More

    ಭಾಗವತ ಸ್ವರ್ಗದ ಅಮೃತಕ್ಕೂ ಮಿಗಿಲು

    ಕಲಬುರಗಿ: ಸಂಸಾರದಿಂದ ತಪ್ತರಾದ ಜನರಿಗೆ ಸೂಕ್ತ ಪರಿಹಾರ ಒದಗಿಸುವ ಭಾಗವತ ಗ್ರಂಥ ಸ್ವರ್ಗದಲ್ಲಿ ದೇವತೆಗಳು ಸೇವಿಸುವ ಅಮೃತಕ್ಕಿಂತ ಮಿಗಿಲಾದ್ದದು ಎಂದು ಪ್ರಯಾಗದ ಶ್ರೀ ವಿದ್ಯಾತ್ಮತೀರ್ಥರು ಹೇಳಿದರು
    ಇಲ್ಲಿನ ವಿದ್ಯಾನಗರದ ಶ್ರೀ ಕೃಷ್ಣ ಮಂದಿರದಲ್ಲಿ ಅಧಿಕಮಾಸ ನಿಮಿತ್ತ ಆಯೋಜಿಸಿರುವ ಪ್ರವಚನದಲ್ಲಿ ಭಾಗವತ ಕುರಿತು ಆಶೀರ್ವಚನ ನೀಡಿದ ಶ್ರೀಗಳು, ಭಾಗವತ ಕೇವಲ ಕಥೆ ಹೇಳುವ ಗ್ರಂಥವಲ್ಲ. ನಮ್ಮ ದೇಹ, ಇಂದ್ರಿಯ, ಮನಸ್ಸು ಮತ್ತು ಪ್ರಪಂಚ ಸೃಷ್ಟಿ ಮಾಡಿದ, ಪ್ರತಿಯೊಬ್ಬರಿಗೂ ತಂದೆ, ತಾಯಿ ಎನಿಸಿಕೊಂಡಿರುವ ಭಗವಂತನ ಪರಮ ಗುಣ ಕೊಂಡಾಡುವ ಪಾವನ ಗ್ರಂಥವಾಗಿದೆ ಎಂದರು.
    ಎಲ್ಲಿ ಭಾಗವತ ಇರುತ್ತದೆಯೋ ಅಲ್ಲಿ ಭಗವಂತನಿರುತ್ತಾನೆ. ಕಲಿಯುಗದಲ್ಲಿ ಭಗವಂತನನ್ನು ಕಾಣಲಾಗದು. ಆದರೆ ನಮ್ಮ ಕಣ್ಣೆದುರಿಗೆ ಇರುವ ಭಾಗವತದಲ್ಲಿ ಭಗವಂತನನ್ನು ಕಾಣಬೇಕು, ಬೇಕು ಎಂದು ಆಪೇಕ್ಷೆ ಪಟ್ಟರೆ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಬೇಡಿ ಪಡೆದಿದ್ದನ್ನು ಕೊನೆತನಕ ಉಳಿಯುವುದಿಲ್ಲ. ನಾವು ಏನನ್ನೂ ಆಪೇಕ್ಷಿಸದಿದ್ದರೆ ಭಗವಂತ ಎಲ್ಲವನ್ನೂ ನೀಡುತ್ತಾನೆ. ನಮ್ಮನ್ನು ಹಣ ರಕ್ಷಿಸುವುದಿಲ್ಲ. ಭಗವಂತ ರಕ್ಷಿಸುತ್ತಾನೆ ಎಂಬ ಸತ್ಯ ಅರಿಯಬೇಕು ಎಂದರು.
    ಜಯತೀಥ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ನವಲಿ ಕೃಷ್ಣಾಚಾರ್ಯ, ವಿದ್ಯಾಸಾಗರ ಕುಲಕಣರ್ಿ ರೇವೂರ ಹಾಗೂ ಗೋಪಾಲಕೃಷ್ಣ ಭಜನಾ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.
    ಅಧಿಕಮಾಸ ಕಾರ್ಯಕ್ರಮ ಆರಂಭ
    ಪ್ರಯಾಗದ ಶ್ರೀ ವಿದ್ಯಾತ್ಮ ತೀರ್ಥರ ಸಾನ್ನಿಧ್ಯದಲ್ಲಿ ವಿದ್ಯಾನಗರದ ಶ್ರೀಕೃಷ್ಣ ಮಂದಿರದಲ್ಲಿ ಅಧಿಕ ಮಾಸದ ಕಾರ್ಯಕ್ರಮ ಭಾನುವಾರದಿಂದ ಆರಂಭವಾಗಿದ್ದು, ಅಕ್ಟೋಬರ್ 16ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ಜಯತೀರ್ಥ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ನವಲಿ ಕೃಷ್ಣಾಚಾರ್ಯ ತಿಳಿಸಿದ್ದಾರೆ. ಪ್ರತಿದಿನ ಬೆಳಗ್ಗೆ 9ರಿಂದ 10ರವರೆಗೆ ಭಕ್ತರಿಂದ ಶ್ರೀಪಾದಂಗಳವರ ಪಾದಪೂಜೆ, ನಂತರ ಅಧಿಕಮಾಸ ನಿಮಿತ್ತ 33 ದೇವತೆಗಳ ಅಪೂಪ ದಾನ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಶ್ರೀಗಳಿಂದ ಸಂಸ್ಥಾನ ಪೂಜೆ, ಪ್ರತಿದಿನ ಸಂಜೆ 4.30ರಿಂದ 6ರವರೆಗೆ ಗೋಪಾಲಕೃಷ್ಣ ಭಜನಾ ಮಂಡಳಿ ಸದಸ್ಯರಿಂದ ಅಧಿಕ ಮಾಸದ 33 ಹಾಡಿನ ಭಜನೆ, ಸಂಜೆ 6ರಿಂದ 7ರವರೆಗೆ ಶ್ರೀಪಾದಂಗಳವರಿಂದ ಶ್ರೀಮದ್ ಭಾಗವತ ಕುರಿತು ಆನ್ಲೈನ್ ಮೂಲಕ ಪ್ರವಚನ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts