More

    ಭೂ ಸ್ವಾಧೀನದಿಂದ ಕೈ ಬಿಟ್ಟ ಸರ್ಕಾರ

    ಯಾದಗಿರಿ: ಗುರಮಠಕಲ್ ತಾಲೂಕಿನ ಕಡೇಚೂರು- ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಸರ್ಕಾರ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದ ಹೆಚ್ಚುವರಿ 3 ಸಾವಿರ ಎಕರೆ ಭೂಮಿಯನ್ನು ಕೈ ಬಿಡಲು ನಿರ್ಧರಿಸಲಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಸ್ಪಷ್ಟ ಪಡಿಸಿದ್ದಾರೆ  ಎಂದು ಶಾಸಕ ನಾಗನಗೌಡ ಕಂದಕೂರ 

    ಡ್ರಗ್ ಬಲ್ಕ್ ಯುನಿಟ್ ಸ್ಥಾಪನೆಗಾಗಿ ಕಡೇಚೂರು ಪ್ರದೇಶದಲ್ಲಿ ಹೆಚ್ವುವರಿಯಾಗಿ 3 ಸಾವಿರ ಎಕರೆ ಭೂಸ್ವಾಧಿನಕ್ಕಾಗಿ ಸರ್ಕಾರ ಈ ಹಿಂದೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಲಾಗುತ್ತು. ಅಲ್ಲದೆ ರೈತರಿಗೆ 28/1 ನೋಟಿಸ್ ಸಹ ನೀಡಲಾಗಿತ್ತು. ಆದರೆ ಇದಕ್ಕೆ ಕಡೇಚೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರ ವಿರೋಧ ಎದುರಾಗಿತ್ತು. ಅಲ್ಲದೆ ಈ ಭಾಗದಲ್ಲಿ‌ಸಣ್ಣ, ಅತೀಸಣದಣ ರೈತರೇ ಇರುವುದರಿಂದ ಭೂಮಿ ಕಳೆದುಕೊಂಡು ಶಾಶ್ವತವಾಗಿ ವಲಸೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

    ಅಲ್ಲದೆ ಈ ಬಗ್ಗೆ ಹಲವು ಸಂಘಟನೆಗಳಿಂದ ಹೋರಾಟ ಸಹ ನಡೆಸಲಾಗಿತ್ತು.

     ಈ ಬಗ್ಗೆ ಕಳೆದ 6 ತಿಂಗಳ ಹಿಂದೆ ತಾವು ಸಚಿವ ನಿರಾಣಿರನ್ನು ಭೇಟಿ ಮಾಡಿ ಹೆಚ್ಚುವರಿ ಭೂಸ್ವಾಧೀನ ಕೈ ಬಿಡುವಂತೆ ಒತ್ತಾಯಿಸಿದ್ದೆ ಎಂದಿದ್ದಾರೆ.

    ಈ ಬಗ್ಗೆ ಪರಿಶೀಲನೆ ನಡೆಸಿರುವ ಸಚಿವ ನಿರಾಣಿ, ಭೂಸ್ವಾಧೀ‌ನದಿಂದ‌‌ ಹಿಂದೆ ಸರಿದಿದ್ದು, ಈ ಬಗ್ಗೆ ಆದೇಶ ಸಹ ಮಾಡಲಾಗುವುದು. ಅಲ್ಲದೆ ಸ್ವಾಧೀನ ಕೈ ಬಿಡುವ ಬಗ್ಗೆ ಮತ್ತೊಂದು ಗೆಜೆಟ್ ಹೊರಡಿಸಬೇಕಾಗಿದೆ.‌ ಹಿರಿಯ ಐಎಎಸ್ ಅಧಿಕಾರಿಗಳ ನೇತೃತ್ವದ ಬೋರ್ಡ್ ಕಮಿಟಿ ಸಭೆ ಕರೆದು, ಅಲ್ಲಿ ತೀರ್ಮಾನ ಕೈಗೊಳ್ಳಬೇಕಾದ ಕಾರಣ, ಶೀಘ್ರದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾಗಿ ಕಂದಕೂರ ಹೇಳಿದ್ದಾರೆ.

    ಕೈಗಾರಿಕಾ ಪ್ರದೇಶದಲ್ಲಿ ಸದ್ಯ ವಶ ಪಡಿಸಿಕೊಂಡ ಭೂಮಿ ಸದ್ಬಳಕೆಯಾಗುತ್ತಿಲ್ಲ.‌ ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts