More

    ಮೀಸೆ ಶರಣ್ ಮಾತನಾಡಿದಾಗ…

    ಬೆಂಗಳೂರು: ‘1996ರಲ್ಲಿ ‘ಕರ್ಪೂರದ ಗೊಂಬೆ’ ಸಿನಿಮಾದಲ್ಲಿ ಮೀಸೆಬಿಟ್ಟಿದ್ದನ್ನು ಬಿಟ್ಟರೆ, ಮತ್ತಿನ್ಯಾವ ಸಿನಿಮಾದಲ್ಲಿಯೂ ನಾನು ನಿಜವಾದ ಮೀಸೆ ಬಿಟ್ಟಿಲ್ಲ. ಇದೀಗ ಎರಡನೇ ಬಾರಿ ‘ಗುರು ಶಿಷ್ಯರು’ ಚಿತ್ರಕ್ಕಾಗಿ ಅಂತ ಪ್ರಯೋಗ ನಡೆದಿದೆ. ಆ ಸಿನಿಮಾ ಸಲುವಾಗಿ ನಾನೂ ಕಾಯುತ್ತಿದ್ದೇನೆ’- ಹೀಗೆ ಕೊಂಚ ಕುತೂಹಲಿಯಾಗಿಯೇ ಹೇಳಿಕೊಳ್ಳುತ್ತಾರೆ ನಟ ಶರಣ್.

    ‘ಇಲ್ಲಿಯವರೆಗೂ ಮೀಸೆ ಇರುವ ದೃಶ್ಯಗಳಲ್ಲಿ ಶರಣ್ ಕಾಣಿಸಿಕೊಂಡಿದ್ದರೆ ಅದು ಕೇವಲ ಸ್ಟಿಕ್ಕರ್ ಮಾತ್ರ’ ಎಂಬುದೂ ಶರಣ್ ಮಾತು. ಜಡೇಶ್ ಕುಮಾರ್ ಹಂಪಿ ನಿರ್ದೇಶನದಲ್ಲಿ ‘ಗುರು ಶಿಷ್ಯರು’ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರದಲ್ಲಿ ದೈಹಿಕ ಶಿಕ್ಷಣ ಶಿಕ್ಷಕನಾಗಿ ಶರಣ್ ಕಾಣಿಸಿಕೊಳ್ಳುತ್ತಿರುವುದು ಗೊತ್ತಿರುವ ವಿಚಾರ.

    ಆದರೆ ಮೀಸೆ ಮಾತ್ರ ಸ್ವತಃ ಶರಣ್​ಗೂ ಹೊಸ ಅನುಭವ. ‘ಯಾಕೆ ಹೀಗೊಂದು ಪ್ರಯತ್ನ ಮಾಡಬಾರದೆಂದು ಈ ಹೊಸ ಗೆಟಪ್ ಟ್ರೖೆ ಮಾಡಿದ್ದೇನೆ. ಕರ್ಪರದ ಗೊಂಬೆ ಬಿಟ್ಟರೆ, ಈ ಸಿನಿಮಾದಲ್ಲಿಯೇ ನಾನು ಅಸಲಿ ಮೀಸೆಯಲ್ಲಿ ಮುಂದೆಬಂದಿದ್ದು. ಈ ಚಿತ್ರದಲ್ಲಿ ಬರೀ ಲುಕ್ ಅಲ್ಲ ತೆರೆಮೇಲೆ ಬೇರೆಯ ಶರಣ್ ನೋಡಲು ಸಿಗುತ್ತಾನೆ. ಈಗಾಗಲೇ ಚಿತ್ರದ ಒಂದಷ್ಟು ಭಾಗದ ಶೂಟಿಂಗ್ ಮುಗಿದಿದೆ. ಎಲ್ಲವೂ ತಿಳಿಯಾದ ಮೇಲೆ ಕೆಲಸ ಶುರುವಾಗಲಿದೆ’ ಎನ್ನುತ್ತಾರೆ.

    ಓಟಿಟಿ ನಮಗೆ ಒಗ್ಗಲ್ಲ ಅದಿನ್ನೂ ನನಗೆ ಅಸ್ಪಷ್ಟ

    ‘ಸಿನಿಮಾ ನನ್ನ ರಕ್ತದಲ್ಲಿ ಬೆರೆತಿದೆ. ನನ್ನ ಬಾಲ್ಯ ನೆನೆದರೆ, ಸಿನಿಮಾ ಅವಿಭಾಜ್ಯ ಅಂಗ. ಹಾಗಾಗಿ ನನಗೆ ಓಟಿಟಿ ವೇದಿಕೆ ಒಗ್ಗಲ್ಲ. ಶಿಳ್ಳೆ ಹೊಡೆದು, ಕಾಯಿನ್ ತೂರಿ ದೊಡ್ಡ ಪರದೆ ಮೇಲೆ ಸಿನಿಮಾ ನೋಡುವ ಅನುಭವ ಇದೆಲ್ಲದರ ಮುಂದೆ ನಗಣ್ಯ. ಹಾಗಂತ ನಾನು ಓಟಿಟಿಯ ವಿರೋಧಿಯಲ್ಲ. ಬದಲಿಗೆ ಆ ಬಗ್ಗೆ ನಿಗದಿತ ನಿರ್ಧಾರವೊಂದಕ್ಕೆ ನಾನು ಬಂದಿಲ್ಲ. ತ್ರಿಶಂಕು ಸ್ಥಿತಿಯಲ್ಲಿದ್ದೇನೆ ಎಂದೆನ್ನಬಹುದು’ ಎಂದು ಓಟಿಟಿ ವೇದಿಕೆಯ ಬಗ್ಗೆ ತಮ್ಮ ನಿಲುವನ್ನು ತಿಳಿಸುತ್ತಾರೆ ಶರಣ್.

    ಇನ್ಮೇಲೆ ವರ್ಚುವಲ್ ಕಥೆ ಕೇಳ್ತಿನಿ..

    ‘ಈ ಹಿಂದೆ ಸಾಕಷ್ಟು ನಿರ್ದೇಶಕರು ಸೇರಿ ಸ್ನೇಹಿತರು ಸಿನಿಮಾ ವಿಚಾರವಾಗಿ ಕಥೆ ಹೇಳುವ ಬಗ್ಗೆ ಮಾಹಿತಿ ನೀಡಿದಾಗ, ನೇರವಾಗಿ ಮನೆಗೆ ಬರುವಂತೆ ಕೋರುತ್ತಿದ್ದೆ. ಮುಖಾಮುಖಿ ಕಥೆ ಕೇಳುವುದೇ ನನಗಿಷ್ಟ. ಇದೀಗ ಕರೊನಾ ತಿಳಿಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಹಾಗಾಗಿ ಇದೀಗ ಆ ಸಂಪ್ರದಾಯಕ್ಕೆ ಕರೊನಾ ಹೊತ್ತಲ್ಲಿ ಇತಿಶ್ರೀ ಹಾಡಬೇಕಿದೆ. ಫೋನ್ ಮೂಲಕವೇ ಕಥೆ ಕೇಳಲು ಆರಂಭಿಸಲಿದ್ದೇನೆ’ ಎನ್ನುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts