More

    ರಾಜ್ಯಮಟ್ಟದ ಪತ್ತಿನ ಸಹಕಾರಿ ಸಂಘ ಸ್ಥಾಪನೆ

    ಅಕ್ಕಿಆಲೂರ: ಸಮಾಜದ ನೌಕರರ ಹಿತಕಾಯುವ ಹಾಗೂ ಆರ್ಥಿಕ ಸಬಲತೆಗೆ ಕೈಜೋಡಿಸುವ ಸದುದ್ದೇಶಕ್ಕಾಗಿ ಕರ್ನಾಟಕ ವೀರಶೈವ ಲಿಂಗಾಯತ ನೌಕರರ ಪತ್ತಿನ ಸಹಕಾರಿ ಸಂಘ ಸ್ಥಾಪನೆಗೆ ಮುಂದಾಗಿದ್ದು, ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ ಜಿಲ್ಲಾ ಮಟ್ಟದಲ್ಲಿಯೂ ಸಂಘ ಸ್ಥಾಪನೆ ಗುರಿ ಹೊಂದಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿಶ್ವನಾಥ ಹಿರೇಮಠ ಹೇಳಿದರು.

    ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯತ ನೌಕರರ ಸಭೆಯಲ್ಲಿ ಅವರು ಅವರು ಮಾತನಾಡಿದರು.

    ಸಮುದಾಯದ ಹಿತಕ್ಕಾಗಿ ಕಟ್ಟಿಕೊಂಡು ಸಂಘ- ಸಂಸ್ಥೆಗಳು ನೌಕರರ ಸಂಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕು. ಇದಕ್ಕಾಗಿ ಒಂದು ಸಂಸ್ಥೆಯ ಅಗತ್ಯವಿದೆ. ಎಲ್ಲ ಕಾಲಕ್ಕೂ ನೌಕರರು ತಮ್ಮ ಪ್ರಾಮಾಣಿಕ ಸೇವೆಯ ಮೂಲಕ ಕರ್ತವ್ಯ ನಿಭಾಯಿಸಿಕೊಂಡು, ಅದರಲ್ಲಿಯೇ ಬಿಡುವು ಮಾಡಿಕೊಂಡು ಸಮಾಜದ ಹಿತಕ್ಕೆ ಕೈ ಜೋಡಿಸಬೇಕು. ಆರ್ಥಿಕ ಸಬಲತೆಗಾಗಿ ಬ್ಯಾಂಕ್​ಗಳ ಬೆಂಬಲ ಬೇಕೇ ಬೇಕು. ಇದರೊಂದಿಗೆ ಬಂಡವಾಳ ಹೂಡುವವರು, ಹೂಡಿದ ಬಂಡವಾಳವನ್ನು ಪಡೆದು ಸತ್ಕಾರ್ಯಕ್ಕೆ ಬಳಸಿ, ಉಳಿಸಿ, ಬೆಳೆದು ಸಕಾಲಿಕವಾಗಿ ಮರುಪಾವತಿಗೂ ಆದ್ಯತೆ ನೀಡಬೇಕು. ರಾಜ್ಯ ಮಟ್ಟದಲ್ಲಿ ಇಂಥ ಬ್ಯಾಂಕ್ ಸ್ಥಾಪನೆ ವೀರಶೈವ ಲಿಂಗಾಯತ ಸಮುದಾಯದ ಒಟ್ಟು ಆರ್ಥಿಕ ಸಬಲತೆ ಗುರಿ ಹೊಂದಿದೆ ಎಂದರು.

    ಪಶುಸಂಗೋಪನೆ ಇಲಾಖೆ ಸಚಿವರ ಆಪ್ತ ಸಹಾಯಕ ಡಾ. ಸುರೇಶಗೌಡ ಪಾಟೀಲ ಮಾತನಾಡಿ, ಪತ್ತಿನ ಸಂಘ ಸ್ಥಾಪನೆಗೆ ಪರವಾನಗಿ ಪಡೆಯಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳನ್ನು ಸಂರ್ಪಸಿ ವೀರಶೈವ ಲಿಂಗಾಯತ ಸಮುದಾಯದ ನೌಕರರನ್ನು ಒಗ್ಗೂಡಿಸುವ ಮೂಲಕ ಇಂಥದ್ದೊಂದು ಆರ್ಥಿಕ ಸಂಸ್ಥೆ ಕಟ್ಟಲು ಎರಡು ವರ್ಷಗಳಿಂದ ಚಿಂತನೆ ನಡೆದು ಈಗ ಸಾಕಾರಗೊಳ್ಳುತ್ತಿದೆ. ರಾಜ್ಯಾದ್ಯಂತ ಅತ್ಯುತ್ತಮ ಬೆಂಬಲ ವ್ಯಕ್ತವಾಗಿದೆ. ಇದರೊಂದಿಗೆ ಸಮುದಾಯದ ದುರ್ಬಲರ ಹಿತಕ್ಕೆ ಸಹಾಯ ನೀಡುವ ಉದ್ದೇಶವೂ ಇದೆ ಎಂದರು.

    ಸಭೆಯಲ್ಲಿ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಪೊ›.ಮಾರುತಿ ಶಿಡ್ಲಾಪೂರ ಮಾತನಾಡಿದರು. ತಹಸೀಲ್ದಾರ್ ಪಿ.ಎಸ್. ಯರ್ರಿಸ್ವಾಮಿ, ವಾಣಿಜ್ಯ ತೆರಿಗೆ ಅಧಿಕಾರಿ ಸೋಮಶೇಖರ, ಪೊಲೀಸ್ ಇನ್ಸ್​ಪೆಕ್ಟರ್ ಎಚ್.ಬಿ. ಸುನೀಲ, ಜಿಲ್ಲಾ ಗೌರವಾಧ್ಯಕ್ಷ ಎಸ್.ಬಿ. ಕಿನ್ನಾಳ, ಫಕೀರೇಶ ಮರಡೂರ, ಸಮಾಜದ ನೌಕರರ ಹಿರೇಕೇರೂರು ತಾಲೂಕು ಘಟಕದ ಅಧ್ಯಕ್ಷ ಸುರೇಶಕುಮಾರ, ಕಾರ್ಯದರ್ಶಿ ನಾಗರಾಜ ಮಾಳಗಿಮನಿ, ಹಾನಗಲ್ಲ ತಾಲೂಕು ಗೌರವಾಧ್ಯಕ್ಷ ನಿರಂಜನ ಗುಡಿ, ಅಧ್ಯಕ್ಷ ಬಿ.ಎಸ್. ಕರಿಯಣ್ಣನವರ, ಕಾರ್ಯದರ್ಶಿ ಎಸ್.ವಿ. ಮಠದ ಸೇರಿದಂತೆ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts