More

    ಮೈಸೂರಿನಲ್ಲಿ ಮಹಿಳೆಯ ಸರ ಕಳವು

    ಮೈಸೂರು: ನಗರದ ಟೆಲಿಕಾಂ ಬಡಾವಣೆಯಲ್ಲಿ ಬುಧವಾರ ಬೈಕ್‌ನಲ್ಲಿ ಆಗಮಿಸಿದ ವ್ಯಕ್ತಿಯೊಬ್ಬರ ಮಹಿಳೆಯೊಬ್ಬರ ಸರ ಕಸಿದು ಪರಾರಿಯಾಗಿದ್ದಾನೆ.

    ಟೆಲಿಕಾಂ ಬಡಾವಣೆ ನಿವಾಸಿ ಮಧುರಾ ಎಂಬವರೇ ಸರ ಕಳೆದುಕೊಂಡವರು. ಸರ ಕಸಿಯುವ ಸಂದರ್ಭ ಮಧುರಾ ಅವರು ಸರವನ್ನು ಹಿಡಿದುಕೊಂಡ ಹಿನ್ನೆಲೆಯಲ್ಲಿ ಅರ್ಧ ಸರ ಅವರ ಕೈಯಲ್ಲಿ ಉಳಿದುಕೊಂಡಿದ್ದು, ಇನ್ನರ್ಧ ಸರವನ್ನು ಕಳ್ಳ ಕಸಿದು ಪರಾರಿಯಾಗಿದ್ದಾನೆ.

    ಬೆಳಗ್ಗೆ ಅಂಗಡಿಗೆ ತೆರಳುತ್ತಿದ್ದ ಸಂದರ್ಭ ಬೈಕ್‌ನಲ್ಲಿ ಆಗಮಿಸಿದ ಸುಮಾರು 30 ವರ್ಷದ ವ್ಯಕ್ತಿ ಮಧುರಾ ಅವರ ಕತ್ತಿನಲ್ಲಿದ್ದ ಸರ ಕಸಿದು ಪರಾರಿಯಾದ. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts