More

    ಬುದ್ದನ ತತ್ವಾದರ್ಶದಿಂದ ಅಸಮಾನತೆ ನಿವಾರಣೆ

    ಚಿತ್ರದುರ್ಗ: ನವಯಾನ ಬುದ್ದ ಧಮ್ಮದ ತತ್ವಾದರ್ಶ ಸರ್ವರೂ ಪಾಲಿಸಿದರೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಅಸಮಾನತೆ ನಿವಾರಣೆಯಾಗಲಿದೆ ಎಂದು ಸಾಮಾಜಿಕ ಸಂಘರ್ಷ ಸಮಿತಿಯ ಅಧ್ಯಕ್ಷ ಪ್ರೊ.ಸಿ.ಕೆ.ಮಹೇಶ್ ತಿಳಿಸಿದರು.

    ನವಯಾನ ಬುದ್ದ ಧಮ್ಮ ಸಂಘದಿಂದ ಮಡಿವಾಳ ಸಮಾಜದ ಮುಖಂಡ ಶಿವಲಿಂಗಪ್ಪ ನಿವಾಸದಲ್ಲಿ ಭಾನುವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ನವಯಾನ 100ನೇ ಸರಣಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಮಡಿವಾಳ ಮಾಚಿ ದೇವರಿಂದಾಗಿ ವಚನ ಚಳವಳಿ ಉಳಿದಿದೆ. ಬುದ್ದನ ತಾತ್ವಿಕ ನಿಲುವನ್ನು ವಚನಕಾರರು ಮಾತಿನ ಕ್ರಿಯೆಯಲ್ಲಿ ಪಾಲಿಸಿದ್ದಾರೆ. ಹಿಂದುಳಿದವರು, ಶೋಷಿತರು, ದಲಿತರು ತಮ್ಮ ಸಮುದಾಯದ ಇತಿಹಾಸ ತಿಳಿಯದ ಕಾರಣ ಇನ್ನೂ ಸಮಾಜದ ಮುಖ್ಯವಾಹಿನಿಗೆ ಬರಲು ಆಗುತ್ತಿಲ್ಲ ಎಂದು ಬೇಸರಿಸಿದರು.

    ಲೇಖಕ ಎಚ್.ಆನಂದ್‌ಕುಮಾರ್ ಮಾತನಾಡಿ, ಗೌತಮ ಬುದ್ದ ಸರ್ವರನ್ನು ಅಪ್ಪಿಕೊಳ್ಳುವ ಅವ್ವ ಸಂಸ್ಕೃತಿ ಎತ್ತಿಹಿಡಿದರು. ಸ್ತ್ರೀಯರನ್ನು ಪೂಜ್ಯ, ಗೌರವ ಭಾವನೆಯಿಂದ ಕಾಣಬೇಕೆಂಬುದು ಅವರ ಆಸೆಯಾಗಿತ್ತು. ಹಿಂಸೆ, ಅತಿಯಾಸೆ ದುಃಖಕ್ಕೆ ಮೂಲ ಕಾರಣ ಎನ್ನುವ ಉತ್ತಮ ಸಂದೇಶ ಸಮಾಜಕ್ಕೆ ಸಾರಿದರು ಎಂದು ಸ್ಮರಿಸಿದರು.

    ನಿವೃತ್ತ ಪ್ರಾಚಾರ್ಯ ಡಾ.ವಿ.ಬಸವರಾಜ್, ಶಿವಲಿಂಗಪ್ಪ, ರಂಜಿತಾ, ಗೌರಮ್ಮ ಬಸಪ್ಪ, ಕೆ.ಕುಮಾರ್, ಡಿ.ದುರುಗೇಶಪ್ಪ, ರಾಮು ಗೋಸಾಯಿ, ನಿವೃತ್ತ ಅಧಿಕಾರಿ ಮಲ್ಲಿಕಾರ್ಜುನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts