ಒಂಟಿ ಸಲಗ ದಾಳಿಯಿಂದ ಫಸಲು ನಾಶ

1 Min Read
ಒಂಟಿ ಸಲಗ ದಾಳಿಯಿಂದ ಫಸಲು ನಾಶ

ಗೋಣಿಕೊಪ್ಪ: ತಿತಿಮತಿ ಮರೂರು ಗ್ರಾಮದಲ್ಲಿ ಬುಧವಾರ ರಾತ್ರಿ ಒಂಟಿ ಸಲಗ ದಾಳಿ ಮಾಡಿ ತೋಟದಲ್ಲಿ ಬೆಳೆದಿದ್ದ ವಿವಿಧ ಫಸಲನ್ನು ನಾಶ ಮಾಡಿದೆ.


ಕೃಷಿಕ ವಿ.ವಿ.ಮಹದೇವ್ ಅವರ ತೋಟಕ್ಕೆ ಲಗ್ಗೆಯಿಟ್ಟ ಒಂಟಿಸಲಗ, ಮನೆ ಮುಂದಿನ ಹೂಗಿಡಗಳನ್ನು ಆಪೋಶನ ತೆಗೆದುಕೊಂಡಿದೆ. ಕಾಫಿ ತೋಟದಲ್ಲಿದ್ದ ಮಾವಿನ ಮರವನ್ನು ಮುರಿದು ಮಾವಿನ ಹಣ್ಣುಗಳನ್ನು ತಿಂದಿದೆ. ಬಾಳೆಗಿಡ, ತೆಂಗಿನ ಸಸಿಗಳನ್ನು ಮುರಿದು ತಿಂದು ನಾಶಪಡಿಸಿದೆ. ವರ್ಷವಿಡೀ ಮಳೆ ಅಭಾವದ ನಡುವೆಯೂ ಕಷ್ಟಪಟ್ಟು ಬೆಳೆದ ಫಸಲು ಕೈಗೆ ಬಾರದಂತಾಗಿದೆ.


ಈ ಹಿಂದೆಯೂ ಕಾಡಾನೆ ಹಾವಳಿಯಿಂದ ಬೆಳೆ ನಾಶವಾದ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿದರೆ ಬಂದು ಫೋಟೋ ತೆಗೆದುಕೊಂಡು ಹೋಗುವುದು ಬಿಟ್ಟರೆ ಕಾಡಾನೆ ಬರುವುದನ್ನು ತಡೆಗಟ್ಟಲು ಯಾವುದೇ ಕ್ರಮತೆಗೆದುಕೊಂಡಿಲ್ಲ. ಹಾಗೂ ಪರಿಹಾರಕ್ಕೂ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ.

See also  ಗೆಲುವಿನ ನಗೆ ಬೀರಿದ 14 ತಂಡಗಳು
Share This Article