. ಆದರೆ, ಆಂತರಿಕ ಅಸಮಾಧಾನದ ಕಾರಣಕ್ಕೆ ಸರ್ಕಾರ ಬಲಿ ಆದರೆ ಏನು ಮಾಡಲಾಗದು. ಸರ್ಕಾರ ವರ್ಷದಲ್ಲಿ ಮಾಡಿದ ಸಾಧನೆ ಶೂನ್ಯ. ಸರ್ಕಾರ ವರ್ಷ ಪೂರೈಸಿದರೂ ಒಂದೇ ಒಂದು ಕಿಮೀ ರಸ್ತೆ ಮಾಡಿಲ್ಲ. ಬಸ್‌ಗಳಿಗೆ ಡೀಸೆಲ್ ಇಲ್ಲ, ಆಸ್ಪತ್ರೆಗಳಿಗೆ ಔಷಧಿ ಇಲ್ಲ, ಮೂರು ತಿಂಗಳಾದರೂ ಸರ್ಕಾರಿ ನೌಕರರಿಗೆ ವೇತನ ನೀಡಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ತುಷ್ಟೀಕರಣ ನೆಪದಲ್ಲಿ ರಾಮೇಶ್ವರ ಬಾಂಬ್ ಸ್ಫೋಟವನ್ನು ಸಿಲಿಂಡರ್ ಸ್ಫೋಟ ಅಂದರು. ಬಯಲಾದ ಮೇಲೆ ಮಾಮೂಲು ಹೇಳಿಕೆ ನೀಡಿದರು ಎಂದು ಅವರು ಕಿಡಿಕಾರಿದರು. ಇಂಥ ವಿಷಯಗಳ ವಿರುದ್ಧ ಧ್ವನಿ ಎತ್ತಿದವರ ಮೇಲೆ ಕೇಸ್ ಹಾಕಿ ಬೆದರಿಕೆ ಒಡ್ಡಲಾಗುತ್ತಿದೆ. ರಾಜ್ಯದಲ್ಲಿ ಅತ್ಯಂತ ಈ ಅದಕ್ಷ ಶಿಕ್ಷಣ ಸಚಿವರನ್ನು ಶಿಕ್ಷಕರು ನೋಡುತ್ತಿದ್ದಾರೆ. ಕರ್ನಾಟಕದಲ್ಲಿದ್ದು ಕನ್ನಡ ಬರಲ್ಲ ಅಂತಾ ಹೇಳುತ್ತಾರೆ. ಆದರೆ, ಮೋದಿ ಅವರಿಗೆ ಕನ್ನಡ ಬರುತ್ತೆ ಎಂದು ಪ್ರಶ್ನೆ ಮಾಡುತ್ತಾರೆ. ಅಜ್ಞಾನ, ಅಹಂಕರ ಹಾಗೂ ಮೂರ್ಖತನದಿಂದ ಮಾತನಾಡುತ್ತಿದ್ದರು. ಇವೆಲ್ಲವೂ ಸರ್ಕಾರ ದಿವಾಳಿತನಕ್ಕೆ ಸಾಕ್ಷಿಯಾಗಿದ್ದು ಭ್ರಷ್ಟಾಚಾರ ತಾಂಡವ ಆಡುತ್ತಿದೆ ಎಂದರು. ಕರ್ನಾಟಕದಲ್ಲಿ ಚುನಾವಣೆ ಬಳಿಕ ಸರ್ಕಾರ ಪತನವಾಗಲಿದೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಹೇಳಿದ್ದಾರೆ. ಆದರೆ, ಅವರು ಯಾವ ವಿಚಾರಕ್ಕೆ ಹೇಳಿದ್ದಾರೆ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಅಂತರಿಕ ಗೊಂದಲ ಬಹಳವಿದೆ. ಅಧ್ಯಕ್ಷರ ಬದಲಾವಣೆ ಮಾಡಬೇಕು, ಮೂವರು ಡಿಸಿಎಂ ಆಗಬೇಕು ಎಂಬ ಚರ್ಚೆಗಳಿಂದ ಹಲವು ಗೊಂದಲಗಳು ಇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts