More

    ಮಠಾಧೀಶರು ಸಮಾಜಕ್ಕೆ ಸಮರ್ಪಿಸಿಕೊಳ್ಳಬೇಕು

    ಮುರಗೋಡ: ವೈದಿಕ ಸಂಸ್ಕೃತ ಪಾಠಶಾಲೆಯಿಂದ ಕಲಿತು ಗುರುಗಳಾಗಿ ಮಠಾಧೀಶರು ತಮ್ಮನ್ನು ಸಮಾಜಕ್ಕೆ ಸಮರ್ಪಿಸಿಕೊಳ್ಳಬೇಕು ಎಂದು ಶ್ರೀಶೈಲ 1008 ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.

    ಸ್ಥಳೀಯ ಮಹಾಂತ ದುರದುಂಡೇಶ್ವರ ಮಠದ 51ನೇ ಪುಣ್ಯ ಸ್ಮರಣೋತ್ಸವ ಹಾಗೂ ನೀಲಕಂಠ ಸ್ವಾಮಿಗಳ ಅಮೃತ ಮಹೋತ್ಸವದ ನಿಮಿತ್ಯ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಸಂಸ್ಕೃತ ಪಾಠಶಾಲಾ ಗುರುಕುಲಗಳ ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಉಜ್ಜಯಿನಿಯ 1008 ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿ, ಸಮಾಜದ ಏಳಿಗೆಗಾಗಿ ದುಡಿದು ಸಂಸ್ಕೃತ ವೈದಿಕ ಪಾಠ ಶಾಲೆ ಮುಖಾಂತರ ನಾಡಿನಲ್ಲೆಡೆ ಸಂಸ್ಕಾರ ನೀಡುವ ಕಾರ್ಯ ಮುರಗೋಡ ಮಹಾಂತ ಮಠದ ನೀಲಕಂಠ ಸ್ವಾಮೀಜಿ ಮಾಡಿರುವುದು ಶ್ಲಾಘನೀಯ ಎಂದರು.

    ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿ.ಗಿರೀಶಚಂದ್ರ ಮಾತನಾಡಿ, ಸಮಾಜಕ್ಕೆ ಒಳ್ಳೆಯ ಆಚಾರ-ವಿಚಾರ ತಿಳಿಸಿಕೊಟ್ಟು ಧರ್ಮ ಜಾಗೃತಿ ಮೂಡಿಸಬೇಕು. ಕತ್ತಲೆಯಿಂದ ಬೆಳಕಿನಡೆ ಕೊಂಡೊಯ್ಯುವುದು ಜ್ಞಾನದ ಗುರಿಯಾಗಬೇಕು ಎಂದರು. ದುರದುಂಡೇಶ್ವರ ಮಹಾಂತ ಶಿವಯೋಗಿ ಸಂಸ್ಕೃತ ಪಾಠಶಾಲೆ ಹಳೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯರು, ತಾಳಗೊಪ್ಪ ಸಿದ್ದವೀರ ಸ್ವಾಮೀಜಿ, ಗುರುಲಿಂಗ ಶಿವಾಚಾರ್ಯ, ಹಿರೇಮಠ ಸಂಗೊಳ್ಳಿ, ಮೈಸೂರು ತ್ರೀನೇತ್ರ ಮಹಾಂತ ಸ್ವಾಮೀಜಿ, ಸೋಮಶೇಖರ ಶಿವಾಚಾರ್ಯರು, ಶಾಂತಲಿಂಗ ಶಿವಾಚಾರ್ಯ, ಮುರುಘೇಂದ್ರ ಸ್ವಾಮೀಜಿ, ಅಮರ ಸಿದ್ದೇಶ್ವರ ಸ್ವಾಮೀಜಿ, ಮೂರು ಸಾವಿರಮಠದ ಪ್ರಭು ನೀಲಕಂಠ ಶ್ರೀಗಳು, ಮಹಾಂತೇಶ ಕಮಟಗಿ, ಮಹೇಶ ವಾಲಿ, ಅಡಿವೇಶರ ದೇವರು, ಎಂ.ಯು.ಉಪ್ಪಿನ, ಸಂತೋಷ ಹಿರೇಮಠ, ನಿರಂಜನ ಇಂಚಲಮಠ ಹಾಗೂ ಮಹಾಮನೆ ಅಕ್ಕನ ಬಳಗದ ಸದಸ್ಯೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts