More

    ಮುಂಬೈನಲ್ಲಿ ನಾಪತ್ತೆಯಾಗಿದ್ದ ಆರೋಪಿ ಬಂಧನ

    ಮೈಸೂರು: ಹಲವಾರು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಎರಡು ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮುಂಬೈನಲ್ಲಿ ಬಂಧಿಸಲಾಗಿದೆ.


    ನಗರದಲ್ಲಿ ಅಪಾರ್ಟ್‌ಮೆಂಟ್ ಕೊಡುವುದಾಗಿ ಸಾರ್ವಜನಿಕರಿಂದ ಮುಂಗಡ ಹಣವನ್ನು ಪಡೆದು ಮೋಸ ಹಾಗೂ ವಂಚನೆ ಮಾಡಿದ್ದ ಪಾಠಕ್ ಡೆವಲಪರ್ಸ್‌ ಮಾಲೀಕ ಶ್ರೀಹರಿಪಾಠಕ್ ವಿರುದ್ಧ ಮೈಸೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಾಗೂ ಗ್ರಾಹಕರ ನ್ಯಾಯಾಲಯದಲ್ಲಿ ವಂಚನೆ ಪ್ರಕರಣಗಳು ದಾಖಲಾಗಿತ್ತು.


    ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದ. ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ನಾಪತ್ತೆಯಾಗಿದ್ದ. ಈತನನ್ನು ಪತ್ತೆ ಮಾಡಿ ಹಾಜರುಪಡಿಸುವಂತೆ ಸುಮಾರು 17ಕ್ಕೂ ಹೆಚ್ಚು ದಸ್ತಗಿರಿ ವಾರಂಟ್‌ಗಳನ್ನು ಕೋರ್ಟ್ ಹೊರಡಿಸಿತ್ತು.


    ವಾರಂಟ್ ಸಂಬಂಧ ಕಾರ್ಯಾಚರಣೆ ನಡೆಸಿದ ಸಿಸಿಬಿ ಮತ್ತು ನರಸಿಂಹರಾಜ ಉಪವಿಭಾಗದ ವಿಶೇಷ ತಂಡದ ಪೊಲೀಸರು ಆರೋಪಿಯನ್ನು ಗುರುವಾರ ಮುಂಬೈನ ಅಂಧೇರಿಯಿಂದ ಬಂಧಿಸಿ ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಳಿಕ ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts