More

    ಭೀಮಾತೀರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಶಾಸಕ ಚವಾಣ್

    ವಿಜಯಪುರ: ಭೀಮಾತೀರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಅಪರಾಧ ತಡೆಯುವಲ್ಲಿ ಪೊಲೀಸ್ ಇಲಾಖೆ ವೈಫಲ್ಯ ಸಾಧಿಸಿದೆ ಎಂದು ಶಾಸಕ ದೇವಾನಂದ ಚವಾಣ ಆರೋಪಿಸಿದ್ದಾರೆ.

    ಕಳೆದ ಹಲವು ವರ್ಷಗಳಿಂದ ಮರಳು ಮಾಫಿಯಾ, ಡ್ರಗ್ಸ್ ಮಾಫಿಯಾ ಮುಂತಾದ ಕಾನೂನು ಬಾಹಿರ ಕೃತ್ಯ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ತಡೆಯುವಲ್ಲಿ ವಿಫಲವಾಗಿದೆ. ಬೆಳಗ್ಗೆ ಮನೆಯಿಂದ ಹೊರ
    ಹೋದ ವ್ಯಕ್ತಿ ಸಂಜೆ ರಮನೆಗೆ ಬರುತ್ತೇನೆಂಬ ಭರವಸೆ ಕಾಣಿಸುತ್ತಿಲ್ಲವೆಂದು ಗುರುವಾರ ಸುದ್ದಿಗಾರರಿಗೆ ಅವರು ತಿಳಿಸಿದರು.

    ಕಳೆದ ವಾರದ ಹಿಂದೆಯೇ ನನಗೆ ಜೀವ ಬೆದರಿಕೆ ಹಾಕಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಇಬ್ಬರು ಗನ್ ಮ್ಯಾನ್ ಸಹ ನೀಡಿದ್ದಾರೆ. ಆದರೆ, ರಾತ್ರಿ ಒಬ್ಬರೇ ಓಡಾಡುವ ಹಿನ್ನೆಲೆ ಹೆಚ್ಚಿನ ಭದ್ರತೆ ಅವಶ್ಯಕತೆ ಇದೆ. ನನ್ನ ಜೀವಕ್ಕೆ
    ಅಪಾಯವಾದರೆ ಅದಕ್ಕೆ ಪೋಲೀಸ್ ಮತ್ತು ಜಿಲ್ಲಾಡಳಿತವೇ ಕಾರಣ ಎಂದರು.

    ಭೀಮಾತೀರ ಛೋಟಾ ಕಾಶ್ಮೀರ ಆಗಿದೆ. ಅಲ್ಲಿ ಮರಳು, ಅಫೀಮು, ಡ್ರಗ್ಸ್ ದಂಧೆ ಎಗ್ಗಿಲ್ಲದೇ ನಡೆದಿದೆ. ಇಲಾಖೆ ಸಹ ಶಾಮೀಲಿದೆ. ಇಲಾಖೆಗೆ ಕಮೀಷನ್ ಹೋಗುತ್ತಿದೆ.
    ದೂರು ನೀಡಲು ಬಂದರೂ ಸ್ವೀಕರಿಸಲು ಪೊಲೀಸರು
    ನಿರಾಸಕ್ತಿ ತೋರುತ್ತಿದ್ದಾರೆಂದು ಆರೋಪಿಸಿದರು.

    ಕಳೆದ ಕೆಲ ದಿನಗಳ ಹಿಂದೆ
    ಮಧ್ಯರಾತ್ರಿ 3 ಗಂಟೆಗೆ ಮನೆ ಪಕ್ಕದಲ್ಲಿ ಶ್ರೀಗಂಧ ಮರ ಕಳ್ಳತನ ಕ್ಕೆ ಯತ್ನ ನಡೆಯಿತು. ಆದರೆ, ಅದು ನಿಜವಾದ ಕಳ್ಳತನ ಅಂತ ಅನ್ನಿಸುತ್ತಿಲ್ಲ. ಅದರ ಹಿಂದೆ ಬೇರೆಯದೇ ಸಂಚು‌ ಕಾಣಿಸುತ್ತಿದೆ. ಏಕೆಂದರೆ ಅವರು ಕಳ್ಳತನ ಮಾಡಿ ಹೋಗದೇ ನಮ್ಮ ಮನೆ ಆವರಣಕ್ಕೆ ಬಂದಿದ್ದಾರೆ. ನಾನು ವಿಚಾರಿಸಿದಾಗ ನನ್ನನ್ನೇ ನೋಡಲು ಬಂದಿದ್ದಾಗಿ ಹೇಳಿದರು.‌ ಗುಂಡು ಹೊಡೆದು ಸಾಯಿಸುವುದಾಗಿ ಹೆದರಿಸಿದರು. ಬಳಿಕ ಪೊಲೀಸರಿಗೆ ಕರೆ ಮಾಡಲಾಗಿ ಓಡಿ ಹೋದರು. ಇದಕ್ಕೂ ಮುನ್ನ ಹಂಚನಾಳ ತಾಂಡಾ ಬಳಿ ನಮ್ಮ ತಾಂಡಾದವರನ್ನುಕರೆದು ಸಂಪೂರ್ಣ ಮಾಹಿತಿ ಕಲೆ ಹಾಕಿದರು. ನಾವು ಮಹಾದೇವ ಸಾಹುಕಾರ ಕಡೆಯವರು, ನಿಮ್ಮ ಶಾಸಕನಿಗೆ ಹೊಡೆಯುತ್ತೇವೆ, ಎಷ್ಟು ದಿನ ಗನ್ ಮ್ಯಾನ್ ಗಳನ್ನಿಟ್ಟುಕೊಂಡು ತಿರುಗುತ್ತಾನೋ ನೋಡುತ್ತೇವೆಂದು ಹೆದರಿಕೆ ಹಾಕಿದ್ದಾರೆ.

    ಈ ಹಿಂದೆ ನಾನು ಮರಳು ಮಾಫಿಯಾ, ಡ್ರಗ್ಸ್ ಮಾಫಿಯಾ ತಡೆಯಲು ಶ್ರಮಿಸಿದ್ದು ಅದೇ ದ್ವೇಷದಿಂದ ಈ ಕೃತ್ಯ ನಡೆಯುತ್ತಿದೆ ಎಂದೆನಿಸುತ್ತಿದೆ. ಜಿಲ್ಲೆಯಲ್ಲಿ ದಿನೇ ದಿನೇ ಕಾನೂನು ಬಾಹಿರ ಕೃತ್ಯ ನಡೆಯುತ್ತಿವೆ. ಹೀಗಾಗಿ ಭಯ ಹೆಚ್ಚಿದ್ದು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದೇನೆಂದು ಚವಾಣ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts