More

    ಮೇ ೨೪, ೨೫ ರಂದು ರಾಷ್ಟ್ರಮಟ್ಟದ ಕಾರ್ಯಾಗಾರ

    ಬಾಗಲಕೋಟೆ: ಆಯುರ್ವೇದಿಕ ವೈದ್ಯಕೀಯ ರಂಗದಲ್ಲಿ ವಿದ್ಯಾರ್ಥಿಗಳ ಸಂಶೋಧನಾ ಕ್ರಾಂತಿಗಾಗಿ ಶರೀರಚಿಂತನ-೨೦೨೪ ರಾಷ್ಟ್ರ ಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಎಂ.ಆರ್.ಎನ್.ವೈದ್ಯಕೀಯ ಸಮೂಹ ಸಂಸ್ಥೆಗಳ ಡೀನ್, ಆಡಳಿತಾಽಕಾರಿ ಡಾ.ಶಿವಕುಮಾರ ಗಂಗಾಲ್ ಹೇಳಿದರು.

    ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ ೨೪, ೨೫ ರಂದು ನಗರದ ಎಂ.ಆರ್.ಎನ್. ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಶರೀರ ರಚನಾ ಮತ್ತು ಶರೀರ ಕ್ರಿಯಾ ವಿಭಾಗಗಳಿಂದ ನೂರೋ ಯೆನೊಟಾಮಿ ಹಾಗೂ ನೂರೋಪಿ ಜಿಯಾಲೊಜಿ ಕುರಿತು ರಾಷ್ಟ್ರೀಯ ಕಾರ್ಯಾಗಾರ ನಡೆಯಲಿದೆ ಎಂದರು.

    ಮಾಜಿ ಸಚಿವ ಮುರುಗೇಶ ನಿರಾಣಿ ಉದ್ಘಾಟಿಸಲಿದ್ದು, ತೇಜಸ್ ಶಾಲೆಯ ಅಧ್ಯಕ್ಷೆ ಮಾಧುರಿ ಮುಧೋಳ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎನ್‌ಸಿಐ ಎಸ್‌ಎಂ ನ ಆಯುರ್ವೇದಿಕ್ ವಿಭಾಗದ ಅಧ್ಯಕ್ಷ ಡಾ.ಬಿ.ಎಸ್. ಪ್ರಸಾದ್, ಕಾಲೇಜಿನ ಪ್ರಾಂಶು ಪಾಲ ಡಾ.ಪ್ರಲ್ಹಾದ್ ಗಂಗಾವತಿ, ಶರೀರ ವಿಭಾಗದ ಮುಖ್ಯಸ್ಥ ಡಾ.ದೀಪಾ ಗಂಗಾಲ, ಶರೀರ ರಚನಾ ವಿಭಾಗದ ಪ್ರಾಧ್ಯಾಪಕ ಡಾ.ರಜನಿ ದಡೆದ, ಡಾ. ಶಶಿಕಲಾ ಕುರುಬೆಟ್, ಡಾ.ಪ್ರಶಾಂತ ಸಿ, ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಡಾ.ಮುರುಳಿಧರ ಬಡಿಗೇರ, ಡಾ.ರಶ್ಮಿ ಬಿ.ಜೆ., ಡಾ.ಬಿ.ಜಿ.ಕುಲಕರ್ಣಿ, ಡಾ.ಹರ್ಷವರ್ಧನ, ಡಾ. ರವಿರಾಜ್ ಕುರುಬೆಟ್, ಡಾ. ಉಮಾ ಗೋಪಾಲ, ಡಾ.ತುಕರಾಮ ರಾಥೋಡ, ಡಾ.ಗುರುಬಸವರಾಜ್, ಡಾ.ಶಿವಪ್ರಸಾದ ಸಿ ಭಾಗವಹಿಸಲಿದ್ದಾರೆ ಎಂದರು.
    ಹೊರ ರಾಜ್ಯಗಳ ಅಂದಾಜು ೫೦ ಕ್ಕೂ ಹೆಚ್ಚು ಕಾಲೇಜುಗಳ ೧೫೦೦ ಕ್ಕೂ ಹೆಚ್ಚು ಆರ್ಯುವೇದಿಕ್ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕ ವರ್ಗದವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

    ಪ್ರಾಚಾರ್ಯ ಪ್ರಲ್ಹಾದ ಗಂಗಾವತಿ, ದೀಪಾ ಗಂಗಲ್, ರಜನಿ ದಡೆದ, ವಿಜಯಕುಮಾರ ಚವಡಿ, ಈಶ್ವರ ಪಾಟೀಲ, ಶಶಿಕಲಾ ಕುರುಬೆಟ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts