More

    ಭಾರಿ ಮಳೆಗೆ ಬೆಳೆ ಹಾನಿ

    ಡಂಬಳ: ಬುಧವಾರ ಸಂಜೆ ಸುರಿದ ಮಳೆಯಿಂದಾಗಿ ಡಂಬಳ ವ್ಯಾಪ್ತಿಯ ಡೋಣಿ, ಡೋಣಿ ತಾಂಡ, ಕದಾಂಪುರ, ಪೇಠಾಲೂರ, ರಾಮನೇಹಳ್ಳಿ ಸೇರಿದಂತೆ ಹಲವೆಡೆ ಜಮೀನುಗಳು ಸಂಪೂರ್ಣ ಜಲಾವೃತ್ತಗೊಂಡಿವೆ.

    ಮುಂಗಾರು ಪೂರ್ವದಲ್ಲಿ ಬಿತ್ತನೆಯಾದ ಉಳ್ಳಾಗಡ್ಡಿ, ಸೂರ್ಯಕಾಂತಿ, ಮೆಕ್ಕೆಜೋಳ, ಶೇಂಗಾ, ಹತ್ತಿ ಬೆಳೆಗಳು ಕಟಾವಿಗೆ ಬಂದಿವೆ. ಈ ಮಳೆಯಿಂದಾಗಿ ಕೊಳೆ ರೋಗ ಬಿದ್ದು ಹೊಲದಲ್ಲೇ ಕೊಳೆಯುವಂತಹ ಪರಿಸ್ಥಿತಿ ನಿರ್ವಣವಾಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ವಣವಾಗಿದೆ. ಕೂಡಲೇ ಸರ್ಕಾರ ನಾಶವಾದ ಬೆಳೆಗೆ 1 ಎಕೆರೆಗೆ 30 ಸಾವಿರ ರೂ. ಬೆಳೆ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts