More

    ಮಡಿವಾಳ ಮಾಚಿದೇವರ ತತ್ವಾದರ್ಶ ರೂಢಿಸಿಕೊಳ್ಳಿ

    ಮಡಿಕೇರಿ: ಮಡಿವಾಳ ಮಾಚಿದೇವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿವೃತ್ತ ಸಹಾಯಕ ಪ್ರದಾನ ವ್ಯವಸ್ಥಾಪಕ ಎಚ್.ಎಸ್.ರಾಮಶೆಟ್ಟಿ ಹೇಳಿದರು.
    ಹೆಬ್ಬಾಲೆ ಗ್ರಾಮದಲ್ಲಿ ಹೆಬ್ಬಾಲೆ-ಹಳಗೋಟೆ ವೀರ ಮಡಿವಾಳ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ಶ್ರೀ ಶರಣ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
    ಮಡಿವಾಳ ಮಾಚಿದೇವರು ಅಸ್ಪಶ್ಯತೆ ವಿರುದ್ಧ ದನಿ ಎತ್ತಿದ್ದರು. ಸಮಾಜ ಸುಧಾರಣೆಯಲ್ಲಿ ಅವರ ಪಾತ್ರ ಬಹಳ ಮಹತ್ವದ್ದಾಗಿತ್ತು. ಮಡಿವಾಳ ಸಮುದಾಯ ಸುಶಿಕ್ಷಿತರಾಗಿ ಮುಂದೆ ಬಂದು ಸ್ವಾವಲಂಭಿಗಳಾಗಬೇಕು ಎಂದು ಹೇಳಿದರು.
    ಶಿಕ್ಷಕ ಎಚ್.ಕೆ.ಶ್ರೀನಿವಾಸ ಶೆಟ್ಟಿ ಮಾತನಾಡಿ, ಜಾತಿ ಪದ್ಧತಿ ವಿರುದ್ಧ ಅನೇಕ ಮಹನೀಯರು ಹೋರಾಡಿದ ಪರಿಣಾಮ ಸ್ವಲ್ಪ ಪ್ರಮಾಣದ ಯಶಸ್ಸು ಕಾಣಲಾಗಿದೆ. 12ನೆಯ ಶತಮಾನದ ಅನುಭವ ಮಂಟಪ, ಅನುಭಾವಿಗಳ ಸಾಲಿಗೆ ಸೇರಿದವರು ಮಾಚಿದೇವರು. ಯಾವುದೇ ವ್ಯಕ್ತಿಯನ್ನು ಜಾತಿಯಿಂದ ಗುರುತಿಸದೆ ಬದುಕಿನ ರೀತಿಯಿಂದ ಗುರುತಿಸಬೇಕು. ಅನುಭವಿಗಳ ಅನುಭವದ ಮಾತನ್ನು ಅಳವಡಿಸಿಕೊಂಡು ಬದುಕಬೇಕು ಎಂದರು.
    ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಯಜಮಾನ್ ಬಸವರಾಜು ಮಾತನಾಡಿದರು. ಸಂಘದ ಅಧ್ಯಕ್ಷ ಎಚ್.ಸಿ.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳಾದ ಎಚ್.ಈ.ಮಂಜುನಾಥ್, ಖಜಾಂಜಿ ಎಚ್.ಎಸ್.ಶ್ಯಾಮಣ್ಣ, ನಿರ್ದೇಶಕರಾದ ಬಿ.ಬಿ.ಮಹಾದೇವ್, ಬಿ.ಬಿ.ಲೋಕೇಶ್, ಎಚ್.ಎಚ್.ನಾಗರಾಜು, ಎಚ್.ಪಿ.ಮಹಾದೇವ, ಮಲ್ಲೇಶ್, ಶಿವಣ್ಣ, ಶಾಂತರಾಜು, ರಂಗನಾಥಶೆಟ್ಟಿ, ಪುಟ್ಟಶೆಟ್ಟಿ, ಶಂಕರ್, ಸುರೇಶ್, ತಮ್ಮಯ್ಯ, ಅರ್ಚಕ ಚಂದ್ರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts