More

    ಭಾರತವನ್ನು ವಿಶ್ವಗುರು ಮಾಡುವತ್ತ ಗುರಿಯಿರಲಿ

    ಚಿಕ್ಕಮಗಳೂರು: ಮಕ್ಕಳು ವಿವೇಕಾನಂದರಂತೆ ತೀಕ್ಷ್ಣ ಬುದ್ಧಿ ಬೆಳೆಸಿಕೊಂಡು ಭಾರತವನ್ನು ವಿಶ್ವ ಗುರು ಮಾಡುವ ಗುರಿ ಹೊಂದಬೇಕು ಎಂದು ವಂದೇ ಮಾತರಂ ಟ್ರಸ್ಟ್ ಸಹಕಾರ್ಯದರ್ಶಿ ರವೀಶ್ ಹೇಳಿದರು.

    ನಗರದ ಕೋಟೆ ಕ್ರೖೆಸ್ ದ ಕಿಂಗ್ ಶಾಲೆಯಲ್ಲಿ ವಂದೇ ಮಾತರಂ ಟ್ರಸ್ಟ್ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರು ಭಾರತದ ಹಿರಿಮೆಯನ್ನು ಚಿಕಾಗೋದಲ್ಲಿ ನೆಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಎತ್ತಿಹಿಡಿದ 129ನೇ ವರ್ಷಾಚರಣೆ ಸಮಾರಂಭದಲ್ಲಿ ಮಾತನಾಡಿದರು. ಸ್ವಾಮಿ ವಿವೇಕಾನಂದರು ಯುವಜನರ ಸ್ಪೂರ್ತಿಯಾಗಿದ್ದರು. ಅವರ ಗುಣಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಸಾಗಿದಾಗ ಭವಿಷ್ಯ ಉಜ್ವಲವಾಗುತ್ತದೆ ಎಂದರು.

    ಅಧ್ಯಕ್ಷ ಪ್ರೀತೇಶ್ ಮಾತನಾಡಿ, ವಿವೇಕಾನಂದರು ಬಹಳ ಕಷ್ಟಪಟ್ಟು ಭಾರತದಿಂದ ಚಿಕಾಗೋಕೆ ತೆರಳಿದ್ದರು. ಇದಕ್ಕೆ ಪ್ರೇರಣೆ ಚಿಕ್ಕಮಗಳೂರಿನ ಅಳಸಿಂಗ ಪೆರುಮಾಳ್ ಎಂಬುದು ನಮ್ಮ ಹೆಮ್ಮೆ . ಸ್ವಾಮಿ ವಿವೇಕಾನಂದರು ಉನ್ನತ ಸ್ಥಾನಕ್ಕೇರಲು ಪೆರುಮಾಳರ ಕೊಡುಗೆ ಅನನ್ಯ. ಹಾಗಾಗಿ ವಿವೇಕಾನಂದರಂತೆ ಅಳಸಿಂಗ ಪೆರುಮಾಳರನ್ನೂ ಆರಾಧಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts