More

    ವಚನ ಅರಿತು ಬದುಕಿನಲ್ಲಿ ಅಳವಡಿಸಿಕೊಳ್ಳಿ

    ಬಸವಕಲ್ಯಾಣ: ಮೌಲ್ಯಗಳನ್ನು ಒಳಗೊಂಡಿರುವ ವಚನ ಸಾಹಿತ್ಯ ಅಧ್ಯಯನ ಮಾಡುವುದರ ಜತೆಗೆ ವಚನಗಳ ಸಾರ ಅರಿತು ಅಳವಡಿಸಿಕೊಂಡರೆ ಜೀವನದಲ್ಲಿ ಶಾಂತಿ, ನೆಮ್ಮದಿ ಕಾಣಲು ಸಾಧ್ಯ ಎಂದು ಭರತನೂರಿನ ಶ್ರೀ ಚಿಕ್ಕಗುರು ನಂಜೇಶ್ವರ ಮಹಾಸ್ವಾಮೀಜಿ ನುಡಿದರು.

    ಮಂಠಾಳದ ಶ್ರೀ ಗುರುಲಿಂಗೇಶ್ವರ ಚೌಕಿ ಮಠದಲ್ಲಿ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮೀಜಿ ಪಟ್ಟಾಧಿಕಾರ ವಾರ್ಷಿಕೋತ್ಸವ ಹಾಗೂ ಪ್ರಥಮ ಶರಣ ಸಂಸ್ಕೃತಿ ಉತ್ಸವ ನಿಮಿತ್ತ ಭಾನುವಾರ ಏರ್ಪಡಿಸಿದ್ದ ವೈರಾಗ್ಯನಿಧಿ ಅಕ್ಕಮಹಾದೇವಿ ಜೀವನ ದರ್ಶನ ಪ್ರವಚನ ಮಹಾಮಂಗಲ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಪಟ್ಟಾಧಿಕಾರ ವಾರ್ಷಿಕೋತ್ಸವ ನಿಮಿತ್ತ ಪ್ರವಚನ ಮತ್ತು ಶರಣ ಸಂಸ್ಕೃತಿ ಉತ್ಸವ ಆಯೋಜಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ರಟಕಲ್‌ನ ಶ್ರೀ ಸಿದ್ಧರಾಮ ಮಹಾಸ್ವಾಮೀಜಿ ಪ್ರವಚನ ನಡೆಸಿಕೊಟ್ಟರು. ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಅನುಭಾವ ನೀಡಿದರು. ಖೇಳಗಿಯ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮೀಜಿ ನೇತೃತ್ವ, ರಟಕಲ್‌ನ ಶ್ರೀ ರೇವಣಸಿದ್ಧ ಶಿವಾಚಾರ್ಯ, ಕಲಬುರಗಿಯ ಶ್ರೀ ಡಾ.ರಾಜಶೇಖರ ಶಿವಾಚಾರ್ಯ, ಚೌಕಿ ಮಠದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮೀಜಿ ಸಮ್ಮುಖ, ಜಿಪಂ ಮಾಜಿ ಸದಸ್ಯ ಜಗನ್ನಾಥ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.

    ಪ್ರಮುಖರಾದ ವಿಶ್ವನಾಥ ಹುಗ್ಗೆಪಾಟೀಲ್, ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್, ರವೀಂದ್ರ ಶಾಯಪ್ಪ, ಗುರುಲಿಂಗಪ್ಪ ಮುಸ್ತಪುರೆ, ಅಂದಪ್ಪ ಖಸಗೆ, ಶಿವರಾಜ ಪಾರಾ, ಶಂಭು ರಾಮದಾಸ, ರಾಜಕುಮಾರ ಸಂಗನಬಟ್ಟೆ, ಮಹಾದೇವ ಪಾಟೀಲ್, ಪುಷ್ಪರಾಜ ಹಾರಕೂಡೆ, ಶಿವಕುಮಾರ ಶಟಗಾರ, ಬಸವರಾಜ ಮದರ್ಗೆ, ಸಾಗರ ಪಾಟೀಲ್, ಅಮೂಲ್ ಚುಚ್ಚಕೋಟೆ, ಬಂಡೆಪ್ಪ ಕೊರಳೆ, ರಾಜಪ್ಪ ಹಾರಕೂಡೆ, ನರೇಶ ಮಾಳಿ, ಮಹಾದೇವ ಜವಳಗೆ, ಅಭಿಷೇಕ ಸಂಗನಬಟ್ಟೆ, ರೇವಣಸಿದ್ದ ಝಂಜಾ ಇತರರಿದ್ದರು.

    ಮೀನಾಕ್ಷಿ ಬಿರನಾಳೆ ಸ್ವಾಗತಿಸಿದರು. ಮಂಗಲಾ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಸಾವಿತ್ರಿ ಬಿರಾದಾರ ವಂದಿಸಿದರು. ರೇಖಾ ಗುದಗೆ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts