More

    ಮೋದಿ ವಿಶ್ವಮಾನ್ಯ ನಾಯಕ

    ಮೂಡಲಗಿ: ವಿಶ್ವಮಾನ್ಯ ನಾಯಕ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಎರಡನೆಯ ಅವಧಿಯ ಎರಡು ವರ್ಷ ಪೂರೈಸಿದೆ. ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರು ಹಾಗೂ ಪಂಚಾಯಿತಿ ಸಿಬ್ಬಂದಿ ಸೇರಿ ಅನೇಕರಿಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ ಮತ್ತು ಪ್ರಧಾನ್ ಮಂತ್ರಿ ಸುರಕ್ಷಾ ವಿಮಾ ಯೋಜನೆಗಳ ಮುಖಾಂತರ 4 ಲಕ್ಷ ರೂ ವಿಮೆಗೆ ಒಳಪಡಿಸಿರುವುದು ಶ್ಲಾಘನೀಯ ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು. ಸಮೀಪದ ಕಲ್ಲೋಳಿ ಪಟ್ಟಣದಲ್ಲಿ ಭಾನುವಾರ ಕರೊನಾ ವಾರಿಯರ್ಸ್‌ಗಳಿಗೆ ಸೇವಾ ಸಂಸ್ಥೆಯ ಮುಖಾಂತರ ವಿಮಾ ಪಾಲಿಸಿ ಅರ್ಜಿ ಭರ್ತಿ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕೇಂದ್ರ ಸರ್ಕಾರದ ಏಳು ವರ್ಷಗಳ ಸಂಭ್ರಮಾಚರಣೆಯ ಸವಿನೆನಪಿಗಾಗಿ ಸಸಿ ನೆಟ್ಟು ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಕರೊನಾ, ಚೀನಾ ಗಡಿ ತಂಟೆ ಕಾರ್ಮೋಡದ ನಡುವೆ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಂಕು ಸ್ಥಾಪನೆ, 34 ವರ್ಷಗಳ ಬಳಿಕ ನೂತನ ಶಿಕ್ಷಣ ನೀತಿ, ಸಂಸತ್ ಹೊಸ ಕಟ್ಟಡ ಸೆಂಟ್ರಲ್ ವಿಸ್ತಾಗೆ ಚಾಲನೆ, ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು, ತ್ರಿವಳಿ ತಲಾಖ್ ರದ್ದು, ಪೌರತ್ವ ಕಾಯ್ದೆ ಜಾರಿ ಮಾಡಿದ್ದಾರೆ ಎಂದರು. ಸೇವಾ ಸಂಸ್ಥೆಯ ಅಧ್ಯಕ್ಷ ಬಸವರಾಜ ಕಡಾಡಿ, ಪಪಂ ಸದಸ್ಯ ಶಂಕರ ಮಕ್ಕಳಗೇರಿ, ನ್ಯಾಯವಾದಿ ಶಂಕರ ಗೋರೋಶಿ, ಮುಖ್ಯಾಧಿಕಾರಿ ಅರುಣಕುಮಾರ, ಜಿಲ್ಲಾ ಬಿಜೆಪಿ ಮಾಜಿ ಕೋಶಾಧ್ಯಕ್ಷ ಪರಪ್ಪ ಗಿರೆಣ್ಣವರ, ಕೆಂಪಣ್ಣ ಮಕ್ಕಳಗೇರಿ, ಹನುಮಂತ ಕಲಕುಟ್ರಿ ಹಾಗೂ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts