More

    ಮನುಷ್ಯನ ನಿಜವಾದ ಸಂಪತ್ತು ಜ್ಞಾನ

    ಭಾಲ್ಕಿ: ಜೀವನದ ಅಂತ್ಯದವರೆಗೂ ಜತೆಗೆ ಬರುವ ಜ್ಞಾನ ಮಾತ್ರ ಮನುಷ್ಯನ ನಿಜವಾದ ಸಂಪತ್ತು ಎಂದು ಹಲಬಗರ್ಾ-ಶಿವಣಿ-ಹೈದರಾಬಾದ್ ಮಠದ ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯರು ನುಡಿದರು.

    ಹಲಬಗರ್ಾ ಗ್ರಾಮದ ರಾಚೋಟೇಶ್ವರ ಸಂಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡ ಹೇಮರಡ್ಡಿ ಮಲ್ಲಮ್ಮ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜ್ಞಾನ ಎಲ್ಲಕ್ಕಿಂತ ಶ್ರೇಷ್ಠ. ಅದನ್ನು ಯಾರೂ ಕದಿಯಲಾರರು. ಬೆಲೆ ಕೂಡ ಕಟ್ಟಲಾರರು ಎಂದರು.

    ಮನುಷ್ಯನಲ್ಲಿ ಆಸೆ ಇರಬೇಕು. ಆದರೆ ದುರಾಸೆ ಇರಬಾರದು. ಸನ್ಮಾರ್ಗದಿಂದ ಗಳಿಕೆ ಮಾಡಬೇಕು. ದೇವರ ಕೃಪೆಗೆ ಪಾತ್ರರಾಗಲು ಸತ್ಕಾರ್ಯಗಳನ್ನು ಮಾಡಬೇಕು. ಅಮೂಲ್ಯ ಜೀವನ ಕೊಟ್ಟಿರುವ ದೇವರಿಗೆ ಕೃತಜ್ಞತೆ ಸಲ್ಲಿಸಬೇಕು. ದೇವರಲ್ಲಿ ಭಕ್ತಿ-ಭಾವದಿಂದ ಪ್ರಾರ್ಥನೆ ಮಾಡಬೇಕು ಎಂದು ತಿಳಿಸಿದರು.

    ಪತ್ರಕರ್ತ ಜೈರಾಜ ದಾಬಶೆಟ್ಟಿ ಉದ್ಘಾಟಿಸಿ ಮಾತನಾಡಿ, ಜೀವನ ಯಶಸ್ಸು ಮಾಡಿಕೊಳ್ಳಬೇಕಾದರೆ ಗುರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಗುರು ಮಾತ್ರ ದೇವರನ್ನು ಓಲೈಸಿಕೊಳ್ಳುವ ಮಾರ್ಗ ತೋರಿಸಬಲ್ಲರು ಎಂದು ಹೇಳಿದರು.

    ಪತ್ರಕರ್ತ ನಾಗೇಶ ಪ್ರಭಾ, ಸಂತೋಷ ಪಾಟೀಲ್, ದೀಪಕ ಥಮಕೆ, ಭದ್ರೇಶ ಸ್ವಾಮಿ, ಕರವೇ ತಾಲೂಕು ಅಧ್ಯಕ್ಷ ಗಣೇಶ ಪಾಟೀಲ್, ಮಲ್ಲಿಕಾಜರ್ುನ ಚಲುವಾ, ರಮೇಶ ಪ್ರಭಾ, ಧನರಾಜ ಪಾಟೀಲ್, ಶರಣಪ್ಪ ಮೂಲಗೆ, ಶಿವಯೋಗಿ ಸ್ವಾಮಿ, ಸಂಜು ಪ್ರಭಾ, ಮಾಣಿಕನಾಥ ಬಿರಾದಾರ, ಕಾಶೀನಾಥ ಬೊಳದೊಡ್ಡೆ ಇತರರಿದ್ದರು. ರೇವಣಪ್ಪ ಮೂಲಗೆ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts