More

    ಮಾನವ ಏಳಿಗೆ ಬಯಸುವ ಧರ್ಮ

    ಮಸ್ಕಿ: ಪುರಾತನ ಕಾಲದಿಂದಲೂ ಪಂಚಾರ್ಯರು ಧರ್ಮವನ್ನು ಉಳಿಸಿಕೊಂಡು ಬಂದಿದ್ದಾರೆ. ವೀರಶೈವ ಧರ್ಮ ಪ್ರತಿಯೊಬ್ಬ ಮಾನವರ ಏಳಿಗೆಯನ್ನು ಬಯಸುತ್ತದೆ ಎಂದು ವಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ಬಸವಲಿಂಗ ಸ್ವಾಮೀಜಿ ಹೇಳಿದರು.

    ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ಹಾಗೂ ಜನ ಜಾಗೃತಿ ಧರ್ಮಸಭೆಯಲ್ಲಿ ಶುಕ್ರವಾರ ಮಾತನಾಡಿ, ವಿರಕ್ತರು ಮತ್ತು ಗುರು ಮಠದವರು ಎರಡು ಕಣ್ಣುಗಳಿದ್ದಂತೆ. ಶಿವಯೋಗ ಮಂದಿರದಲ್ಲಿ ಧರ್ಮ ಆಧರಿತ ಜೀವನ ಪಾಠವನ್ನು ಕಲಿಸಿ ಸಮಾಜ ಮುಖಿಯಾಗಿ ಸರ್ವ ಜನಾಂಗವನ್ನು ಪ್ರೀತಿಸುವುದನ್ನು ಕಲಿಸುತ್ತಾರೆ ಎಂದರು.

    ಇದನ್ನು ಓದಿ: ವ್ಯಾಪಾರಕ್ಕೆ ಬಂದವನಿಂದ ಅನುಚಿತ ವರ್ತನೆ ಧರ್ಮದೇಟು ತಿಂದು ಕ್ಷಮೆ ಯಾಚನೆ

    ನಂದವಾಡಗಿಯ ಮಹಾಂತೇಶ್ವರ ಹಿರೇಮಠದ ಡಾ.ಅಭಿನವ ಚನ್ನಬಸವ ಶಿವಾಚಾರ್ಯರು ಮಾತನಾಡಿ, ಸಿದ್ಧಾಂತ ಶಿಖಾಮಣಿ ಗ್ರಂಥವನ್ನು ಪ್ರತಿಯೊಬ್ಬರೂ ಓದಿ ಜೀವನ ಧರ್ಮವನ್ನು ತಿಳಿದುಕೊಳ್ಳಬೇಕು. ಸಾಧ್ಯವಾಗದಿದ್ದರೆ ಧರ್ಮಸಭೆಯಲ್ಲಿ ಭಾಗವಹಿಸಿ ತಿಳಿದುಕೊಳ್ಳಬೇಕು ಎಂದರು.

    ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರು, ಸಂತೆಕೆಲ್ಲೂರಿನ ಮಹಾಂತ ಶಿವಾಚಾರ್ಯರು, ಬಳಗಾನೂರಿನ ಸಿದ್ದಬಸವ ಸ್ವಾಮೀಜಿ, ಘನಮಠದಯ್ಯ ಸಾಲಿಮಠ, ಕರಿಬಸಯ್ಯ ಸಿಂಧನೂರುಮಠ, ಅಮರಯ್ಯ ಸೊಪ್ಪಿಮಠ ಮಾತನಾಡಿದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಡಾ.ಪಂಚಾಕ್ಷರಯ್ಯ ಕಂಬಾಳಿಮಠ, ಮಲ್ಲಪ್ಪ ಕುಡತಿನಿ, ಸಿದ್ದಲಿಂಗಯ್ಯ ಗಚ್ಚಿನಮಠ, ಎನ್.ಶಿವಕುಮಾರ, ಮಹಾಂತೇಶ ಮಸ್ಕಿ, ಕರಿಬಸಯ್ಯ ಸಿಂಧನೂರಮಠ, ಆದಯ್ಯಸ್ವಾಮಿ ಕ್ಯಾತ್ನಟ್ಟಿ, ಸಿದ್ದಲಿಂಗಯ್ಯ ಸೊಪ್ಪಿಮಠ, ಸುಕುಮುನಿಯಪ್ಪ ನಾಯಕ, ಶರಣಯ್ಯ ಸೊಪ್ಪಿಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts