More

    ರಕ್ತ,ಅಂಗಾಂಗಗಳ ದಾನದಿಂದ ಜೀವ ರಕ್ಷಣೆ ಸಾಧ್ಯ

    ಚಿತ್ರದುರ್ಗ: ರಕ್ತದಾನ ಮತ್ತು ಅಂಗಾಂಗಗಳ ದಾನದಿಂದ ಮತ್ತೊಬ್ಬರ ಜೀವವನ್ನು ರಕ್ಷಿಸಲು ಸಾಧ್ಯವಿದೆ ಎಂದು ಚಿತ್ರದುರ್ಗ ತಾಲೂಕು ಆರೋಗ್ಯ ಶಿಕ್ಷಣಾಧಿ ಕಾರಿ ಎನ್.ಎಸ್.ಮಂಜುನಾಥ್ ಹೇಳಿದರು. ದಾವಣಗೆರೆ ವಿಶ್ವವಿದ್ಯಾನಿಲಯ,ಆರೋಗ್ಯ ಇಲಾಖೆ ಸಹಯೋಗದಲ್ಲಿ ವಿಶ್ವರೆಡ್‌ಕ್ರಾಸ್ ದಿನದ ಅಂ ಗವಾಗಿ ಮಂಗಳವಾರ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ ಪ್ರಶಕ್ಷಣಾರ್ಥಿಗಳಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ನಿಧನ ಹೊಂದಿದ ಬಳಿಕವೂ ನಾವು ಬದುಕಿರಬೇಕು ಎಂದಾದರೆ ಅಂಗಾಂಗ,ರಕ್ತ ದಾನ ಮಾಡಬೇಕೆಂದರು.
    ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ,ಯುವಕರು ದುಶ್ಚಟಗಳಿಂದ ದೂರವಿರಬೇಕೆಂದರು. ಬಾಪೂಜಿ ಶಿಕ್ಷಣ ಮಹಾ ವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ವೀರೇಶ್,ಪ್ರಾಚಾರ‌್ಯ ಎಂ.ಆರ್.ಜಯಲಕ್ಷ್ಮೀ,ಉಪ ಪ್ರಾಚಾರ‌್ಯ ಎಚ್.ಎನ್.ಶಿವಕುಮಾರ್ ಮಾತ ನಾಡಿದರು. ಉಪನ್ಯಾಸಕರಾದ ಒ.ಎಂ.ಮಂಜುನಾಥ್,ಎಸ್.ಮಂಜಪ್ಪ,ಟಿ.ವೈ.ಗೀತಾ ಸ್ಪೂರ್ತಿ ಮತ್ತಿತರರು ಇದ್ದರು.
    (ಸಿಟಿಡಿ 21 ರೆಡ್‌ಕ್ರಾಸ್)
    ವಿಶ್ವರೆಡ್ ಕ್ರಾಸ್ ಅಂಗವಾಗಿ ಚಿತ್ರದುರ್ಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ‌್ಯಕ್ರಮದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್,ಬಿ.ಮೂಗಪ್ಪ,ಕೆ.ಎಂ.ವೀರೇಶ್,ಎಂ.ಆರ್.ಜಯಲಕ್ಷ್ಮೀ,ಎಚ್.ಎನ್.ಶಿವಕುಮಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts