More

    ಮುರುಘೇಂದ್ರರು ದಾಸೋಹ ಮೂರ್ತಿಗಳು

    ಅಥಣಿ: ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ವಸತಿ ಶಾಲೆ ಹಾಗೂ ದಾಸೋಹಕ್ಕೆ ಬೆನ್ನಲುಬಾಗಿ ನಿಂತಿರುವ ಶೇಗುಣಿಸಿ ಮಠದ ಸೇವೆ ಸ್ಮರಣೀಯ ಎಂದು ಬೆಳಗಾವಿ ನಾಗನೂರ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.

    ತಾಲೂಕಿನ ಶೇಗುಣಿಸಿ ಗ್ರಾಮದ ವಿರಕ್ತಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಭಕ್ತಿ ಬೆಳಗು ಮಾಸಿಕ 100ನೇ ಶಿವಾನುಭವ ಕಾಯಕ್ರಮದಲ್ಲಿ ಮಾತನಾಡಿದರು. ಶೇಗುಣಿಸಿ ವಿರಕ್ತಮಠದ ಲಿಂ.ಮುರುಘೇಂದ್ರ ಸ್ವಾಮೀಜಿ ಭಿಕ್ಷಾಟನೆ ಮಾಡಿ ತಂದಿರುವ ದವಸ-ಧಾನ್ಯಗಳನ್ನು ಬೆಳಗಾವಿಯ ರುದ್ರಾಕ್ಷಿಮಠದ ವಿದ್ಯಾರ್ಥಿನಿಲಯಕ್ಕೆ ಕಳುಹಿಸುವ ಮೂಲಕ ದಾಸೋಹ ಮೂರ್ತಿಗಳಾಗಿ ಜನಮಾನಸದಲ್ಲಿ ಉಳಿದಿದ್ದಾರೆ ಎಂದರು.

    ಹಂದಿಗುಂದ ಶಿವಾನಂದ ಸ್ವಾಮೀಜಿ ಮಾತನಾಡಿ, ಶೇಗುಣಿಸಿ ಮಠವು ನಿರಂತರ ಅಧ್ಯಾತ್ಮ ಚಿಂತನೆಯಲ್ಲಿ ತೊಡಗಿ ಶರಣ ಸಂಸ್ಕೃತಿ ಪ್ರಸಾರ ಮಾಡುತ್ತಿದೆ ಎಂದರು. ಗಚ್ಚಿನಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಮಹಿಳಾ ಸಂಘಟನೆಯಿಂದ ಆಧ್ಯಾತ್ಮಿಕ ಚಿಂತನೆಗಳು ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

    ನದಿಇಂಗಳಗಾವಿಯ ಸಿದ್ದಲಿಂಗ ಸ್ವಾಮೀಜಿ, ಹಣಮಂತ ಮಹಾರಾಜರು, ತೆಲಸಂಗದ ವೀರೇಶ್ವರ ದೇವರು, ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ, ಡಾ.ಮಹಾಂತ ಸ್ವಾಮೀಜಿ, ಶಂಕರ ಸ್ವಾಮೀಜಿ ಮಾತನಾಡಿದರು.

    ವಿದ್ಯಾರ್ಥಿಗಳು ಬಸವಣ್ಣನವರ ವಚನಗಳಿಗೆ ನತ್ಯ ರೂಪಕ ಪ್ರಸ್ತುತಪಡಿಸಿದರು. ಶ್ರೀಶೈಲ ನಾರಗೊಂಡ, ತಮ್ಮಣ್ಣ ತೇಲಿ, ಪರಪ್ಪ ರಾಚಪ್ಪನವರ, ಮಲ್ಲಪ್ಪ ಹಂಚಿನಾಳ, ಸುರೇಶ ಪಾಟೀಲ, ಶಿವರಾಯ ಯಲ್ಲಡಗಿ, ಮಲ್ಲಪ್ಪ ಶ್ಯಾನವಾಡ, ಬಸಪ್ಪ ಹೊರಟ್ಟಿ, ಅಣಪ್ಪ ಗಲಗಲಿ, ಪ್ರದೀಪ ಭದ್ರಪ್ಪಗೊಳ, ಅಕ್ಕಮಹಾದೇವಿ ಮಹಿಳಾ ಬಳಗದವರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts