More

    ಮೈಕ್ರೋ ಅಬ್ಸರ್ವರ್​ಗಳಿಗೆ ತರಬೇತಿ ಕಾರ್ಯಾಗಾರ

    ಕೊಪ್ಪಳ: ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ ಅಂಗವಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಮೈಕ್ರೋ ಅಬ್ಸರ್ವರ್​ಗಳಿಗೆ ತರಬೇತಿ ಕಾರ್ಯಾಗಾರ ನಡೆಸಲಾಯಿತು.

    ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ತರಬೇತಿ ನೀಡಿ ಮಾತನಾಡಿ, ಮೈಕ್ರೋ ಅಬ್ಸರ್ವರ್​ ಕೆಲಸ ಬಹುಮುಖ್ಯ. ಚುನಾವಣೆ ಸರಿಯಾದ ಸಮಯಕ್ಕೆ ನಡೆಯುವಂತೆ ಗಮನಹರಿಸಬೇಕು. ಪ್ರತಿಯೊಂದು ಮತಗಟ್ಟೆಯಲ್ಲಿ ವಿಡಿಯೋಗ್ರಫಿ ಮತ್ತು ಮತಗಟ್ಟೆ ಅಧಿಕಾರಿಗಳ ಕರ್ತವ್ಯದ ಮೇಲೆ ನಿಗಾವಹಿಸಿ. ಸರಿಯಾದ ಸಮಯಕ್ಕೆ ಅಧಿಕಾರಿಗಳು ಹಾಜರಿರಬೇಕು ಎಂದರು.

    ಮತಗಟ್ಟೆಗಳಲ್ಲಿ ಅಧಿಕಾರಿಗಳು ಯಾವುದೇ ರಾಜಕೀಯ ವ್ಯಕ್ತಿಗಳ ಬಗ್ಗೆ ಚರ್ಚೆ ಮಾಡುವಂತಿಲ್ಲ. ಮೈಕ್ರೋ ಅಬ್ಸರ್ವರ್​ಗಳು ನಿಮಗೆ ನಿಗದಿಪಡಿಸಿದ ತಾಲೂಕು ವ್ಯಾಪ್ತಿಯ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಮತದಾನ ಕೇಂದ್ರದ ಒಳಗಡೆ ಯಾವುದೇ ಅನವಶ್ಯಕ ವ್ಯಕ್ತಿಗಳ ಪ್ರವೇಶಿಸದಂತೆ ನೋಡಿಕೊಳ್ಳಿ. ಕೇವಲ ಮತಗಟ್ಟೆ ಅಧಿಕಾರಿಗಳು ಮತ್ತು ಮತದಾನ ಮಾಡುವವರು ಮಾತ್ರ ಇರಬೇಕು. ಮತದಾರರು ಸರತಿ ಸಾಲಿನಲ್ಲಿ ನಿಂತು ಮುಕ್ತ ಮತ್ತು ನ್ಯಾಯ ಸಮ್ಮತ ಮತ ಚಲಾವಣೆಯಾಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

    ಟೆಂಡರ್​ ಮತಗಳ ಮಾಹಿತಿ ವಿವರಿಸಿದರು. ಮೈಕ್ರೋ ಅಬ್ಸರ್ವರ್​ಗಳ ನೋಡಲ್​ ಅಧಿಕಾರಿ ವೀರೇಂದ್ರ ಕುಮಾರ್​, ಜಿಲ್ಲಾ ಮಾಸ್ಟರ್​ ಟೆನರ್​ ವಿದ್ಯಾಧತ ಮೇರಾಜ ಹಾಗೂ ವಿವಿಧ ಚುನಾವಣಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts