More

    ರಾಚೋಟೇಶ್ವರ ಅಗ್ನಿ ಕುಂಡ ಹಾಯ್ದ ಭಕ್ತರು

    ಕೆರೂರ: ಅಂತಾರಾಜ್ಯ ಖ್ಯಾತಿಯ ಕೆರೂರದ ರಾಚೋಟೇಶ್ವರ ಜಾತ್ರಾ ಮಹೋತ್ಸವದ ಎರಡನೇ ದಿನ ಶನಿವಾರ ರಾತ್ರಿ ಅಗ್ನಿಹಾಯುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

    ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮ ಸೇರಿ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರದಿಂದ ಸಾವಿರಾರು ಭಕ್ತರು ಈ ಅಗ್ನಿ ಉತ್ಸವದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು. ಅಗ್ನಿಹಾಯುವ ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡ ಪುರವಂತರು ಯುಗಾದಿಯಿಂದ ಆರಂಭವಾಗಿದ್ದ ಧಾರ್ಮಿಕ ಕಾರ್ಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರು.

    ಅಂದಾಜು 30 ಅಡಿ ಉದ್ದಗಲದಲ್ಲಿ ಹರಡಲಾದ ಅಗ್ನಿಕುಂಡಕ್ಕೆ ಎಲ್ಲ ರೀತಿಯ ಪೂಜೆ ಮಾಡಿ ಅಗ್ನಿ ಪ್ರವೇಶಿಸಲಾಯಿತು. ದೇವರನ್ನು ನೆನೆಯುತ್ತ ಪಲ್ಲಕ್ಕಿ, ನಂದಿಕೋಲು ಹಿಂಬಾಲಿಸಿದ ಭಕ್ತರು ಅಗ್ನಿಪ್ರವೇಶಿಸಿದರು. ರಾಚೋಟೇಶ್ವರ ದೇವಸ್ಥಾನದ ಟ್ರಸ್ಟ್ ಕಮಿಟಿ ಸದಸ್ಯರು, ಹಿರಿಯರು, ಯುವಕರು ಪಾಲ್ಗೊಂಡಿದ್ದರು. ಪಿಎಸ್‌ಐ ನಾಗರಾಜ ಕಿಲಾರೆ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
    ಅಗ್ನಿ ಹಾಯುವ ಮುನ್ನ ಮದ್ದು ಸುಡುವ ಕಾರ್ಯಕ್ರಮ ನಡೆಯಿತು. ಭಾನುವಾರದಿಂದ ಆರಂಭವಾದ ಜಂಗಿ ನಿಕಾಲಿ ಕುಸ್ತಿ ಪಂದ್ಯ ಏ.3, 4 ರಂದು ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts