More

    ವರುಣಾರ್ಭಟ, ಸಿಡಿಲಿಗೆ ಇಬ್ಬರು ಬಲಿ

    ಚಿತ್ರದುರ್ಗ: ಜಿಲ್ಲಾದ್ಯಂತ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಒಟ್ಟು 34 ಮನೆಗಳು ಭಾಗಶಃ, 11.48 ಹೆಕ್ಟೇರ್‌ನಷ್ಟು ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದ್ದು, ಸಿಡಿಲಿಗೆ 1 ದೊಡ್ಡ, 2 ಸಣ್ಣ ಜಾನುವಾರು ಹಾಗೂ ಇಬ್ಬರ ಜೀವಹಾನಿಯಾಗಿದೆ.

    ಮೊಳಕಾಲ್ಮೂರು ತಾಲೂಕು ಮೇಗಳ ಕಣಿವೆಯಲ್ಲಿ ಮಂಗಳವಾರ ಮಧ್ಯಾಹ್ನ ಸಿಡಿಲು ಬಡಿದು ರೈತ ಲಿಂಗರಾಜು (36) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಧ್ಯಾಹ್ನ ಸಾಧಾರಣ ಮಳೆ ಸುರಿಯುತ್ತಿದ್ದ ವೇಳೆ ಹೊಲದಿಂದ ಮನೆ ಕಡೆ ಹೊರಟಾಗ ಈ ಅವಘಡ ಸಂಭವಿಸಿದೆ.

    ಚಳ್ಳಕೆರೆ-7, ಹೊಳಲ್ಕೆರೆ-4, ಹೊಸದುರ್ಗ-10, ಚಿತ್ರದುರ್ಗ ಮತ್ತು ಹಿರಿಯೂರು ತಲಾ-5, ಮೊಳಕಾಲ್ಮೂರು ತಾಲೂಕಿನಲ್ಲಿ 3 ಮನೆಗಳು ಭಾಗಶಃ ಹಾನಿಯಾಗಿವೆ. ಮೂರು ಮನೆಗಳಿಗೆ ನೀರು ನುಗ್ಗಿದೆ.

    ಸೂಗೂರಿನಲ್ಲಿ 108.6 ಮಿ.ಮೀ ಮಳೆ: ಹಿರಿಯೂರು ತಾಲೂಕಿನ ಸೂಗೂರಿನಲ್ಲಿ 108.6 ಮಿ.ಮೀ ಮಳೆಯಾಗಿದೆ. ಇದು ಜಿಲ್ಲೆಯಲ್ಲಿ ಸೋಮವಾರ ಸುರಿದ ಅತ್ಯಧಿಕ ಮಳೆಯಾದ ಪ್ರದೇಶವಾಗಿದೆ.

    ಹಿರಿಯೂರು-54.4, ಇಕ್ಕನೂರು-68.4, ಈಶ್ವರಗೆರೆ-51, ಬಬ್ಬೂರು-59.2, ಚಿತ್ರದುರ್ಗ ಭಾಗ 1-45.8, ಚಿತ್ರದುರ್ಗ ಭಾಗ 2-41.3, ಭರಮಸಾಗರ-38.4, ಹಿರೇಗುಂಟನೂರು-13.4, ತುರುವನೂರು-28.6, ಸಿರಿಗೆರೆ-28.8, ಐನಹಳ್ಳಿ-36.2, ಹೊಸದುರ್ಗ-72.6, ಬಾಗೂರು-55.5, ಮಾಡದಕೆರೆ-62, ಮತ್ತೋಡು-13.2, ಶ್ರೀರಾಂಪುರದಲ್ಲಿ 45.2 ಮಿ.ಮೀ ಮಳೆಯಾಗಿದೆ.

    ಹೊಳಲ್ಕೆರೆ-30.6, ರಾಮಗಿರಿ-31.5, ಚಿಕ್ಕಜಾಜೂರು-30.5, ಬಿ.ದುರ್ಗ-29.2, ಎಚ್.ಡಿ.ಪುರ-38.6, ಚಳ್ಳಕೆರೆ-44, ಪರಶುರಾಂಪುರ-46.2, ನಾಯಕನಹಟ್ಟಿ-50.4, ತಳಕು-31.2, ಡಿ.ಮರಿಕುಂಟೆಯಲ್ಲಿ 35.4 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.

    ಆರ್ಭಟಿಸಿದ ವರುಣ: ನಗರದಲ್ಲಿ ಸೋಮವಾರ ರಾತ್ರಿ ಗುಡುಗು, ಮಿಂಚು, ಸಿಡಿಲು ಸಮೇತ ಧಾರಾಕಾರ ಮಳೆ ಸುರಿಯಿತು. ರಾತ್ರಿ 10.45ಕ್ಕೆ ಆರಂಭವಾದ ಮಳೆ 11.15ರವರೆಗೂ ಪ್ರತಿ 5 ನಿಮಿಷಕ್ಕೆ ಬಿರುಸು ಪಡೆಯಿತು. ನಂತರ ಇಡೀ ರಾತ್ರಿ ಹದ ಮಳೆಯಾಯಿತು. ಚರಂಡಿಗಳು ತುಂಬಿ ಹರಿದ ಪರಿಣಾಮ ರಸ್ತೆಗಳ ಮೇಲೆಲ್ಲ ಅನುಪಯುಕ್ತ ತ್ಯಾಜ್ಯದ ರಾಶಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮಂಗಳವಾರ ಬೆಳಗ್ಗೆ ರಸ್ತೆಗಿಳಿದ ಪೌರಕಾರ್ಮಿಕರು ಸ್ವಚ್ಛಗೊಳಿಸುವಷ್ಟರಲ್ಲಿ ಹೈರಾಣಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts