ವ್ಯಾಪಾರಕ್ಕೆ ಬಂದವನಿಂದ ಅನುಚಿತ ವರ್ತನೆ ಧರ್ಮದೇಟು ತಿಂದು ಕ್ಷಮೆ ಯಾಚನೆ

crime
Published on

ಮಂಗಳೂರು: ಬಟ್ಟೆ ವ್ಯಾಪಾರಕ್ಕೆಂದು ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಯುವತಿಯೊಬ್ಬಳಲ್ಲಿ ಅನುಚಿತವಾಗಿ ವರ್ತಿಸಿದ್ದಕ್ಕೆ ಊರವರು ಸೇರಿ ಧರ್ಮದೇಟು ನೀಡಿ ಕಳುಹಿಸಿದ ಘಟನೆ ಅಮರಪಡ್ನೂರು ಗ್ರಾಮದ ಜೋಗಿಯಡ್ಕದಲ್ಲಿ ನಡೆದಿದೆ.


ಹಿಂದಿ ಮಾತನಾಡುವ ಯುವಕ ಬೈಕ್‌ನಲ್ಲಿ ಬಟ್ಟೆಗಳನ್ನಿರಿಸಿಕೊಂಡು ಮನೆಮನೆಗೆ ತೆರಳಿ ಬಟ್ಟೆ ವ್ಯಾಪಾರ ಮಾಡುತ್ತಿದ್ದು, ಆತ ಕೆಲದಿನಗಳ ಹಿಂದೆ ಅಮರಪಡ್ನೂರು ಗ್ರಾಮದ ಜೋಗಿಯಡ್ಕಕ್ಕೆ ಬಂದಿದ್ದಾನೆ. ಬಟ್ಟೆ ಬೇಡವೆಂದರೂ ಕೇಳದ ಆತ ಹಣ ಕೊಡುವುದು ಬೇಡ, ಬಟ್ಟೆ ತೆಗೆದುಕೊಳ್ಳಿ ಎಂದು ಅಸಭ್ಯವಾಗಿ ವರ್ತಿಸಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಆ ಯುವತಿ, ಯುವಕನನ್ನು ಅದು ಹೇಗೋ ಸಾಗ ಹಾಕಿ ಬಳಿಕ ಮನೆಯವರು ಬಂದ ಮೇಲೆ ವಿಷಯ ತಿಳಿಸಿದ್ದಾಳೆ.


ಇದೇ ವ್ಯಕ್ತಿ ಬುಧವಾರ ಚೊಕ್ಕಾಡಿ ಬಳಿ ಬಟ್ಟೆ ಮಾರುತ್ತಿದ್ದಾಗ ಊರಿನವರು ಪ್ರಶ್ನಿಸಿದಾಗ ನುಣುಚಿಕೊಳ್ಳಲು ಯತ್ನಿಸಿದ್ದು, ಬಳಿಕ ಊರಿನವರು ತದಕಿದ ಬಳಿಕ ತಪ್ಪೊಪ್ಪಿಕೊಂಡು ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net