More

    ಮುಸುಕುಧಾರಿಗಳಿಂದ ಬಿಡಾಡಿ ದನ ಕಳವು

    ಕೊಟ್ಟೂರು: ಪಟ್ಟಣದ ಯೂನಿಯನ್ ಬ್ಯಾಂಕ್ ಮುಂದೆ ಮುಸುಕುಧಾರಿಗಳು ರಸ್ತೆಯಲ್ಲಿ ಮಲಗಿದ್ದ ಹಸುವನ್ನು ಟೆಂಪೋದಲ್ಲಿ ಕದ್ದೊಯ್ದಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಚಿಕ್ಕ ಟೆಂಪೋದಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬರುವ ಐದಾರು ಕಳ್ಳರು, ಎರಡು ಹಸುಗಳನ್ನು ಹೊತ್ತೊಯ್ಯಲು ಪ್ರಯತ್ನಿಸುತ್ತಾರೆ. ಅದು ಸಾಧ್ಯವಾಗದಿದ್ದಾಗ ಒಂದನ್ನು ಬಲವಂತವಾಗಿ ಟೆಂಪೋದಲ್ಲಿ ಹಾಕಿಕೊಂಡು ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ.


    ಪ್ರಕರಣ ದಾಖಲಾಗಿಲ್ಲ: ಇಲ್ಲಿನ ಉಜ್ಜಿನಿ ಸರ್ಕಲ್‌ನ ಚಿರಬಿ ರಸ್ತೆ, ಗಾಂಧಿ ಸರ್ಕಲ್, ಕೊಟ್ಟೂರೇಶ್ವರ ದೇವಸ್ಥಾನ ಸುತ್ತ, ಬಸ್ ನಿಲ್ದಾಣ, ಎಪಿಎಂಸಿ ಹತ್ತಿರ ರಸ್ತೆಯಲ್ಲಿ ಹತ್ತಾರು ದನಕರುಗಳು ಮಲಗಿರುತ್ತವೆ. ಶ್ರೀ ಕೊಟ್ಟೂರೇಶ್ವರ ಸ್ವಾಮಿ ಹಾಗೂ ದುರುಗಮ್ಮ ದೇವಿಗೆ ಹರಕೆ ಹೊತ್ತ ಭಕ್ತರು ಇಷ್ಟಾರ್ಥ ನೆರವೇರಿದ್ದಕ್ಕೆ ಭಕ್ತಿಯ ರೂಪದಲ್ಲಿ ಹಸು ಮತ್ತು ಕರುವನ್ನು ಬಿಡುತ್ತಾರೆ.

    ಅವು ಆಹಾರ ಅರಸಿ ಬೀದಿ ಬೀದಿ ಸುತ್ತಿ ರಾತ್ರಿ ವೇಳೆ ಯಾವುದಾದರೂ ಸರ್ಕಲ್‌ನಲ್ಲಿ ನಿದ್ದೆಗೆ ಜಾರುತ್ತವೆ. ಇದನ್ನು ಗಮನಿಸಿರುವ ಕಳ್ಳರು, ಹಸು ಕದ್ದೊಯ್ಯಲು ಬಂದು ಒಂದನ್ನು ಕಳವು ಮಾಡಿದ್ದಾರೆ. ಈ ಕುರಿತು ಈವರೆಗೆ ಪ್ರಕರಣವೂ ದಾಖಲಾಗಿಲ್ಲ.
    ದೇವರ ಹಸುಗಳೆಂಬ ಕಾರಣಕ್ಕೆ ಜನರು ಭಕ್ತಿಯಿಂದ ಪೂಜಿಸುತ್ತಾರೆ.

    ಇದನ್ನು ಓದಿ: http://ಮುಸುಕುಧಾರಿಗಳಿಂದ ಬಿಡಾಡಿ ದನ ಕಳವು

    ವರ್ಷ ವರ್ಷಕ್ಕೂ ಇವುಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊಟ್ಟೂರೇಶ್ವರ ದೇವಸ್ಥಾನ ಆಡಳಿತ ಮಂಡಳಿ ಮತ್ತು ಧರ್ಮಕರ್ತರು ಗೋಶಾಲೆ ನಿರ್ಮಿಸಲು ಮುಂದಾಗಿದ್ದರು. ಆದರೆ, ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸುವ ಜನರು, ಗೋಶಾಲೆ ಆರಂಭಿಸುವ ಮೂಲಕ ಬಿಡಾಡಿ ದನಗಳ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
    ಈ ಕುರಿತು ಧಾರ್ಮಿಕ ದತ್ತಿ ಇಲಾಖೆ ಇಒ ಬಿ.ಎನ್.ಕೃಷ್ಣಪ್ಪ ಪ್ರತಿಕ್ರಿಯಿಸಿ, ದೇವರ ಹಸುಗಳ ರಕ್ಷಣೆ ವಿಷಯ ನನಗೆ ಹೊಸದು. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಭಕ್ತರು ಕೊಟ್ಟೂರೇಶ್ವರ ದೇವಸ್ಥಾನಕ್ಕೆ ಹರಕೆ ರೂಪದಲ್ಲಿ ಬಿಟ್ಟ ಹಸುಗಳನ್ನು ಗೋಶಾಲೆಗೆ ಬಿಟ್ಟು ಬಂದಿದ್ದೇವೆ. ಈ ದನಗಳು ಖಾಸಗಿ ವ್ಯಕ್ತಿಗಳಿಗೆ ಸೇರಿದ್ದು, ರಸ್ತೆಗೆ ಬಿಡದೆ ಮನೆಯಲ್ಲಿ ಕಟ್ಟಿಕೊಂಡು ಮೇವು ಹಾಕಿ ಸಾಕಬೇಕು. ಟೆಂಪೋದಲ್ಲಿ ಕದ್ದೊಯ್ದ ಹಸು ಖಾಸಗಿ ವ್ಯಕ್ತಿಗಳಿಗೆ ಸೇರಿದ್ದು, ದೇವಸ್ಥಾನಕ್ಕೆ ಸೇರಿದ್ದವಲ್ಲ.
    ಸಿ.ಎಚ್.ಎಂ.ಗಂಗಾಧರಯ್ಯ
    ಪ್ರಧಾನ ಧರ್ಮಕರ್ತ, ಕೊಟ್ಟೂರೇಶ್ವರ ದೇವಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts