More

    ಭಾರತ ವಿಶ್ವಗುರುವಾಗಿಸಲು ಮೋದಿ ಪಣ

    ಲಕ್ಷ್ಮೇಶ್ವರ: ಹಲವಾರು ಏಳು-ಬೀಳುಗಳ ನಡುವೆಯೂ ಜಗತ್ತಿನ ಭೂಪಟದಲ್ಲಿ ಭಾರತವನ್ನು ವಿಶ್ವಗುರುವಾಗಿಸಲು ಪ್ರಧಾನಿ ಮೋದಿ ಅವರು ಸಂಘಟನಾತ್ಮಕ ಹೋರಾಟ ನಡೆಸಿದ್ದಾರೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

    ಬಿಜೆಪಿ ಸರ್ಕಾರದ ಎರಡನೇ ಅವಧಿಯ 1 ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಜನರಿಗೆ ಬರೆದಿರುವ ಪತ್ರ ಮತ್ತು ಸರ್ಕಾರದ ಸಾಧನೆಗಳುಳ್ಳ ಕರಪತ್ರಗಳನ್ನು ಪಟ್ಟಣದಲ್ಲಿ ಮನೆ ಮನೆಗೆ ತಲುಪಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ 70 ವರ್ಷಗಳಲ್ಲಿ ಮಾಡಲಾಗದ ಅಭಿವೃದ್ಧಿ್ದ ಜನಪರ ಕಾರ್ಯಗಳನ್ನು ಪ್ರಧಾನಿ ಮೋದಿ ಅವರು ಕೇವಲ 6 ವರ್ಷಗಳಲ್ಲಿ ಪೂರ್ಣಗೊಳಿಸಿದ್ದಾರೆ. ಜನತೆಗೆ ಸ್ಥಿರ, ಭದ್ರತೆ, ವಿಶ್ವಾಸ, ಅಭಿವೃದ್ಧಿಪರ ಸರ್ಕಾರ ನೀಡಿದ್ದಾರೆ. ಜನಧನ, ವಿಮೆ, ಪಿಂಚಣಿ, ಉಜ್ವಲ ಯೋಜನೆ, ಜನೌಷಧ ಸೇರಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ದೇಶದ ಭದ್ರತೆಗೆ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕರೊನಾ ಮಹಾಮಾರಿಯನ್ನು ಹೊಡೆದೋಡಿಸುವಲ್ಲಿ ಮೋದಿ ಅವರು ಕೈಗೊಂಡ ನಿರ್ಧಾರ ವಿಶ್ವಕ್ಕೆ ಪ್ರೇರಣೆಯಾಗಿದೆ. ಇಂದಿನ ಸಂಕಷ್ಟದ ಪರಿಸ್ಥಿತಿಯಲ್ಲಿ ಮೋದಿ ಅವರ ಆತ್ಮನಿರ್ಭರ ಭಾರತ ನಿರ್ವಣಕ್ಕೆ ಎಲ್ಲರೂ ಕೈಜೋಡಿಸಬೇಕಿದೆ. ಇಷ್ಟಾಗಿಯೂ ವಿರೋಧ ಪಕ್ಷಗಳು ವೃಥಾ ಆರೋಪಗಳನ್ನು ಮಾಡುತ್ತ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿವೆ. ಅದಕ್ಕಾಗಿ ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆ, ಬಿಜೆಪಿ ಕಾರ್ಯಕರ್ತರು ದೇಶಕ್ಕಾಗಿ ಕೈಗೊಂಡ ಮೋದಿ ಸರ್ಕಾರದ ದಿಟ್ಟ ನಿರ್ಧಾರ, ಕಾರ್ಯಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಬೇಕು ಎಂದರು.

    ಈ ವೇಳೆ ಬಿಜೆಪಿ ನಗರ ಘಟಕದ ಅಧ್ಯಕ್ಷ ಗಂಗಾಧರ ಮೆಣಸಿನಕಾಯಿ, ದುಂಡೇಶ ಕೊಟಗಿ, ಪ್ರಕಾಶ ಮಾದನೂರ, ಪ್ರವೀಣ ಬೋಮಲೆ, ನಾಗರಾಜ ಪಿಳ್ಳಿ, ಸಿದ್ದಣ್ಣ ಸವಣೂರ, ಈಶ್ವರ ರೋಣದ, ವಿಜಯ ಕುಂಬಾರ, ಇತರರಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts