More

    ವಚನಗಳಲ್ಲಿದೆ ಕಾಯಕ, ದಾಸೋಹದ ಸಂದೇಶ

    ದೇವದುರ್ಗ: ಪ್ರಸಾದ ಪ್ರಜ್ಞೆ ಮತ್ತು ಕಾಯಕದ ಬಗ್ಗೆ ಬಸವಾದಿ ಶರಣರು, ಸೂಫಿ ಸಂತರು ಬರೆದಿದ್ದು, ಈ ಮೂಲಕ ಜಗತ್ತಿಗೆ ಕಾಯಕದ ಮಹತ್ವ ಸಾರಿದ್ದಾರೆ ಎಂದು ಸಾಹಿತಿ ರಂಜಾನ್ ದರ್ಗಾ ಹೇಳಿದರು.

    ಪಟ್ಟಣದ ಖೇಣೇದ್ ಫಂಕ್ಷನ್ ಹಾಲ್‌ನಲ್ಲಿ ತಾಲೂಕು ಬಸವ ಕೇಂದ್ರದಿಂದ ಆಯೋಜಿಸಿದ ಬಸವ ಚಿಂತನಾ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಕಾಯಕ ಮತ್ತು ದಾಸೋಹ ಮಹತ್ವದ ವಿಷಯ ಕುರಿತು ಉಪನ್ಯಾಸ ನೀಡಿದರು. ಹಿಂದು, ಇಸ್ಲಾಂ, ಕ್ರೈಸ್ತ ಮತ್ತು ಸಿಖ್ ಧರ್ಮಗಳನ್ನು ಸಂಪೂರ್ಣ ಅರ್ಥ ಮಾಡಿಕೊಳ್ಳಲಾರದವರು ಧರ್ಮ ರಕ್ಷಕರಾಗಿದ್ದಾರೆ. ಬಸವಣ್ಣ ಅವರನ್ನು ಇಷ್ಟ ಪಡುವವರು ಯಾವುದೇ ಧರ್ಮ ಮತ್ತು ಜಾತಿ ಜನರನ್ನು ದ್ವೇಷಿಸಲು ಸಾಧ್ಯವಿಲ್ಲ ಎಂದರು.

    12ನೇ ಶತಮಾನದಲ್ಲಿ ವರ್ಣ, ಜಾತಿ, ಧರ್ಮ, ಮೇಲು, ಕೀಳು, ಲಿಂಗ ಭೇದ ತೋರದೆ ಧರ್ಮಬೋಧನೆ ಮಾಡಲಾಗಿದೆ. ಸರ್ವ ಜಾತಿಯ ಶರಣರು, ಮಹಿಳೆಯರು ಅನುಭವ ಮಂಟದಲ್ಲಿ ವಚನಗಳು ಬರದಿದ್ದಾರೆ. ಕಾಯಕ ಮತ್ತು ದಾಸೋಹದ ಬಗ್ಗೆ 12ನೇ ಶತಮಾನದಲ್ಲೇ ಶರಣರು ವಚನಗಳ ಮೂಲಕ ಸಂದೇಶ ನೀಡಿದ್ದಾರೆ ಎಂದು ರಂಜಾನ್ ದರ್ಗಾ ತಿಳಿಸಿದರು.

    ಸಹಾಯಕ ಆಯುಕ್ತೆ ಮಹಿಬೂಬಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ಜನರು ಅನಕ್ಷಸ್ಥರಾಗಿದ್ದರೂ ಬಸವಣ್ಣ ಅವರ ವಚನಗಳನ್ನು ಕರಗತ ಮಾಡಿಕೊಂಡು ಪಠಿಸುತ್ತಿದ್ದರು. ವಚನಗಳು ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರಿವೆ ಎನ್ನುವುದಕ್ಕೆ ಇದಕ್ಕಿಂದ ಇನ್ನೊಂದು ಸಾಕ್ಷಿ ಇರಲಾರದು. ಶರಣರು ವಚನಗಳ ಮೂಲಕ ಹಾಕಿಕೊಟ್ಟ ಹಾದಿಯಲ್ಲಿ ಜೀವನ ನಡೆಸಿದರೆ ಶ್ರೇಷ್ಠ ಸಮಾಜ ಕಟ್ಟಬಹುದು ಎಂದರು.

    ಅರವಿನ ಮನೆಯ ಶ್ರೀಗುರು ಬಸವದೇವರು ಸಾನ್ನಿಧ್ಯ ವಹಿಸಿದ್ದರು. ಚುಟುಕು ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮೈನುದ್ದೀನ್ ಕಾಟಮಳ್ಳಿ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮುನಿಯಪ್ಪ ನಾಗೋಲಿ, ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಿಣಿ ಪಾಟೀಲ್, ನರಸಿಂಗರಾವ ಸರ್ಕೀಲ್, ಪ್ರಭಣ್ಣ ಗೌಡ ಹಂಚಿನಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts