More

    ಮಹಿಳೆಯರಿಂದ ಡಿಸಿಸಿ ಬ್ಯಾಂಕ್​ ಅಭಿವೃದ್ಧಿಗೆ : ನಿರ್ದೇಶಕ ಎಂ.ಸಿ.ನೀಲಕಂಠೇಗೌಡ ಅಭಿಮತ

    ಮುಳಬಾಗಿಲು: ದೇಶದಲ್ಲೇ ಸಹಕಾರಿ ೇತ್ರದ ಮುಂಚೂಣಿ ಬ್ಯಾಂಕ್​ ಆಗಿ ಕೋಲಾರ ಡಿಸಿಸಿ ಬ್ಯಾಂಕ್​ ಹೊರಹೊಮ್ಮಲು ಮಹಿಳಾ ಶಕ್ತಿ ಕಾರಣವಾಗಿದೆ. ಬ್ಯಾಲಹಳ್ಳಿ ಗೋವಿಂದಗೌಡರ ನೇತೃತ್ವದಲ್ಲಿ ಆಡಳಿತ ಮಂಡಳಿ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತ, ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ರೈತರ ಮನೆ ಬಾಗಿಲಿಗೆ ವಿವಿಧ ಸೌಲಭ್ಯ ಒದಗಿಸುತ್ತಿದೆ ಎಂದು ಡಿಸಿಸಿ ಬ್ಯಾಂಕ್​ ನಿರ್ದೇಶಕ ಎಂ.ಸಿ.ನೀಲಕಂಠೇಗೌಡ ತಿಳಿಸಿದರು.
    ತಾಲೂಕಿನ ತಾಯಲೂರು ಗ್ರಾಮದ ವಿಎಸ್​ಎಸ್ಎನ್​ ಕಚೇರಿಯಲ್ಲಿ ಬುಧವಾರ 59 ಮಹಿಳಾ ಸ್ವಸಹಾಯ ಸಂಗಳ 590 ಸದಸ್ಯರಿಗೆ 2.90 ಕೋಟಿ ರೂ. ಶೂನ್ಯ ಬಡ್ಡಿದರ ಸಾಲ ವಿತರಣೆ ಮಾಡಿ ಮಾತನಾಡಿದರು.
    ಈ ಹಿಂದೆ ಶೇ.4 ಬಡ್ಡಿ ವಿಧಿಸಲಾಗುತ್ತಿತ್ತು. ಕಳೆದ 4 ವರ್ಷಗಳಿಂದ ಸರ್ಕಾರವೇ ಬಡ್ಡಿ ಹಣವನ್ನು ಪಾವತಿ ಮಾಡುತ್ತಿದ್ದು ಸಾಲ ಪಡೆದವರು ಸಕಾಲದಲ್ಲಿ ಮರುಪಾವತಿ ಮಾಡಿದರೆ ಮತ್ತೊಬ್ಬರಿಗೆ ಸೌಲಭ್ಯ ಸಿಗಲಿದೆ ಎಂದರು.
    ತಾಲೂಕಿನಲ್ಲಿ 2181 ಮಹಿಳಾ ಸ್ವಸಹಾಯ ಸಂಗಳ 21 ಸಾವಿರ ಮಹಿಳೆಯರಿಗೆ ಡಿಸಿಸಿ ಬ್ಯಾಂಕ್​ ಸಾಲ ವಿತರಿಸಿದೆ. ಕೋಲಾರ&ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ 21.11 ಲಕ್ಷ ಮಹಿಳೆಯರಿಗೆ ಬ್ಯಾಂಕ್​ ಸಾಲ ವಿತರಿಸಿದ್ದು, ಲಾನುಭವಿಗಳು ಬ್ಯಾಂಕ್​ ಅನ್ನು ಕಾಮಧೇನುವಾಗಿ ಪೋಷಿಸುತ್ತಿದ್ದಾರೆ ಎಂದರು.
    ಮುಳಬಾಗಿಲು ತಾಲೂಕಿನ 50 ಸಾವಿರ ಮಹಿಳೆಯರ ಮನೆಗಳಿಗೆ ಸಾಲ ವಿತರಣೆ ಮಾಡಬೇಕೆಂಬ ಸಂಕಲ್ಪ ಮಾಡಿದ್ದು, 10 ಜನರ ಮಹಿಳೆಯರ ಗುಂಪು ಚಟುವಟಿಕೆ ಮಾಡಿ ಸಂ ರಚನೆ ಮಾಡಿಕೊಂಡು ಬ್ಯಾಂಕಿನಲ್ಲಿ ವ್ಯವಹಾರ ಮಾಡಬೇಕು ಎಂದು ಸಲಹೆ ನೀಡಿದರು.
    ಟಿಎಪಿಸಿಎಂಎಸ್​ ಮಾಜಿ ಅಧ್ಯಕ್ಷ ಟಿ.ಎಸ್​.ರಮೇಶ್​ ಮಾತನಾಡಿ, ರಾಜಕೀಯ ಕಾರಣಗಳಿಗಾಗಿ ಸಾಲಮನ್ನಾ ಮಾಡುತ್ತೇವೆಂದು ಜನರ ದಿಕ್ಕು ತಪ್ಪಿಸಬಾರದು. ಸಾಲ ಮಾಡುವುದು ಎಷ್ಟು ಅವಶ್ಯವೋ ಮರುಪಾವತಿ ಮಾಡುವುದೂ ಅಷ್ಟೇ ಮುಖ್ಯ ಎಂದರು.
    ಮೋತಕಪಲ್ಲಿ ವಿಎಸ್​ಎಸ್​ಎನ್​ ಮಾಜಿ ಅಧ್ಯಕ್ಷ ಕಾಮ್ರೆಡ್​ ಮಡಿವಾಳ ಜಿ.ಪಾಪಣ್ಣ ಮಾತನಾಡಿ, ಕೋಲಾರ ಡಿಸಿಸಿ ಬ್ಯಾಂಕ್​ ಇನ್ನೇನು ಮುಚ್ಚೇಹೋಯ್ತು ಎನ್ನುವ ಸಂದರ್ಭದಲ್ಲಿ ಬ್ಯಾಲಹಳ್ಳಿ ಗೋವಿಂದಗೌಡರ ನೇತೃತ್ವದಲ್ಲಿ ಬಂದ ಆಡಳಿತ ಮಂಡಳಿ ಪರಿಣಾಮಕಾರಿ, ಕ್ರಾಂತಿಕಾರಿ ನಿಲುವುಗಳಿಂದ ದೇಶದಲ್ಲೇ ಸಹಕಾರಿ ೇತ್ರದ ಮುಂಚೂಣಿ ಬ್ಯಾಂಕ್​ ಆಗಿ ಹೊರಹೊಮ್ಮುತ್ತಿದೆ ಎಂದರು.
    ತಾಯಲೂರು ಗ್ರಾಪಂ ಅಧ್ಯೆ ಶೋಭಮ್ಮ, ಮಾಜಿ ಅಧ್ಯೆ ಪದ್ಮಮ್ಮ, ಧೂಲಪ್ಪಲ್ಲಿ ಗ್ರಾಪಂ ಅಧ್ಯಕ್ಷ ಸುಬ್ರಮಣಿರೆಡ್ಡಿ, ಉಪಾಧ್ಯಕ್ಷ ಸುಬ್ರಮಣಿ, ಎಮ್ಮೇನತ್ತ ಗ್ರಾಪಂ ಅಧ್ಯೆ ಮುನಿಲಕ್ಷ$್ಮಮ್ಮರಾಧಾಕೃಷ್ಣ, ಮಾಜಿ ಅಧ್ಯಕ್ಷ ಕೆ.ನಾಗರಾಜರೆಡ್ಡಿ, ತಾಯಲೂರು ವಿಎಸ್​ಎಸ್​ಎನ್​ ಮಾಜಿ ಅಧ್ಯಕ್ಷರಾದ ಶಾಪೂರು ಶ್ರೀನಿವಾಸ್​, ರಂಗಸ್ವಾಮಿ, ಕಾರ್ಯದರ್ಶಿ ಸರ್ದಾರ್​, ಡೇರಿ ಮಾಜಿ ಅಧ್ಯಕ್ಷ ಡಿ.ಆರ್​.ರಾಮಕೃಷ್ಣಪ್ಪ, ಗ್ರಾಪಂ ಸದಸ್ಯರಾದ ತಿರುಮನಹಳ್ಳಿ ಚಂದ್ರಶೇಖರ್​, ತಾಯಲೂರು ಮಂಜುನಾಥ್​, ಚರಣ್​, ರಮೇಶ್​, ಅಯ್ಯಪ್ಪ, ಧೂಲಪ್ಪಲ್ಲಿ ರವಿಕುಮಾರ್​ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts