More

    ಮನುಷ್ಯನ ಖಾಯಿಲೆಗೆ ಒತ್ತಡವೇ ಕಾರಣ

    ಕೂಡ್ಲಿಗಿ: ಸರ್ಕಾರಿ ನೌಕರರು ಕರ್ತವ್ಯದ ಒತ್ತಡದಿಂದ ಹೃದಯ ಖಾಯಿಲೆಗಳಿಗೆ ತುತ್ತಾಗುವ ಸಂಭವವೇ ಹೆಚ್ಚು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಾಲ್ತೂರ್ ಶಿವರಾಜ್ ವಿಷಾದ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಬದಲಾದ ಜೀವನಶೈಲಿಯಿಂದ ಹೆಚ್ಚಿನ ಖಾಯಿಲೆ

    ಪಟ್ಟಣದ ಹಿರೇಮಠ ಕಲ್ಯಾಣ ಮಂಟಪದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ಹೃದಯ ಉಚಿತ ತಪಾಸಣಾ ಶಿಬಿರದಲ್ಲಿ ಸೋಮವಾರ ಮಾತನಾಡಿದರು.

    ಆಧುನಿಕ ಭರಾಟೆಯಲ್ಲಿ ಮನುಜ ತನ್ನನ್ನು ತಾನು ಮರೆಯುವಷ್ಟು ಒತ್ತಡವನ್ನು ಅನುಭವಿಸುತ್ತ ಮಾನಸಿಕವಾಗಿ ಕುಗ್ಗಿದ್ದಾನೆ. ಕಚೇರಿಯಲ್ಲಿ ಸಾರ್ವಜನಿಕರ ಹಾಗೂ ಮೇಲಾಧಿಕಾರಿಗಳ ಕಾರ್ಯ ಒತ್ತಡದಲ್ಲಿ ಕೆಲವರು ಹೃದ್ರೋಗ ಸೇರಿ ಅನೇಕ ಖಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಆ ನಿಟ್ಟಿನಲ್ಲಿ ಸರ್ಕಾರಿ ನೌಕರರು ಹಾಗೂ ಕುಟುಂಬಕ್ಕೆ ಆರೋಗ್ಯ ಉಚಿತ ಶಿಬಿರ ಸಹಕಾರಿ ಎಂದರು.

    ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮಿಜೀ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಮನಸ್ಸು ಏಕಾಗ್ರತೆ ಇಲ್ಲ, ಬದುಕಿನ ಜಂಜಾಟದಲ್ಲಿ ಏನಾದರು ಒಂದು ಒತ್ತಡಕ್ಕೆ ಸಿಲುಕಿ ನೆಮ್ಮದಿ ಕಳಕೊಂಡು ಅನಾರೋಗ್ಯಕ್ಕೆ ಸಿಲುಕುತ್ತಿದ್ದಾರೆ. ಆದ್ದರಿಂದ ಮನಸ್ಸನ್ನು ಒತ್ತಡದಿಂದ ಮುಕ್ತಗೊಳಿಸಿ ಆರೋಗ್ಯ ಕಾಪಾಡಿಕೊಳ್ಳಿ. ಪ್ರತಿ ವರ್ಷ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದರು.

    ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಸಿದ್ದರಾಧ್ಯ, ಕಾರ್ಯದರ್ಶಿ ಕೆ.ಎಚ್.ಎಂ.ಶಶಿಧರ, ಕಜಾಪ ಅಧ್ಯಕ್ಷ ಕೆ.ಯಂ.ವೀರೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಎಚ್.ಇಂದಿರಾ,

    ಕ್ಷೇತ್ರ ಸಮನ್ವಯ ಅಧಿಕಾರಿ ಎಸ್.ಎಸ್.ಜಗದೀಶ್, ಶಿಕ್ಷಕರಾದ ಎಚ್.ಡಿ.ಉಡುಚಪ್ಪ, ಕೆ.ಎಸ್.ವೀರೇಶ್, ಟಿ.ತಿಂದಪ್ಪ ಇತರರಿದ್ದರು.
    ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 220 ಕ್ಕೂ ಹೆಚ್ಚು ಸರ್ಕಾರಿ ನೌಕರರು ಹೃದಯ ತಪಾಸಣೆ ಮಾಡಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts